ನರಸಿಂಹರಾಜಪುರ ವಿವಿಧ ಅಭಿವೃದ್ಧಿಗೆ 10 ಕೋಟಿ ರು. ಮಂಜೂರು: ಎಂ.ಶ್ರೀನಿವಾಸ್

KannadaprabhaNewsNetwork | Published : Feb 8, 2024 1:31 AM

ಸಾರಾಂಶ

ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ 10 ಕೋಟಿ ರುಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ 10 ಕೋಟಿ ರುಪಾಯಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್‌ ತಿಳಿಸಿದರು.

ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಾಸಿ ಮಂದಿರ ನವೀಕರಣವಾಗಬೇಕು ಹಾಗೂ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿ ಹೊಳಿ ಅವರಿಗೆ ಬೇಡಿಕೆ ಇಟ್ಟಿದ್ದೆ. ಸಚಿವರು ಒಟ್ಟು 3.50 ಕೋಟಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 50 ಲಕ್ಷ ಪ್ರವಾಸಿ ಮಂದಿರ ನವೀಕರಣಕ್ಕೆ ಖರ್ಚು ಮಾಲಾಗುವುದು. ಚಿಕ್ಕಮಗಳೂರು ಜಿಲ್ಲೆಯಲ್ಲೇ ನರಸಿಂಹರಾಜಪುರ ಪ್ರವಾಸಿ ಮಂದಿರ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಇದರ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕಾಗಿದೆ. ನವೀಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್‌ ಅವರೊಂದಿಗೆ ಇಂದು ಚರ್ಚೆ ಮಾಡಿದ್ದೇನೆ ಎಂದರು. 2 ಕೋಟಿ ಹೊನ್ನೇಕೊಡಿಗೆ ಸೇತುವೆ ರಸ್ತೆ ಅಭಿವೃದ್ಧಿಗೆ ಖರ್ಚು ಮಾಡಲಾಗುವುದು. ನರಸಿಂಹರಾಜಪುರ- ಶಿವಮೊಗ್ಗ ಮುಖ್ಯ ರಸ್ತೆಯಿಂದ ಗಾಂಧಿ ಗ್ರಾಮ ರಸ್ತೆಗೆ 50 ಲಕ್ಷ, ಹೊನ್ನೇಕೊಡಿಗೆ -ಕಲ್ಮನೆ ರಸ್ತೆಗೆ 50 ಲಕ್ಷ ಖರ್ಚು ಮಾಡಲಾಗುವುದು ಎಂದರು. ವಸತಿ ಸಚಿವ ಜಮೀರ್‌ ಅಹಮ್ಮದ್‌ ಅವರೊಂದಿಗೆ ಚರ್ಚೆ ಮಾಡಿ ಅನುದಾನ ನೀಡುವಂತೆ ಕೇಳಿದ್ದೆ. ಸಚಿವರು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ 5 ಕೋಟಿ 20 ಲಕ್ಷ ಮಂಜೂರು ಮಾಡಿದ್ದಾರೆ. ಈ ಹಣದಿಂದ ಅಲ್ಪ ಸಂಖ್ಯಾತರ ರಸ್ತೆ ಅಭಿವೃದ್ದಿ, ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದರು. ವಕ್ಫ್ ಮಂಡಳಿಯಿಂದ 1 ಕೋಟಿ ಮಂಜೂರಾಗಿದ್ದು ಇದರಲ್ಲಿ ಜಾಮೀಯಾ ಮಸೀದಿ ಕಾಂಪೌಂಡು, ತಾಲೂಕಿನಲ್ಲಿ ಬರುವ ಜಾಮೀಯ ಮಸೀದಿ ಕಬರ್ ಸ್ಥಾನ ಕಾಂಪೌಂಡು ಹಾಗೂ ಈದ್ಗಾ ಮೈದಾನದ ಕಾಂಪೌಂಡು ನಿರ್ಮಾಣಕ್ಕೆ ಬಳಸಲಾಗುವುದು ಎಂದರು. ನರಸಿಂಹರಾಜಪುರದಲ್ಲಿ ಆಶ್ರಯ ನಿವೇಶನ ನೀಡದೆ 21 ವರ್ಷವಾಗಿದೆ. ಬಡವರಿಗೆ ನಿವೇಶನ ನೀಡಬೇಕು ಎಂಬುದು ನನ್ನ ಕನಸು. ನಿವೇಶನದ ಅಭಿವೃದ್ಧಿಗೆ 3.36 ಕೋಟಿ ಬಂದಿತ್ತು. ಪ್ರಸ್ತುತ ಹೆಚ್ಚುವರಿಗಾಗಿ 66 ಲಕ್ಷ ಮತ್ತೆ ಮಂಜೂರಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿ.ಆರ್‌.ಸದಾಶಿವ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಮುಖಂಡ ಸುನೀಲ್ ಇದ್ದರು. -- ಬಾಕ್ಸ್‌ --- ಪಟ್ಟಣದ ಹಳೇ ಮಂಡಗದ್ದೆ ರಸ್ತೆ ಅಗಲೀಕರಣ ಮಾಡಬೇಕು ಹಾಗೂ ಪರಿಹಾರ ನೀಡಲು 60 ಕೋಟಿ ಬೇಕಾಗಲಿದ್ದು ಇದನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ತಿಳಿಸಿದರು. ಚುನಾವಣೆ ಸಮಯದಲ್ಲೇ ಪಟ್ಟಣದ ಜನರು ರಸ್ತೆ ಅಗಲೀಕರಣ ಮಾಡಬೇಕು ಹಾಗೂ ಮಿನಿ ವಿಧಾನಸೌಧವನ್ನು ಪಟ್ಟಣದಲ್ಲೇ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಶೀಘ್ರದಲ್ಲೇ ಮುಖ್ಯಮಂತ್ರಿ ಅನುಮೋದನೆ ನೀಡಲಿದ್ದಾರೆ.ಈಗ ಪಟ್ಟಣದಿಂದ ಹೊರ ವಲಯದಲ್ಲಿ ಕಟ್ಟಿರುವ ಮಿನಿ ವಿಧಾನ ಸೌಧ ಶಿಥಿಲಾವಸ್ಥೆಗೆ ತಲುಪಿದೆ. ಜೊತೆಗೆ ಮಿನಿ ವಿಧಾನ ಸೌಧದ ಜಾಗ ಅರಣ್ಯ ಇಲಾಖೆಗೆ ಸೇರಿದೆ. ಲೀಸ್‌ ಮೂಲಕ ಜಾಗ ಪಡೆಯಲಾಗಿತ್ತು. ಸಮಯ ಮುಗಿದ ನಂತರ ಜಾಗ ಬಿಟ್ಟು ಕೊಡಬೇಕಾಗುತ್ತದೆ. ಆದ್ದರಿಂದ ಪ್ರಸ್ತುತ ವಾಟರ್‌ ಟ್ಯಾಂಕ್ ಸಮೀಪದ ಅರಣ್ಯ ಇಲಾಖೆ ಇರುವ ಕಟ್ಟಡ ವನ್ನು ಮಿನಿ ವಿಧಾನಸೌಧಕ್ಕೆ ಬಿಟ್ಟುಕೊಟ್ಟು ಮಿನಿ ವಿಧಾನ ಸೌಧವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬಹುದು ಎಂದರು.

Share this article