ಇಳಕಲ್ಲ: ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಇತ್ತೀಚೆಗೆ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದ ಕುಟುಂಬಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ₹ 10 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದರು. ಘಟನೆಯಲ್ಲಿ ಗೀತಾ ಈಶ್ವರಯ್ಯ ಆದಾಪುರಮಠ ಹಾಗೂ ಆದಿತ್ಯ ಈಶ್ವರಯ್ಯ ಆದಾಪುರಮಠ ಎಂಬ ಮಕ್ಕಳು ಸಾವನ್ನಪ್ಪಿದ್ದರು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಫ್ ಮಾರ್ಗ ಸೂಚಿಯಡಿ ಪ್ರಕೃತಿ ವಿಕೋಪದಿಂದ ಮೃತಪಟ್ಟ ಪ್ರತಿ ವ್ಯಕ್ತಿಗೆ ₹ ೫ ಲಕ್ಷದಂತೆ ಇಬ್ಬರು ಮಕ್ಕಳ ಕುಟುಂಬಕ್ಕೆ ₹೧೦ ಲಕ್ಷ ಪರಿಹಾರ ನೀಡಲಾಗಿದೆ. ಈ ವೇಳೆ ತಾಲೂಕು ದಂಡಾಧಿಕಾರಿ ಸತೀಶ್ ಕೂಡಲಗಿ, ಮುಖಂಡರಾದ ವಿಜಯಮಹಾಂತೇಶ ಗದ್ದನಕೇರಿ, ಗ್ರಾಮ ಆಡಳಿತ ಅಧಿಕಾರಿ ಯಮನೂರ ವಡ್ಡರ, ನವೀನ್ ಬಲಕುಂದಿ, ವಜ್ಜಲ ಉಪಸ್ಥಿತರಿದ್ದರು.