ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾರ್ಥಿಗಳು ಇಂತಹ ತರಬೇತಿ ಪಡೆಯುವ ಜೊತೆಗೆ ಮೊಬೈಲ್, ಟಿವಿ ಗಿಳಿನಿಂದ ದೂರವಿದ್ದು, ದಿನನಿತ್ಯ ಚೆನ್ನಾಗಿ ಓದಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆಯಾಗಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜದ ಸೇವೆ ಮಾಡಬೇಕು. ರಾಜ್ಯದಲ್ಲಿ ಐಎಎಸ್, ಐಪಿಎಸ್ ಮಾಡುವವರ ಸಂಖ್ಯೆ ವಿರಳ. ಆಗಾಗಿ ತರಬೇತಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆಲ್ಲ ಶುಭವಾಗಲಿ ಎಂದು ಆಶಿಸಿದರು.ಕಲಿಕೆ ಗರಿಷ್ಠಮಟ್ಟದಲ್ಲಿದ್ದಾಗ ಸಾಧನೆ ಸಿಗುತ್ತದೆ:
ಸನ್ಮಾನ ಸ್ವೀಕರಿಸಿದ ನಿವೃತ್ತ ಉಪಪ್ರಾಂಶುಪಾಲ ಶಿವಣ್ಣ ಮಾತನಾಡಿ, ನಾವು ಓದುತ್ತಿರುವ ಸಂದರ್ಭದಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದರೆ ಸರ್ಕಾರಿ ನೌಕರಿ ಸಿಗುತ್ತಿತ್ತು ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಇಲ್ಲದೇ ಯಾವುದು ಇಲ್ಲ. ಒಂದು ಹುದ್ದೆಗೆ ಅವಕಾಶ ಇದೆ ಎಂದರೆ ಸಾವಿರಾರು ಜನರು ಅರ್ಜಿ ಹಾಕಿರುತ್ತಾರೆ.ಪ್ರಥಮದರ್ಜೆಯಲ್ಲಿ ತೇರ್ಗಡೆಯಾದರು ನೌಕರಿಗೆ ಸಿಗಲ್ಲ ಶೇ. ೯೫ % ಮೇಲೆ ಅಂಕಪಡೆಯಬೇಕಿದೆ. ಆಗಾಗಿ ವಿದ್ಯಾರ್ಥಿಗಳು ಕಲಿಕೆ ಗರಿಷ್ಠ ಮಟ್ಟದಲ್ಲಿ ಗಳಿಸಿದಾಗ ಮಾತ್ರ ಪ್ರಗತಿ ಸಾಧ್ಯ. ದಿನನಿತ್ಯ ಓದಬೇಕು. ಅಲಿಸಿ ಅರ್ಥೈಯಿಸಿಕೊಳ್ಳಬೇಕು. ಕಲಿಕೆ ಪ್ರಗತಿ ಉತ್ತುಂಗಕ್ಕೇರಿಸಿಕೊಳ್ಳಬೇಕು. ಈ ತರಬೇತಿ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಅಲ್ಲದೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿದೆ ಎಂದರು. ಕೆವಿಎಸ್ ಜಿಲ್ಲಾಧ್ಯಕ್ಷ ವಾಸುಹೊಂಡರಬಾಳು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಅಧಿಕಾರಿಯಾಗಿ ರಾಜ್ಯ, ಜಿಲ್ಲೆಯಲ್ಲಿ ಸೇವೆ ಸಲ್ಲಿಸಲಿ ಎನ್ನುವುದು ನಮ್ಮ ಸಂಘದ ಆಶಯವಾಗಿದೆ. ಜಿಲ್ಲೆ ವಿದ್ಯಾರ್ಥಿಗಳು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಒಳ್ಳೆಯ ಹುದ್ದೆಗಳನ್ನ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ಅಯೋಜಿಸಲಾಗಿದೆ ಎಂದರು. ಮೈಸೂರು ವಿದ್ವತ್ ಐಎಎಸ್ ಮತ್ತು ಕೆಎಎಸ್ ಅಕಾಡೆಮಿ ಮಾರ್ಗದರ್ಶಕ ರಶ್ಮಿ ಹಲ್ಲೂರು, ಸಂಯೋಜಕ, ಪ್ರಾಧ್ಯಾಪಕ ವಿ,ಪ್ರಜ್ವಲ್ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಮಾಹಿತಿ ನೀಡಿದರು. ಕೆವಿಎಸ್ ಜಿಲ್ಲಾ ಸಂಯೋಜಕ ಮಹೇಶ್ ಇರಸವಾಡಿ ಅಧ್ಯಕ್ಷತೆ ವಹಿಸಿದ್ದರು. ಬಿವಿಎಫ್ ಜಿಲ್ಲಾ ಸಂಯೋಜಕ ರವಿಮೌರ್ಯ, ಉಪನ್ಯಾಸಕ ಡಾ.ಕುಮಾರ್ ಚಿಕ್ಕಹೊಳೆ, ಶಿವಣ್ಣದೇವಲಾಪುರ, ರಾಜೇಂದ್ರ, ಬಾಬು, ಅಮಚವಾಡಿ ಕಾಂತರಾಜು, ಮನುಕಲಾವಿದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.