ದರ್ಗಾದ ಹೆರಿಗೆ, ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ₹10 ಲಕ್ಷ ಅನುದಾನ: ರಾಜಶೇಖರ ಹಿಟ್ನಾಳ

KannadaprabhaNewsNetwork |  
Published : Oct 26, 2024, 12:53 AM IST
25ಕೆಪಿಎಲ್28 ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾ ಆವರಣದಲ್ಲಿ ಶುಕ್ರವಾರ ದರ್ಗಾದ ವತಿಯಿಂದ ನೂತನವಾಗಿ ನಿರ್ಮಾಣ ಗೊಳ್ಳುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ | Kannada Prabha

ಸಾರಾಂಶ

ಕೊಪ್ಪಳ ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾ ಆವರಣದಲ್ಲಿ ಶುಕ್ರವಾರ ದರ್ಗಾದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡಕ್ಕೆ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಶಂಕುಸ್ಥಾಪನೆ ನೆರವೇರಿಸಿದರು.

ಕೊಪ್ಪಳ: ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ₹10 ಲಕ್ಷ ಅನುದಾನ ನೀಡುವುದಾಗಿ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಹೇಳಿದ್ದಾರೆ.

ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾ ಆವರಣದಲ್ಲಿ ಶುಕ್ರವಾರ ದರ್ಗಾದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿ ಪರ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹಿರಿಯ ವಕೀಲ ಎಸ್. ಆಸಿಫ್ ಅಲಿ ಮಾತನಾಡಿ, ದರ್ಗಾ ಕಮಿಟಿಯ ಪದಾಧಿಕಾರಿಗಳು ಉತ್ತಮ ಅಭಿವೃದ್ಧಿಪರ ಕೆಲಸ ಮಾಡಿರುವುದು ಸಂತಸದ ವಿಷಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಸ್ಲಿಂ ಧರ್ಮ ಗುರು ಹಾಗೂ ಯುಸೂಫಿಯ ಮಸೀದಿ ಖತೀಬ್ ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ಮಾತನಾಡಿ, ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಶ್ರಮಿಸಬೇಕು ಎಂದರು.

ದರ್ಗಾ ಕಮಿಟಿಯ ಅಧ್ಯಕ್ಷ ಮೌಲಾ ಹುಸೇನ್ ಜಮೆದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಕೀಲ ಅಬ್ದುಲ್ ಅಜಿಜ್ ಚೌಧಾಯಿ, ನಿವೃತ್ತ ಉಪ ತಹಸೀಲ್ದಾರ್ ಲಾಯಕ್ ಅಲಿ, ಸಮಾಜದ ಮುಖಂಡರಾದ ಇಬ್ರಾಹಿಂ ಸಾಬ್ ಅಡ್ಡವಾಲೆ, ಹಿರಿಯ ವಕೀಲ ಪೀರಾ ಹುಸೇನ್ ಹೊಸಳ್ಳಿ, ಹುಸೇನ್ ಪೀರ ಚಿಕನ್ ಮಾನ್ವಿ ಪಾಷಾ ಸಿರಾಜ್ ಕೋಲ್ಕಾರ್ ಕರೀಂ ಸಾಬ್ ಗಚ್ಚಿನಮನಿ, ಸೈಯದ್ ರಹಮತ್ ಹುಸೇನಿ, ಆಯುಬ್ ಸಾಬ್ ಅಡ್ಡೆವಾಲೆ, ನಗರಸಭಾ ಸದಸ್ಯ ಅಜೀಮ್ ಅತ್ತಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ವಕೀಲ ಗೈಬು ಸಾಬ್ ಚಟ್ನಿ, ಯುವ ನಾಯಕರಾದ ಸಲೀಂ ಮಂಡಲಗಿರಿ, ಮೆಹಬಮೂದ ಹುಸೇನಿ ಬಲ್ಲೆ ಶಾಬುದ್ದೀನ್ ಸಾಬ್ ನೂರ್ ಬಾಷಾ ಸೈಯದ್ ನಾಸಿರುದೀ ನ್ ಹುಸೇನಿ, ಖಾದರ್ ಸಾಬ್ ಕುದುರೆಮೋತಿ, ಸಿಎಂ ಮುಸ್ತಫಾ ಹುಂಚಿ ಗಿಡ, ಮೊಹಮ್ಮದ್ ಸಾಬ್ ಕಳ್ಳಿಮನಿ, ಸಮದ್ ಸಿದ್ದಿಕಿ, ಅಬ್ಬಾಸ್ ಅಲಿ ಖಾಜಿ, ಆರ್.ಎಂ. ರಫಿ, ಗಫಾರ್ ಸಾಬ್ ದೀಡಿ, ಅಂಜುಮನ್ ಕಮಿಟಿ ಅಧ್ಯಕ್ಷ ಆಸಿಫ್ ಕರ್ಕಿಹಳ್ಳಿ, ಯಜದಾನಿ ಪಾಷಾ ಖಾದರಿ, ಅಕ್ತರ್ ಫಾರೂಕಿ ಪಾಲ್ಗೊಂಡಿದ್ದರು. ಹಾಫಿಜ್ ಮುಹಿಯುದ್ದೀನ್ ಕುರಾನ್ ಪಠಣ ಮಾಡಿದರು. ಸಮಾಜದ ಯುವ ನಾಯಕ ಸಲೀಂ ಅಳವಂಡಿ ಕಾರ್ಯಕ್ರಮ ನಿರೂಪಿಸಿದರು. ದರ್ಗಾ ಕಮಿಟಿಯ ಕಾರ್ಯದರ್ಶಿ ಅಬ್ದುಲ್ ಗನಿ ಸ್ವಾಗತಿಸಿದರು. ಖಾಜಾವಲಿ ಬನಿಕೊಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!