ಕನ್ನಡಪ್ರಭ ವಾರ್ತೆ ರಾಯಚೂರು
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಹಿರಿಯ ನಾಗರೀಕರಿಗೆ ಕಾನೂನು ಅರಿವು ಹಾಗೂ ಭ್ರಷ್ಟಾಚಾರದ ವಿರುದ್ಧ ಅರಿವು ಕಾರ್ಯಕ್ರಮ ಮತ್ತು ಹಿರಿಯ ನಾಗರೀಕರಿಗೆ ವಿವಿಧ ಸೌಲಭ್ಯ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಸಮಾಜದಲ್ಲಿ ಚಿಕ್ಕವರಿದ್ದಾಗಿನಿಂದ ಬೆಳೆದು ದೊಡ್ಡವರಾಗಿ ತಮ್ಮ ಜೀವನವನ್ನು ಕಾಯ್ದುಕೊಳ್ಳುವವರೆಗೂ ಹಿರಿಯರ ಆಶ್ರಯ ಪ್ರತಿಯೊಬ್ಬ ಕಿರಿ ವಯಸ್ಸಿನ ವ್ಯಕ್ತಿಗಳಿಗೆ ಬೇಕು. ಆದರೆ, ಅದೇ ಹಿರಿಯ ನಾಗರಿಕರ ಆರೋಗ್ಯ, ಆಹಾರ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಯಿಂದ ಹಿರಿಯ ನಾಗರಿಕರು ತಮ್ಮ ಜೀವನಾವಶ್ಯಕಕ್ಕೆ ಅನುಕೂಲ ಕಲ್ಪಿಸಲು ಕೋರಿ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಆದ್ದರಿಂದ ಇದ್ದನ್ನು ತಪ್ಪಿಸಲು ಪ್ರತಿಯೊಬ್ಬರು ಹಿರಿಯರ ನೋವು ನಲಿವುಗಳಲ್ಲಿಭಾಗಿಯಾಗಬೇಕು. ಬೇಡಗಳನ್ನು ಆಲಿಸಿ ಅವರಿಗೆ ಮೂಲ ಸೌಲಭ್ಯ ಒದಗಿಸಿ ಗೌರವ ಮನೋಭಾವದಿಂದ ಕಾಣಬೇಕು ಎಂದರು.ಹಿರಿಯ ನಾಗರಿಕರು ತಮ್ಮ ಹಕ್ಕುಗಳನ್ನು ಕಾನೂನು ಬದ್ಧವಾಗಿ ಚಲಾಯಿಸಲು ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬ ಹಿರಿಯರೂ ಪಡೆದುಕೊಳ್ಳಬೇಕು ಎಂದರು.
ಹಿರಿಯ ನಾಗರಿಕರಿಗಾಗಿ ತಿಂಗಳಿಗೆ ವಿವಿಧ ಯೋಜನೆಯಡಿ 1200ರಿಂದ 1400ರೂ.ಗಳನ್ನು ನೀಡಲಾಗುತ್ತಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ನಜೀರ್ ಹಮೀದ್, ಗ್ರೇಡ್-2 ತಹಶೀಲ್ದಾರ್ ಸೈಯದ್ ಮೀರ್ ಅನ್ವರ್, ಸೇರಿದಂತೆ ತಾಲ್ಲೂಕು ಆಡಳಿತದ ಸಿಬ್ಬಂದಿಗಳು ಹಾಗೂ ಆನೇಕ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.