ಖಾದಿ ಉತ್ಪನ್ನ ತಯಾರಕರಿಗೆ ವಿಶೇಷ ಸಾಲ ಸೌಲಭ್ಯ

KannadaprabhaNewsNetwork |  
Published : Oct 26, 2024, 12:52 AM ISTUpdated : Oct 26, 2024, 12:53 AM IST
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಅಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೆವಿಐಸಿ ನಿರ್ದೇಶಕ ಮೋಹನ್ ರಾವ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿತ್ರದುರ್ಗ: ಖಾದಿ ಉತ್ಪನ್ನಗಳ ತಯಾರಿಕೆ ನಿಟ್ಟಿನಲ್ಲಿ ಕೈಗಾರಿಕೆ ಆರಂಭಿಸುವವರಿಗೆ ವಿಶೇಷ ಸಾಲಸೌಲಭ್ಯ ಕಲ್ಪಿಸಲಾಗುವುದೆಂದು ಕೆವಿಐಸಿಯ ನಿರ್ದೆಶಕ ಮೋಹನ್ ರಾವ್ ತಿಳಿಸಿದರು.

ಚಿತ್ರದುರ್ಗ: ಖಾದಿ ಉತ್ಪನ್ನಗಳ ತಯಾರಿಕೆ ನಿಟ್ಟಿನಲ್ಲಿ ಕೈಗಾರಿಕೆ ಆರಂಭಿಸುವವರಿಗೆ ವಿಶೇಷ ಸಾಲಸೌಲಭ್ಯ ಕಲ್ಪಿಸಲಾಗುವುದೆಂದು ಕೆವಿಐಸಿಯ ನಿರ್ದೆಶಕ ಮೋಹನ್ ರಾವ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಕಮಿಷನ್ ಹಾಗೂ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಅಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರು ಸ್ವಾವಲಂಬಿಗಳಾಗಲು ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದ್ದು, ಬ್ಯಾಂಕ್‍ನಿಂದ ಸಾಲ ಪಡೆದು ಸ್ವಾವಲಂಭಿಗಳಾಗಿ ಬೇರೆಯವರಿಗೂ ಉದ್ಯೋಗವನ್ನು ನೀಡುವಂತೆ ಮನವಿ ಮಾಡಿದರು.1925ರಲ್ಲಿ ಖಾದಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈಗ ಸಾರ್ವಜನಿಕರಿಗೆ ಉತ್ತಮ ಖಾದಿ ವಸ್ತ್ರಗಳನ್ನು ಕೈಯಿಂದ ತಯಾರಿಸಿ ನೀಡಲಾಗುತ್ತಿದೆ. ಇದರಲ್ಲಿ ಹಲವಾರು ಜನತೆ ಯಂತ್ರದಿಂದ ತಯಾರಿಸಿದ ಖಾದಿ ಬಳಸುತ್ತಿದ್ದಾರೆ. ಆದರೆ ಇದು ಉತ್ತಮವಾದ ಖಾದಿ ಅಲ್ಲ. ಕೈಯಿಂದ ತಯಾರಿಸಿದ ಖಾದಿಯೇ ಉತ್ತಮವಾಗಿದೆ. ಬೇಸಿಗೆಯಲ್ಲಿ ತಂಪಾಗಿ ಚಳಿಗಾಲದಲ್ಲಿ ಬೆಚ್ಚಗೆ ದೇಹವನ್ನು ಇಡುತ್ತದೆ. ಅಕ್ಬೋಬರ್ ನಲ್ಲಿ ಖಾದಿ ಉತ್ಪನ್ನಗಳಿಗೆ ರಿಯಾಯಿತಿ ಸೌಲಭ್ಯ ಇದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಸುಮಾರು 250 ಖಾದಿ ತಯಾರಿಕೆ ಕೇಂದ್ರಗಳಿವೆ, ಚಿತ್ರದುರ್ಗದಲ್ಲಿಯೂ ಉತ್ತಮ ಖಾದಿ ತಯಾರಿಕಾ ಘಟಕಗಳು ಇವೆ. ಖಾದಿ ತಯಾರಿಕಾ ಘಟಕಗಳನ್ನು ಪ್ರಾರಂಭ ಮಾಡುವವರಿಗೆ ವಿವಿಧ ರೀತಿಯ ಹಣಕಾಸು, ಮಾರಾಟ ವ್ಯವಸ್ಥೆ, ತರಬೇತಿ, ಪ್ರಮಾಣ ಪತ್ರದ ಸೌಲಭ್ಯ ಹಾಗೂ ಸಹಾಯ ಇಲಾಖೆ ವತಿಯಿಂದ ದೊರಕಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಾಣವಾಗುವ ಗುಡಿ ಕೈಗಾರಿಕೆಗಳಿಗೆ ಸಹಾಯಧನ ಸಿಗಲಿದೆ. ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣ ಮಾಡುವ ಗುಡಿ ಕೈಗಾರಿಕೆಗಳಿಗೆ ಸರ್ಕಾರದ ಬಿಪಿಎಲ್ ಕಾರ್ಡ್‌ ಇದ್ದವರಿಗೆ ಉಚಿತವಾಗಿ ಯಂತ್ರಗಳು ಸಿಗಲಿದೆ. ಎಪಿಎಲ್ ಕಾರ್ಡ್‌ ಇದ್ದವರು ಶೇ.10 ರಷ್ಟು ಹಣವನ್ನು ಪಾವತಿಸುವುದರ ಮೂಲಕ ಯಂತ್ರಗಳನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೆಶಕ ನಾಗರಾಜ್ ಮಾತನಾಡಿ, ನಿರ್ಮಾಣ ಮಾಡುವ ಕೈಗಾರಿಕೆಗಳ ಬಗ್ಗೆ ಪೂರ್ಣ ಮಾಹಿತಿ ತಿಳಿಯುವುದರ ಮೂಲಕ ನಂತರ ಕೈಗಾರಿಕೆ ಪ್ರಾರಂಭ ಮಾಡಿ, ಇದೇ ರೀತಿ ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವುದರ ಮೂಲಕ ಬೇರೆಯವರಿಗೆ ಸಹಾಯ ಮಾಡಿ, ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಿ ಎಂದು ಹೇಳಿದರು.

ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‍ನ ಹಿರಿಯ ವ್ಯವಸ್ಥಾಪಕಿ ಕಾವ್ಯ ಮಾತನಾಡಿದರು. ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಸಮಾಜ ಸೇವಕಿ ಕೊಲ್ಲಿಲಕ್ಷ್ಮೀ, ದಿವ್ಯಶ್ರೀ, ಜಾನಪದ ಸಂಘದ ಅಧ್ಯಕ್ಷ ಪ್ಯಾರಿಜಾನ್ ಹಾಗೂ ಮರಾಠ ಇದ್ದರು.

PREV

Recommended Stories

ಅನನ್ಯಾ ಭಟ್‌ ಅರವಿಂದ್‌-ವಿಮಲಾ ಪುತ್ರಿ, ಕೊ* ಆಗಿದ್ದು ನಿಜ: ಸುಜಾತಾ
ಬುಕರ್‌ ವಿಜೇತ ಬಾನುರಿಂದ ದಸರಾ ಉದ್ಘಾಟನೆ: ಸಿಎಂ