24 ಸ್ಥಾನಗಳಿಗೆ ಅವಿರೋಧ ಆಯ್ಕೆ, ಘೋಷಣೆ ಬಾಕಿ

KannadaprabhaNewsNetwork | Updated : Oct 26 2024, 12:53 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಇಂಡಿ ತಾಲೂಕು ಶಾಖೆಯ 2024-29ನೇ ಅವಧಿಗೆ ಅ.28 ರಂದು ನಡೆಯುವ ಚುನಾವಣೆಯಲ್ಲಿ 24 ನಿರ್ದೇಶಕ ಸ್ಥಾನಗಳಿಗೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಲಿದ್ದು, ಘೋಷಣೆಯೊಂದು ಬಾಕಿ ಇದೆ.

ಕನ್ನಡಪ್ರಭ ವಾರ್ತೆ ಇಂಡಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಇಂಡಿ ತಾಲೂಕು ಶಾಖೆಯ 2024-29ನೇ ಅವಧಿಗೆ ಅ.28 ರಂದು ನಡೆಯುವ ಚುನಾವಣೆಯಲ್ಲಿ 24 ನಿರ್ದೇಶಕ ಸ್ಥಾನಗಳಿಗೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಲಿದ್ದು, ಘೋಷಣೆಯೊಂದು ಬಾಕಿ ಇದೆ.

ಒಟ್ಟು 33 ನಿರ್ದೇಶಕ ಬಲದ ಈ ಶಾಖೆಗೆ 24 ಸ್ಥಾನಗಳಿಗೆ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯಾಗಲಿದ್ದು, ಚುನಾವಣಾಧಿಕಾರಿ ಘೋಷಣೆ ಮಾಡುವುದೊಂದೇ ಬಾಕಿ ಉಳಿದೆ. ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದೇ ತಿಂಗಳು ಅ. 28 ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ 01 ಸ್ಥಾನ, ಕಂದಾಯ ಇಲಾಖೆಯ 2 ಸ್ಥಾನಗಳು, ಕೃಷಿ ಇಲಾಖೆಯ 01, ಲೋಕೋಪಯೋಗಿ ಇಲಾಖೆಯ 01, ಸಣ್ಣ ನೀರಾವರಿ ಇಲಾಖೆಯ 01, ರೇಷ್ಮೆ ಇಲಾಖೆ 01, ತಾಲೂಕು ಪಂಚಾಯತಿ 02, ಸಮಾಜ ಕಲ್ಯಾಣ 01, ಬಿಸಿಎಂ 01, ಪಶು ನಿರ್ದೇಶಕರ ಕಾರ್ಯಾಲಯ 01, ಆರೋಗ್ಯ ಇಲಾಖೆ 04, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ 01, ಅಬಕಾರಿ 01, ಬಿಇಒ ಕಚೇರಿ 01, ಟ್ರಜರ್‌ 01, ಸಹಕಾರಿ ಸಂಘಗಳ ನೋಂದಣಿ ಇಲಾಖೆ 01, ಭೂಮಾಪನ ಇಲಾಖೆ 01, ಪಿಯು ಕಾಲೇಜು 01, ಅರಣ್ಯ ಇಲಾಖೆ 01 ಹೀಗೆ 24 ನಿರ್ದೇಶಕ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಘೊಷಣೆಯಲ್ಲಿ ಉಳಿದಿವೆ. ಚುನಾವಣೆ ನಡೆಯುವ ಸ್ಥಾನಗಳು: ಪ್ರಾಥಮಿಕ ಶಾಲಾ 05 ಸ್ಥಾನಗಳಿಗೆ 13 ಜನ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರೇ ಪ್ರೌಢಶಾಲಾ ನಿರ್ದೇಶಕ ಸ್ಥಾನ 2 ಇದ್ದು, 4 ಜನರು ಕಣದಲ್ಲಿ ಉಳಿದಿದ್ದಾರೆ. ನ್ಯಾಯಾಂಗ ಇಲಾಖೆಯ 01 ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 01 ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದು, ಅ.28 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಮತದಾನ ಮುಗಿದ ಮೇಲೆ ಅಂದೇ ಮತ ಏಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಅಂಬಣ್ಣ ಸುಣಗಾರ ತಿಳಿಸಿದ್ದಾರೆ.ಬಿರುಸಿನ ಪ್ರಚಾರ:

9 ಸ್ಥಾನಗಳಿಗೆ ನಡೆದ ಚುನಾವಣೆಗೆ ಆಯ್ಕೆ ಬಯಸಿ ಕಣದಲ್ಲಿ ಉಳಿದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮತಗಳನ್ನು ಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ. ಇಲಾಖೆಯ ಅಧಿಕಾರಿ, ಸಿಬ್ಬಂದಿ ಚುನಾವಣಾ ಕಣದಲ್ಲಿ ಉಳಿದಿರುವುದರಿಂದ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಇಲಾಖೆಯ ಮತದಾರರು ತೀಮಾನಿಸಿ, ಮೌನ ವಹಿಸಿದ್ದಾರೆ. ಮತಗಳನ್ನು ಸೆಳೆಯಲು ಮತದಾರರು ಯಾರಿಗೆ ಪರಿಚಯ ಇದ್ದಾರೋ ಅವರಿಂದ ಒತ್ತಡ ಹಾಕಿಸುವ ಕೆಲಸವೂ ನಡೆದಿದೆ.ಕೊನೆಯ ಗಳಿಗೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಕಾದು ನೋಡಬೇಕು.

Share this article