ಲೀಗ್ ಮಾದರಿಯಲ್ಲಿ ನಿತ್ಯವೂ 10 ಪಂದ್ಯ: ದಿನೇಶ್‌

KannadaprabhaNewsNetwork |  
Published : Mar 01, 2025, 01:04 AM IST
28ಕೆಡಿವಿಜಿ9-ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ಚಾಲನೆ ನೀಡಿದ ದಿನೇಶ ಶೆಟ್ಟಿ, ಶ್ರೀನಿವಾಸ ವಿ.ಶಿವಗಂಗಾ ಇತರರು. ...............28ಕೆಡಿವಿಜಿ10-ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ ಬಾಗವಹಿಸಿದ ತಂಡಗಳ ಜೊತೆ ದಿನೇಶ ಶೆಟ್ಟಿ,  ಶ್ರೀನಿವಾಸ ವಿ.ಶಿವಗಂಗಾ ಇತರರು...................28ಕೆಡಿವಿಜಿ11, 12-ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌ನ ಪಂದ್ಯಗಳ ರೋಚಕ ಕ್ಷಣಗಳು. | Kannada Prabha

ಸಾರಾಂಶ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌-2025ಗೆ ಶುಕ್ರವಾರ ಆರಂಭವಾಯಿತು. ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಪಂದ್ಯಾವಳಿಗೆ ಚಾಲನೆ ನೀಡಿದರು.

- ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌-2025ಗೆ ಶುಕ್ರವಾರ ಆರಂಭವಾಯಿತು. ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಪಂದ್ಯಾವಳಿಗೆ ಚಾಲನೆ ನೀಡಿದರು.

ದೂಡಾ ಅಧ್ಯಕ್ಷರೂ ಆದ ದಿನೇಶ ಕೆ. ಶೆಟ್ಟಿ ಮಾತನಾಡಿ, ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ, ಸೃಷ್ಟಿ ಕಬಡ್ಡಿ ಅಕಾಡೆಮಿ ಹಾಗೂ ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಹೊನಲು-ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್-2025 ನಡೆಯಲಿದೆ ಎಂದರು.

ಲೀಗ್ ಮಾದರಿಯಲ್ಲಿ ನಿತ್ಯವೂ 10 ಪಂದ್ಯ ನಡೆಸಲಾಗುವುದು. ಒಟ್ಟು 24 ಲೀಗ್ ಪಂದ್ಯ, ಲೀಗ್‌ನಲ್ಲಿ ಟಾಪ್ 4 ಮಾದರಿ ಪಂದ್ಯ ನಡೆಯಲಿದೆ. ಕಬಡ್ಡಿ ನಮ್ಮ ಊರಿನಲ್ಲಿ ಜನಪ್ರಿಯ ಕ್ರೀಡೆಯಾಗಿದೆ. ಈ ಹಿನ್ನೆಲೆ ಪಂದ್ಯಾವಳಿ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀ ಜಯದೇವ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಕಬಡ್ಡಿ ಪಟುಗಳು, ಪ್ರೋತ್ಸಾಹಕರು, ಅಭಿಮಾನಿಗಳ ಮೆರವಣಿಗೆ ನಡೆದಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಕಬಡ್ಡಿ ಪಂದ್ಯಾವಳಿಯಲ್ಲಿ ಮೊದಲ ಬಹುಮಾನ ₹2 ಲಕ್ಷ ನಗದು, ದ್ವಿತೀಯ ಬಹುಮಾನ 1 ಲಕ್ಷ, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ತಲಾ ₹25 ಸಾವಿರ ನಗದು ಬಹುಮಾನ ನೀಡಲಾಗುವುದು. ದಾವಣಗೆರೆಯಲ್ಲಿ ಮತ್ತೆ ಕಬಡ್ಡಿ ಪಂದ್ಯಾವಳಿ ಮೂಲಕ ವಿದ್ಯಾರ್ಥಿ, ಯುವಜನರಲ್ಲಿ ದೇಸಿ ಕ್ರೀಡೆ ಒಲವು, ಆಸಕ್ತಿ ಬೆಳೆಸಲು ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷ ಶ್ರೀನಿವಾಸ ವಿ. ಶಿವಗಂಗಾ, ಕಾರ್ಯದರ್ಶಿ ಜಯಪ್ರಕಾಶ ಗೌಡ, ಸಹ ಕಾರ್ಯದರ್ಶಿ ಕುರುಡಿ ಗಿರೀಶ ಸ್ವಾಮಿ, ಕಬಡ್ಡಿ ಸಂಸ್ಥೆಗಳ ಎಂ.ದೊಡ್ಡಪ್ಪ, ಎಂ.ನಾಗರಾಜ ಸೃಷ್ಟಿ, ಕಬಡ್ಡಿ ಮಲ್ಲು (ಮಲ್ಲಿಕಾರ್ಜುನ), ಎಚ್.ಚಂದ್ರಪ್ಪ, ಲಯನ್ಸ್ ಕ್ಲಬ್‌ನ ಉಳುವಯ್ಯ, ಪಾಲಿಕೆ ಮಾಜಿ ಸದಸ್ಯರಾದ ಎ.ನಾಗರಾಜ, ಪ್ರಭು, ರಾಕೇಶ, ಯುವರಾಜ, ಶ್ರೀಕಾಂತ ಬಗರೆ, ಎ.ವೈ.ಶಿವು ಕಬಡ್ಡಿ, ಪ್ರಾಂಚೈಸಿಗಳಾದ ಮುಸ್ತಫಾ, ಮಂಜು, ರಘು, ಸೂರ್ಯಪ್ರಕಾಶ ಇತರರು ಇದ್ದರು.

- - - -28ಕೆಡಿವಿಜಿ9.ಜೆಪಿಜಿ: ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ದಿನೇಶ ಶೆಟ್ಟಿ ಚಾಲನೆ ನೀಡಿದರು. ಶ್ರೀನಿವಾಸ ವಿ. ಶಿವಗಂಗಾ ಮತ್ತಿತರ ಗಣ್ಯರು ಇದ್ದರು. -28ಕೆಡಿವಿಜಿ11: ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ ಗೆಲುವಿಗಾಗಿ ಕ್ರೀಡಾಪಟುಗಳು ಭಾರೀ ಸೆಣೆಸಾಟ ನಡೆಸಿದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ