ಐಸಿಎಸ್ಇ ಫಲಿತಾಂಶ ಪ್ರಕಟ । ಎಲ್.ಎನ್.ಅಮೃತಾ ಶೇ.98 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ
2025-26ನೇ ಸಾಲಿನ ಐಸಿಎಸ್ಇ ( ಸಿಐಎಸ್ ಸಿಇ)ಯಲ್ಲಿ ಕಡೂರು ಪಟ್ಟಣದ ಪ್ರಜ್ಞಾ ಸೆಂಟ್ರಲ್ ಸ್ಕೂಲ್ ಸತತ 11ನೇ ವರ್ಷದಲ್ಲಿ ಶೇ.100 ಫಲಿತಾಂಶ ಪಡೆದಿದ್ದು, ವಿದ್ಯಾರ್ಥಿನಿ ಎಲ್.ಎನ್.ಅಮೃತಾ ಶೇ.98 ಅಂಕಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಟಾಪರ್ ಆಗಿದ್ದಾರೆ ಎಂದು ಶಾಲೆಯ ಪ್ರಧಾನ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2008 ರಲ್ಲಿ ಪ್ರಜ್ಞಾ ಸೆಂಟ್ರಲ್ ಶಾಲೆ ಆರಂಭಗೊಂಡು 2015-16ರಲ್ಲಿ 10ನೇ ತರಗತಿಯ ಮೊದಲ ಬ್ಯಾಚ್ ಅತ್ಯುತ್ತಮ ಫಲಿತಾಂಶದ ತರುವ ಜೊತೆ ಅದರ ಸರಣಿ ಸತತ 11ನೇ ವರ್ಷದಲ್ಲೂ ಮುಂದುವರಿದಿದೆ. ಈ ಬಾರಿ ಶಾಲೆಯ 72 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದ 41 ವಿದ್ಯಾರ್ಥಿಗಳೂ ಪ್ರಥಮ ಶ್ರೇಣಿ ಪಡೆದಿದ್ದಾರೆ. ಇದಕ್ಕಾಗಿ ಶ್ರಮಿಸಿದ ವಿದ್ಯಾರ್ಥಿಗಳು, ಬೋಧಕರು, ಸಹಕರಿಸಿದ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.ಶಾಲೆಯ 10 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಬಾಲಕಿ ತಾಲೂಕಿನ ಲಿಂಗ್ಲಾ ಪುರದ ಎಲ್.ಪಿ.ನಾಗರಾಜ್ ಮತ್ತು ಆರ್ ಭಾಗ್ಯ ದಂಪತಿ ಪುತ್ರಿ ಎಲ್.ಎನ್.ಅಮೃತಾ ಶೇ.98 ಅಂಕ ಗಳಿಸಿ ಶಾಲೆ ಮತ್ತು ಜಿಲ್ಲೆಗೆ ಅಗ್ರಸ್ಥಾನ ಪಡೆದು ಗೌರವ ಹೆಚ್ಚಿಸಿದ್ದಾರೆ. ರೋನಿತ್ ಡಿ.ರಘು ಶೇ.94.40 ಅಂಕಗಳೊಡನೆ ದ್ವಿತೀಯ ಸ್ಥಾನ, ದುಷ್ಯಂತ್ ನಾಯ್ಕ್ ಮತ್ತು ಮಂಜುನಾಥ್ ಎಂ.ಸಿ. ಹಾಗೂ ಸೂರ್ಯತೇಜ ಬಿ.ಎಂ.ಶೇ.93.80 ಅಂಕಗಳೊಡನೆ ಜಂಟಿಯಾಗಿ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ದಕ್ಷತಾ ಬಿ.ಅಭೀಜ್ಞ ಮತ್ತು ದಿಶಾ ಡಿ.ಹೊಳ್ಳ ಶೇ.93.40, ರುಚಿತಾ ಬಿ.ವಿ ಮತ್ತು ಸ್ಫೂರ್ತಿ ಪಿ. ಶೇ.92.40, ಶುಭಾ ಟಿ.ಯು. 91.40, ಸಾತ್ವಿಕ್ ಎಸ್. ಮೇಲಪ್ಪನವರ್ 90.80 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆಯಲು ಶಾಲಾ ಆಡಳಿತ ಮಂಡಳಿ ವಿಶೇಷ ಶ್ರಮ ವಹಿಸಿ ರಾತ್ರಿ ವೇಳೆಯೂ ವಿಶೇಷ ತರಗತಿ ನಡೆಸಲು ಅವಕಾಶ ಮಾಡಿ ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಶಿಕ್ಷಕ ವೃಂದಕ್ಕೆಅಭಿನಂದಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್.ರಾಜಣ್ಣ, ಉಪಾಧ್ಯಕ್ಷ ಡಿ.ಪ್ರಶಾಂತ್, ಖಜಾಂಚಿ ಡಾ.ಬಿ.ಎಂ. ಶಿವಕುಮಾರ್, ನಿರ್ದೇಶಕ ನವೀನ್ ಡಿ.ಅಲ್ಮೆಡಾ, ಮುಖ್ಯಶಿಕ್ಷಕಿ ಶಿಲ್ಪಾ ಡಿ, ಮತ್ತಿತರರು ಇದ್ದರು.30ಕೆಕೆಡಿಯು1. ಎಲ್.ಎನ್.ಅಮೃತಾ ಶೇ.9830ಕೆಕೆಡಿಯು.ರೋನಿತ್ ಡಿ.ರಘು ಶೇ.94.4030ಕೆಕೆಡಿಯು. ಆರ್ದುಷ್ಯಂತ್ ನಾಯ್ಕ್ 93.8030ಕೆಕೆಡಿಯು.ಆರ್ಸೂರ್ಯತೇಜ 93.8030ಕೆಕೆಡಿಯು. ದಕ್ಷತಾ ಬಿ.ಅಭೀಜ್ಞ ಶೇ.93.40 30ಕೆಕೆಡಿಯು. ದಿಶಾ ಡಿ.ಹೊಳ್ಳ ಶೇ.93.4030ಕೆಕೆಡಿಯು. ರುಚಿತಾ ಬಿ.ವಿ ಶೇ.92.4030ಕೆಕೆಡಿಯು. ಸ್ಫೂರ್ತಿ ಪಿ. ಶೇ.92.4030ಕೆಕೆಡಿಯು. ಶುಭಾ ಟಿ.ಯು.91.4030ಕೆಕೆಡಿಯು. 10 ಸಾತ್ವಿಕ್ ಎಸ್. ಮೇಲಪ್ಪನವರ್ 90.80