- ಜಿಲ್ಲೆಯಲ್ಲಿ 10 ವರ್ಷಗಳಿಂದಲೂ ಸತತವಾಗಿ ಶೇ.100 ಫಲಿತಾಂಶ - - - ಹೊನ್ನಾಳಿ: ಫಟ್ಟಣದ ಎಚ್.ಕಡದಕಟ್ಟೆ ಸಮೀಪದ ಶ್ರೀ ಸಾಯಿ ಗುರುಕುಲ ವಸತಿಯುತ ಸಿ.ಬಿ.ಎಸ್.ಇ ಶಾಲೆಗೆ ಗ್ರೇಡ್ 10 ನೇ ತರಗತಿಯಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಸಂಸ್ಥೆ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ಹೇಳಿದರು.
2023- 2024ನೇ ಸಾಲಿನ ಗ್ರೇಡ್ 10ನೇ ತರಗತಿಯ ಪರೀಕ್ಷೆಗೆ 46 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅವರಲ್ಲಿ 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 20 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 14 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾಗಿದ್ದಾರೆ.
ಎಂ.ಆರ್. ಶ್ರೇಯಾ 500 ಅಂಕಗಳಿಗೆ 471 ಅಂಕಗಳನ್ನು ಪಡೆದು (ಶೇ.94.2) ಪ್ರಥಮ ಸ್ಥಾನ, ಎಂ.ಮೇಘರಾಜ್ 500 ಅಂಕಗಳಿಗೆ 462 ಅಂಕಗಳನ್ನು ಪಡೆದು (ಶೇ.92.4) ದ್ವಿತೀಯ ಸ್ಥಾನ, ಎಂ.ಜಿ. ತನುಶ್ರೀ 500 ಅಂಕಗಳಿಗೆ 457 ಅಂಕಗಳನ್ನು ಪಡೆದು (ಶೇ.91.4) ತೃತೀಯ ಸ್ಥಾನ ಪಡೆದಿದ್ದಾರೆ.ಸಿಬಿಎಸ್ಇ ವಿಭಾಗದಲ್ಲಿ ಗ್ರೇಡ್ 10ನೇ ತರಗತಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆ ಅಧ್ಯಕ್ಷ ಶಾಸಕ ಡಿ.ಜಿ. ಶಾಂತನಗೌಡ, ಖಜಾಂಚಿ ಡಿ.ಎಸ್. ಸೋಮಪ್ಪ, ಉಪಾಧ್ಯಕ್ಷರಾದ ಡಿ.ಎಚ್. ಶಂಕ್ರಪ್ಪಗೌಡ, ನಿರ್ದೇಶಕರಾದ ವಾಣಿ ಸುರೇಂದ್ರಗೌಡ, ಡಿ.ಎಸ್. ಪ್ರದೀಪ್ ಗೌಡ, ಡಿ.ಎಸ್. ಅರುಣ್, ಎಚ್.ಬಿ. ಅರುಣ್, ಗೌರಮ್ಮ, ಜಿ.ಆರ್. ಶೀಲಾ, ಪ್ರಾಂಶುಪಾಲರಾದ ಎಚ್.ಎಂ. ದರ್ಶನ್, ಶಿಕ್ಷಣ ಸಂಯೋಜಕ ಎ.ಜಿ. ಹರೀಶ್‌ಕುಮಾರ್ ಮತ್ತು ಬೋಧಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
- - - -14ಎಚ್.ಎಲ್.ಐ2: ಎಂ.ಆರ್. ಶ್ರೇಯಾ-14ಎಚ್.ಎಲ್.ಐ2ಎ: ಎಂ.ಮೇಘರಾಜ್
-14ಎಚ್.ಎಲ್.ಐ2ಬಿ: ಎಂ.ಜಿ.ತನುಶ್ರೀ