ವಿವೇಕಾನಂದ ವಿದ್ಯಾ ನಿಕೇತನ ಶಾಲೆಗೆ ಶೇ.100 ಫಲಿತಾಂಶ

KannadaprabhaNewsNetwork |  
Published : May 10, 2024, 01:33 AM IST
ಫೋಟೋ- ವಿವೇಕಾನಂದ ಸ್ಕೂಲ | Kannada Prabha

ಸಾರಾಂಶ

ಈ ಬಾರಿಯ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶಾಲೆಗೆ 100% ಫಲಿತಾಂಶ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಬಾರಿಯ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶಾಲೆಗೆ 100% ಫಲಿತಾಂಶ ತಂದಿದ್ದಾರೆ. ಕುಮಾರಿ ಗೌರಿ ಚಂದ್ರಕಾಂತ 97.17% ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪರೀಕ್ಷೆ ಬರೆದ ಒಟ್ಟು 69 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಡಿಸ್ಟಿಕ್ಷನ್, 31 ಪ್ರಥಮ, 9 ದ್ವಿತೀಯ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಕುಮಾರಿ ಗೌರಿ ಚಂದ್ರಕಾಂತ ಗಣಿತ ಹಾಗೂ ಹಿಂದಿಯಲ್ಲಿ, ಕುಮಾರ ನಿಶಾಂತ, ಭಾಗ್ಯಶ್ರೀ ಹಾಗೂ ಸೃಷ್ಟಿ ಹಿಂದಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆಂದು ಶಾಲೆಯ ಪ್ರಿನ್ಸಿಪಾಲ ಸಿದ್ದಪ್ಪ ಭಗವತಿ ತಿಳಿಸಿದ್ದಾರೆ.ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಶಿಕ್ಷಕರು ಹಾಗೂ ಪೋಷಕರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಗೌರಿ ಚಂದ್ರಕಾಂತ 97.17, ವಿನಾಯಕ ರಾಘವೇಂದ್ 95.84, ಸೃಷ್ಟಿ ಚಂದ್ರಶೇಖ 93.76, ಆದಿತ್ಯ ಹಣಮಂ 93.12, ನಾಗಮ್ಮ ಪ್ರಭುಲಿಂಗ 92.64, ಪ್ರಸಾದ ಶರಣಪ್ 92.64, ಆದರ್ಶ ಅಶೋದ 92.16, ಮಝಮಿಲ್ ಮಶಾಕ ಶಾಬ್ 91.2, ಸಾಕ್ಷಿ ರಘುನಾಥ ರೆಡ್ಡ 90.56, ತೇಜಶ್ರೀ ಕಾಶೀನಾಥ್ 90.56, ರಾಧೆಕೃಷ್ಣ ದಿನೇಶ 90.24, ರಶ್ಮಿತಾ ನಾನಾಸಾಹೇಬ 90.24, ಮಲ್ಲಿಕಾ ನಾಗರಾಜ 90.08, ಮಹ್ಮದ್ ಆವೇಜ ಮಹ್ಮದ್ 88.16, ವಿಜಯಕುಮಾರ ದೇವಿನದರ 88.16, ಸಭಾ ಶಿರಿನ್ ರಾಜಾಬಾಕ್ಸರ್ 87.36, ರುಚಿತಶ್ರೀ ಮಲ್ಲಿಕಾರ್ಜುನ 87.2, ವಿಶಾಲ ಗೌರಿಶಂಕರ್ 87.2, ಪೂಜಾ ರೇವಣಸಿದ್ದಪ್ಪ 87.04, ಮಹೇಶ ಶಂಕರಪ್ 86.72, ಶ್ರೇಯಸ್ ಭಿಮಾಶಂಕ 86.56, ನಂದಿನಿ ಶರಣಗೌಡ 85.6, ಸ್ವಪ್ನ ಅಣವೀರಪ್ಪ 85.44, ಭಾಗ್ಯಶ್ರೀ ಗುರುರಾ 85.28, ಅಂಕಿತಾ ಭಿಮಾಶಂಕರ 85.12, ಚಾಮರಸ ಸಂಗಣ್ಣ 84.8ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?