ಬೆಳಗಾವಿ ಅಧಿವೇಶನಕ್ಕೆ 100 ವರ್ಷ: ಕಾಂಗ್ರೆಸ್‌ನಿಂದ ಗಾಂಧಿ ನಡಿಗೆ

KannadaprabhaNewsNetwork |  
Published : Oct 03, 2024, 01:25 AM IST
2ಎಚ್‌ಪಿಟಿ2- ಹೊಸಪೇಟೆಯಲ್ಲಿ ಬುಧವಾರ ವಿಜಯನಗರ ಜಿಲ್ಲಾ ಕಾಂಗ್ರೆಸ್‌ನಿಂದ ಬುಧವಾರ ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಲಾಯಿತು. | Kannada Prabha

ಸಾರಾಂಶ

ಮಹಾತ್ಮ ಗಾಂಧೀಜಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.

ಹೊಸಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧಿವೇಶನಕ್ಕೆ 100 ವರ್ಷಗಳ ಸಂಭ್ರಮ ಆಚರಣೆ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತ್ಯುತ್ಸವ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ನಿಮಿತ್ತ ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಬುಧವಾರ ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಲಾಯಿತು.

ನಗರದ ವಡಕರಾಯ ದೇವಸ್ಥಾನದಿಂದ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ವಿಜಯನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿರಾಜ್ ಶೇಕ್ ಮಾತನಾಡಿ, ಮಹಾತ್ಮ ಗಾಂಧೀಜಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಾವೆಲ್ಲರೂ ಅವರನ್ನು ಸ್ಮರಿಸಬೇಕು. ಜೊತೆಗೆ ಅವರ ಆದರ್ಶದ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ. ಹಾಲಪ್ಪ, ಕೆ. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಸೇವಾದಳ ಜಿಲ್ಲಾ ಅಧ್ಯಕ್ಷೆ ಅಮೀನಾ ಬೀ, ಭಾಗ್ಯಲಕ್ಷ್ಮಿ ಭರಾಡೆ, ಜಿಲ್ಲಾಗ್ಯಾರಂಟಿ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರಡಿ ಮಂಜುನಾಥ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ‌, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎಸ್.ದಾದಾಪೀರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಸಿ.ಖಾಜಾ ಹುಸೇನ್, ನಗರಸಭೆ ಸದಸ್ಯರಾದ ಎಂ.ಅಸ್ಲಂ ಮಾಳಗಿ, ಎಚ್. ರಾಘವೇಂದ್ರ, ವಿ.ಹುಲುಗಪ್ಪ, ಗೌಸ್, ಮುಖಂಡರಾದ ಅಜೇಯ ಕುಮಾರ್, ರಾಮಸ್ವಾಮಿ ಮಾಳಗಿ, ಪಾಲಯ್ಯ, ಮಂಜುನಾಥ, ರಾಮ, ಕನ್ನೇಶ್ವರ, ಚಾಂದ್, ಜಂಬಯ್ಯ, ತಮ್ಮನ್ನಳಪ್ಪ, ಸದ್ದಾಂ ಹುಸೇನ್, ಸಂಗಪ್ಪ, ಏಕಾಂಬ್ರೇಶ ನಾಯ್ಕ,ಯೋಗ ಲಕ್ಷ್ಮೀ, ಬಾನುಬೀ, ಟಿ.ತಾರಾಬಾಷಾ, ಎಂ.ಡಿ. ರಫೀಕ್, ಪರಶುರಾಮ, ಧನರಾಜ್, ಎನ್. ಪೀರಾ ಸಾಬ್, ವೆಂಕಪ್ಪ, ಶೇಖ್ ತಾಜುದ್ದೀನ್, ಅಲನ್ ಭಕ್ಷಿ, ಸೂಹೇಲ್, ವೆಂಕಟೇಶ್, ಲಿಂಗಣ್ಣ, ನಾಯಕ, ಆನಂದ ರಾಜ, ಸದ್ದಾಂ, ಮಹಮ್ಮದ್ ಗೌಸ್, ಮೈಲಾರಪ್ಪ, ಸಂಗಪ್ಪ, ಖಾಜಾ ಹುಸೇನ್, ಅನ್ವರ್ ಬಾಷಾ, ಪಾಲಾಕ್ಷ ಮತ್ತಿತರರಿದ್ದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!