ಕೊಟ್ಟೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದು ವಾಲ್ಮೀಕಿ ಅಭಿವೃದ್ದಿ ನಿಗಮ ಮತ್ತು ಮುಡ ಹಗರಣ ಸಂಬಂಧ ಸಿಎಂ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಆ.3ರಿಂದ ಹಮ್ಮಿಕೊಂಡಿರುವ ಬೆಂಗಳೂರಿಂದ ಮೈಸೂರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ವಿಜಯನಗರ ಜಿಲ್ಲಾ ಬಿಜೆಪಿಯಿಂದ 1000 ಕಾರ್ಯಕರ್ತರು ತೆರಳಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ ಪಾಟೀಲ್ ಹೇಳಿದರು.ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಗರಿಬೊಮ್ಮನಹಳ್ಳಿ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣಸೆ ರಾಮಣ್ಣ ಮಾತನಾಡಿ, ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ತಮ್ಮ ಪಕ್ಷದಲ್ಲಿ ಇರಿಸಿಕೊಂಡು ಜೀವಿತಾಅವಧಿಯುದ್ದಕ್ಕೂ ಅವರನ್ನು ಗೌರವದಿಂದ ಕಾಣದೇ ಅಲಕ್ಷಿಸಿದ ಕಾಂಗ್ರೆಸ್ಸಿಗರು ಇದೀಗ ಅಂಬೇಡ್ಕರ್ ಅವರಿಗೆ ಗೌರವ ಕೊಡುವ ಮಾತನಾಡುತ್ತಿರುವುದು ಅವರ ಸೋಗಲಾಡಿತನ ತೋರಿಸುತ್ತದೆ ಎಂದರು.
ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.ಪಪಂ ಸದಸ್ಯರಾದ ಕೆ.ಎಸ್. ಈಶ್ವರಗೌಡ, ಜಿ.ಸಿದ್ದಯ್ಯ, ಮುಟುಕನಹಳ್ಳಿ ಕೊಟ್ರೇಶ್, ಜಯಪ್ರಕಾಶ್, ಪಿ.ಭರಮನಗೌಡ, ಅಂಗಡಿ ಪಂಪಾಪತಿ, ಪಿ.ಎಚ್.ಕೊಟ್ರೇಶ್, ಪಿ.ನಾಗರಾಜ, ಜೋಗಿ ಹನುಮಂತಪ್ಪ, ಕೋಗಳಿ ಹನುಮಂತಣ್ಣ, ಎಂ.ಸಿ. ಕೆಂಗಪ್ಪ, ಮರಬದ ಕೊಟ್ರೇಶ್, ಶಾಂತಮ್ಮ, ಸಂಜೀವ ರೆಡ್ಡಿ , ರಾಘವೇಂದ್ರ ಇದ್ದರು. ಅರವಿಂದ ಬಸಾಪುರ ಕಾರ್ಯಕ್ರಮ ನಿರೂಪಿಸಿದರು.