ಕನ್ನಡಪ್ರಭ ವಾರ್ತೆ ಚಿಂತಾಮಣಿ
ಚಿಂತಾಮಣಿಯಲ್ಲಿ ೫೫ ರಿಂದ ೬೦ ಕೋಟಿ ವೆಚ್ಚದಲ್ಲಿ ೧೦ ಸಾವಿರ ಲೀಟರ್ ಸಾಮರ್ಥದ ಐಸ್ ಕ್ರೀಮ್ ಘಟಕ ಸ್ಥಾಪನೆ ಹಾಗೂ ನಂದಿನಿಯ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಚಿಂತಾಮಣಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಡಾ ಎಂ.ಸಿ.ಸುಧಾಕರ್ ನುಡಿದರು.ತಾಲ್ಲೂಕಿನ ವೈಜಕೂರು ಎಂಪಿಸಿಎಸ್‌ನ ಸಾಮೂಹಿಕ ಹಾಲು ಕರೆಯುವ ಯಂತ್ರಗಳ ಘಟಕ ಮತ್ತು ಸೋಲಾರ್ ಪ್ಯಾನಲ್ ಘಟಕದ ಉದ್ಘಾಟಿಸಿ ಸಚಿವರು ಮಾತನಾಡಿದರು.
ಶೀಘ್ರದಲ್ಲೇ ಚಿಮೂಲ್ ಸ್ಥಾಪನೆಚಿಕ್ಕಬಳ್ಳಾಪುರದಲ್ಲಿ ಪ್ಯಾಕಿಂಗ್ ಯೂನಿಟ್, ಎಂವಿಕೆ ಗೋಲ್ಡನ್ ಡೇರಿ, ಐಸ್ ಕ್ರೀಮ್ ಫ್ಯಾಕ್ಟರಿ ಸ್ಥಾಪನೆಗೆ ಬದ್ಧವಾಗಿದ್ದು, ಚಿಕ್ಕಬಳ್ಳಾಪುರ ಹಾಲು ಉತ್ಪಾದನಾ (ಚಿಮೂಲ್) ಸ್ಥಾಪನೆ ಮಾಡಲಾಗುವುದು. ಚಿಕ್ಕಬಳ್ಳಾಪುರದಲ್ಲಿ ಪ್ಯಾಕಿಂಗ್ ಯೂನಿಟ್, ಎಂವಿಕೆ ಗೋಲ್ಡನ್ ಡೇರಿ, ಐಸ್ ಕ್ರೀಮ್ ಫ್ಯಾಕ್ಟರಿ ಸ್ಥಾಪನೆಗೆ ಬದ್ಧವಾಗಿದ್ದು, ಚಿಕ್ಕಬಳ್ಳಾಪುರ ಹಾಲು ಉತ್ಪಾದನಾ (ಚಿಮೂಲ್) ಸ್ಥಾಪನೆ ಮಾಡಲಾಗುವುದು ಎಂದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದರೂ ರೈತರು ಹೈನೋದ್ಯಮ ಮಾಡುವ ಮೂಲಕ ಅವರಿಗೆ ಸಹಕಾರಿಯಾಗಿದ್ದು ಜೀವನದಲ್ಲಿ ಸಂಕಷ್ಟಗಳು ಬಂದರು ಜೀವನ ನಿರ್ವಹಣೆ ಸಾಧಿಸಲು ಹೈನುಗಾರಿಕೆಯು ಗ್ರಾಮೀಣ ಜನತೆ ಹಾಗೂ ರೈತರನ್ನು ಸ್ವಾವಲಂಬಿಗಳಾಗಿ ಮಾಡುವಲ್ಲಿ ಯಶಸ್ವಿಯಾಗಿದೆಯೆಂದರು.ಎಂಜಿನಿಯರಿಂಗ್ ಕಾಲೇಜು ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ತಾತ್ಕಾಲಿಕವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಪ್ರಾರಂಭಗೊಳ್ಳಲಿದ್ದು ಇಲ್ಲಿ ೪ ಕೋರ್ಸ್‌ಗಳು ಆರಂಭಗೊಳ್ಳಲಿವೆ. ಅವಳಿ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ಸದ್ಭಳಕೆ ಮಾಡಿಕೊಂಡು ದಾಖಲೆಯಾಗಬೇಕೆಂದರು..
ಸಾಮೂಹಿಕ ಹಾಲು ಕರೆಯುವ ಯಂತ್ರಕೋಚಿಮುಲ್ ನಿರ್ದೇಶಕ ವೈ.ಬಿ. ಊಲವಾಡಿ ಅಶ್ವಥನಾರಾಯಣ ಮಾತನಾಡಿ, ಆಡಳಿತ ಮಂಡಳಿ ಒಕ್ಕೂಟ ೫-೧೦ವರ್ಷಗಳಿಂದ ಹೈನುಗಾರಿಕೆಯ ಉಪಕರಣಗಳಾದ ನೆಲಹಾಸಿಗೆ (ಮ್ಯಾಟ್) ಹಾಲಿನ ಕ್ಯಾನ್, ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದ್ದು ಶೇಕಡ ೫೦ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಡೇರಿಯ ಸಾಮೂಹಿಕ ಹಾಲು ಕರೆಯುವ ಯಂತ್ರಗಳ ಮೂಲಕ ಹಾಲನ್ನು ಕರೆಯುವುದರಿಂದ ಶುದ್ಧ ಹಾಲು ಪಡೆಯಲು ಸಾಧ್ಯ, ತಾಲ್ಲೂಕಿನಾದ್ಯಂತ ೩೦ ಹಾಲು ಕರೆಯುವ ಕೇಂದ್ರಗಳನ್ನು ಹಾಗೂ ಸೋಲಾರ್ ಮತ್ತು ಬಿಎಂಸಿ ಘಟಕ ಸ್ಥಾಪನೆ ಮಾಡಲಾಗಿದೆಯೆಂದರು.
ದೇಶದಲ್ಲಿ ನಂದಿಗೆ 2ನೇ ಸ್ಥಾನವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಮಾತನಾಡಿ, ವಿಶ್ವದಲ್ಲೇ ಅತ್ಯಧಿಕ ಹಾಲು ಉತ್ಪಾದನೆ ಮಾಡುವ ದೇಶ ಭಾರತ ಎಂಬ ಹೆಗ್ಗಳಿಕೆ ಪಡೆದಿದೆ. ಭಾರತದಲ್ಲಿ ಅಮೂಲ್ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹಾಗೂ ಕರ್ನಾಟಕದ ನಂದಿನಿ ೨ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಬೆಂಗಳೂರು ಡೇರಿ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಕೋಚಿಮೂಲ್ ೨ ನೇ ಸ್ಥಾನವನ್ನು ರಾಜ್ಯಮಟ್ಟದಲ್ಲಿ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ತಿಮ್ಮರಾಯಪ್ಪ, ವೈಜಕೂರು ಎಂಪಿಸಿಎಸ್ ಅಧ್ಯಕ್ಷ ವಿ.ಎಸ್. ಮಂಜುನಾಥ, ಉಪವ್ಯವಸ್ಥಾಪಕ ಡಾ ಜಿ. ಮಾಧವ, ಡಾ ಡಿ.ಎಂ. ಮಹೇಶ್, ಕೋಚಿಹಾಒ ತಾಂತ್ರಿಕ ಅಧಿಕಾರಿ ಎಂ.ಜಿ.ಪ್ರಭು, ಚಿಂತಾಮಣಿ ಶಿಬಿರ ಕಚೇರಿ ವಿಸ್ತರಣಾಧಿಕಾರಿ ಕೆ.ನಾರಾಯಣಸ್ವಾಮಿ, ಹಾ.ಉ.ಸ.ಸಂ ನೌಕರರ ಸಂಘದ ಅಧ್ಯಕ್ಷ ಬಿ.ಕೆಂಪರೆಡ್ಡಿ, ಜಿ.ಪಂ ಮಾಜಿ ಅಧ್ಯಕ್ಷ ಚಿನ್ನಪ್ಪ, ಸಂತೇಕಲ್ಲಹಳ್ಳಿ ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ, ಮತ್ತಿತರರು ಉಪಸ್ಥಿತರಿದ್ದರು.