75 ಸಾವಿರ ಎಕರೆ ನೀರಾವರಿ ಪ್ರದೇಶಕ್ಕೆ 1000 ಕೋಟಿ ಅನುದಾನ

KannadaprabhaNewsNetwork |  
Published : Nov 12, 2025, 02:30 AM IST
ಫೋಟೋ11.19: ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಮ್ಮ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ₹1000 ಕೋಟಿ ಅನುದಾನ ತರುವ ಕೆಲಸ ನಾವು ಮಾಡಿದ್ದೇವೆ

ಕೊಪ್ಪಳ: ಅಳವಂಡಿ ಜಿಪಂ ವ್ಯಾಪ್ತಿಯ ಗ್ರಾಮಗಳಾದ ನೀರಲಗಿ, ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಮೋರನಾಳ, ಭೈರಾಪುರ, ಬೋಚನಹಳ್ಳಿ, ನಿಲೋಗಿಪುರ ಹಾಗೂ ಹಲವಾಗಲಿ ಗ್ರಾಮಗಳಲ್ಲಿ ₹4.89 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಮ್ಮ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ₹1000 ಕೋಟಿ ಅನುದಾನ ತರುವ ಕೆಲಸ ನಾವು ಮಾಡಿದ್ದೇವೆ. ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಪ್ರದೇಶ ಮಾಡುತ್ತೇವೆ ಎಂದರು.

ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ ಯೋಜನೆಗೆ ₹275 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇವೆ. ಇದರಿಂದ ಸುಮಾರು 14000 ಎಕರೆ ನೀರಾವರಿ ಪ್ರದೇಶ. ಟ್ರಯಲ್ ರನ್ ಕೂಡ ಮಾಡಿದ್ದು ಕಾಲುವೆ ಕಾಮಗಾರಿ ಪ್ರಾರಂಭವಾಗಿದೆ. ಅಳವಂಡಿ -ಬೆಟಗೇರಿ ಏತ ನೀರಾವರಿ ಯೋಜನೆ ಗೆ ₹211 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇವೆ, ಸಂಪೂರ್ಣ ಕಾಮಗಾರಿ ಮುಗಿದಿದ್ದು ಒಂದು ತಿಂಗಳಿನಲ್ಲಿ ಈ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿ ರೈತರಿಗೆ ಅರ್ಪಣೆ ಮಾಡುತ್ತೇವೆ. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸುಮಾರು ₹500 ಕೋಟಿ ಹಣ ಮಂಜೂರು ಮಾಡಿಸಿದ್ದು, ಟೆಂಡರ್ ಕರೆಯಲಾಗಿದೆ ಮಧ್ಯಪ್ರದೇಶದ ಮಾಡೆಲ್ ನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಪ್ರಾರಂಭ ಮಾಡುತ್ತೇವೆ. ಹಿಂದೆ ಕೂಡ ಟೆಂಡರ್ ಕರೆಯಲಾಗಿತ್ತು ಆದರೆ ಟೆಂಡರ್ ನಲ್ಲಿ ಯಾರೂ ಕೂಡ ಭಾಗವಹಿಸಿದೆ ಇರುವುದರಿಂದ ಮತ್ತೆ ಟೆಂಡರ್ ಕರೆಯಲಾಗಿದೆ ಎಂದರು.

ಅಳವಂಡಿ ಭಾಗದದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳಿಗೆ ಹಾಗೂ ಬ್ರಿಡ್ಜ್ ಗಳ ಅಭಿವೃದ್ಧಿಗೆ ಕೂಡ ಅನುದಾನ ಕೊಡುವ ಕೆಲಸ ಮಾಡಿ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ಪ್ರಸನ್ನ ಗಡಾದ್, ಭರಮಪ್ಪ ಹಟ್ಟಿ, ತೋಟಪ್ಪ ಕಾಮನೂರು, ಭೀಮಣ್ಣ ಬೋಚನಹಳ್ಳಿ, ಭರಮಪ್ಪ ಕಂಬ್ಳಿ, ಭೀಮನಗೌಡ್ರು ದಳಪತಿ, ಶಿವಣ್ಣ ಮೋರನಾಳ, ತೋಟಪ್ಪ ಸಿಂಟ್ರ, ಶಿವಕುಮಾರ್ ಶೆಟ್ಟರ್, ಧರ್ಮಣ್ಣ ಕಂಪಸಾಗರ, ಹನಮೇಶ ಹೊಸಳ್ಳಿ, ಪಂಪಣ್ಣ ಪೂಜಾರ್, ಮುದಿಯಪ್ಪ ಅವೊಜಿ, ಪರಶುರಾಮ್ ಮೆಕ್ಕಿ, ನಿಂಗಪ್ಪ ಮೇಟಿ, ಮಹೆಬೂಬ್ ಅರಗಂಜಿ, ಜಿಲ್ಲಾ ಕೆಡಿಪಿ ಸದಸ್ಯ ರವಿ ಕುರುಗೋಡು, ಕನಕರಾಜ ಹನಕುಂಟಿ, ಈರಪ್ಪ ಕಂಪಸಾಗರ, ಪರಶುರಾಮ್ ಕೆರೆಹಳ್ಳಿ, ಗವಿಸಿದ್ದನಗೌಡ ಮುದ್ದಾಬಳ್ಳಿ, ಪ್ರಭು ಕಲಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ