ಕಲಾದಗಿ: ಜಿಲ್ಲೆಯಲ್ಲಿ ಆಲಮಟ್ಟಿಯಿಂದ ಬೆಳಗಾವಿಯ ಸಾಲಹಳ್ಳಿವರೆಗೂ 105 ಕಿಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಮಾಡಿಕೊಂಡಿದೆ ಎಂದು ಪಿಡಿಒ ಬಿ.ಎಲ್.ಹವಾಲ್ದಾರ್ ಹೇಳಿದರು.
ಬಾಗಲಕೋಟೆ ಮಹಿಳಾ ಸ್ವಸಹಾಯ ಗುಂಪುಗಳ ನೋಡಲ್ ಅಧಿಕಾರಿ ಹುಲ್ಲಪ್ಪ ದುರ್ಗದ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳು ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಲಿದ್ದು ಕನಿಷ್ಠ 600 ಮಹಿಳಾ ಸದಸ್ಯೆಯರು ಮಾನವ ಸರಪಳಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯ ಬಗ್ಗೆ ಗ್ರಾಪಂ ಸದಸ್ಯ ಎಂ.ಎ.ತೇಲಿ, ಪತ್ರಕರ್ತ ಚಂದ್ರಶೇಖರ ಹಡಪದ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಖಾತುನಬಿ.ಹ.ರೋಣ, ಪಿಡಿಒ ಬಿ.ಎಲ್.ಹವಾಲ್ದಾರ, ಕಾರ್ಯದರ್ಶಿ ಎಂ.ಎಂ.ಪರಸನ್ನವರ್, ಸದಸ್ಯ ಮುನ್ನಾ ಖಲಾಸಿ ಇನ್ನಿತರರು ಇದ್ದರು.