- ನಾಮಪತ್ರ ಪರಿಶೀಲನೆ ಮುಕ್ತಾಯ । ವಾಪಸಾತಿಗೆ ನಾಳೆ ಕಡೇ ದಿನಕನ್ನಡಪ್ರಭ ವಾರ್ತೆ ಬೆಂಗಳೂರು
ಒಟ್ಟು 335 ಅಭ್ಯರ್ಥಿಗಳು ಸಲ್ಲಿಸಿದ್ದ 503 ನಾಮಪತ್ರಗಳನ್ನು ಶನಿವಾರ ಪರಿಶೀಲನೆ ಮಾಡಲಾಯಿತು.
ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿಗಳು ಇಡೀ ದಿನ ನಾಮಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಅಂತಿಮವಾಗಿ 503 ನಾಮಪತ್ರಗಳ ಪೈಕಿ 394 ನಾಮಪತ್ರಗಳು ಪುರಸ್ಕೃತಗೊಂಡಿವೆ. ಸದ್ಯಕ್ಕೆ 272 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸೋಮವಾರ (ಏ.22ರಂದು) ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದು, ಸೋಮವಾರದ ಬಳಿಕ ಅಂತಿಮವಾಗಿ ಚುನಾವಣಾ ಕಣದಲ್ಲಿ ಎಷ್ಟು ಮಂದಿ ರಣಕಲಿಗಳು ಉಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.ಯಾವ ಕ್ಷೇತ್ರದಲ್ಲಿ ಎಷ್ಟು ನಾಮಪತ್ರ ತಿರಸ್ಕೃತ?
ರಾಯಚೂರು ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸಲ್ಲಿಸಿದ್ದ 21 ನಾಮಪತ್ರಗಳ ಪೈಕಿ 3, ಬೀದರ್ ಕ್ಷೇತ್ರದಲ್ಲಿ 34 ಅಭ್ಯರ್ಥಿಗಳು ಸಲ್ಲಿಸಿದ್ದ 41 ನಾಮಪತ್ರಗಳ ಪೈಕಿ 14, ಕೊಪ್ಪಳ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳು ಸಲ್ಲಿಸಿದ್ದ 40 ನಾಮಪತ್ರಗಳ ಪೈಕಿ 6 ತಿರಸ್ಕೃತಗೊಂಡಿವೆ. ಬಳ್ಳಾರಿ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸಲ್ಲಿಸಿದ್ದ 19 ನಾಮಪತ್ರಗಳು ಕ್ರಮ ಬದ್ಧವಾಗಿವೆ.
ಹಾವೇರಿ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು ಸಲ್ಲಿಸಿದ್ದ 47 ನಾಮಪತ್ರಗಳ ಪೈಕಿ 19, ಧಾರವಾಡ ಕ್ಷೇತ್ರದಲ್ಲಿ 29 ಅಭ್ಯರ್ಥಿಗಳು ಸಲ್ಲಿಸಿದ್ದ 44 ನಾಮಪತ್ರಗಳ ಪೈಕಿ 9, ಉತ್ತರ ಕನ್ನಡ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಸಲ್ಲಿಸಿದ್ದ 36 ನಾಮಪತ್ರಗಳ ಪೈಕಿ 17, ದಾವಣಗೆರೆ ಕ್ಷೇತ್ರದಲ್ಲಿ 40 ಅಭ್ಯರ್ಥಿಗಳು ಸಲ್ಲಿಸಿದ್ದ 54 ನಾಮಪತ್ರಗಳ ಪೈಕಿ 12 ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳು ಸಲ್ಲಿಸಿದ್ದ 38 ನಾಮಪತ್ರಗಳ ಪೈಕಿ 1 ತಿರಸ್ಕೃತಗೊಂಡಿದೆ.