ಸೋಲಾಪುರ (ಜಯದೇವಿ ತಾಯಿ ಲಿಗಾಡೆ ಮಹಾದ್ವಾರ)
ಸಾನ್ನಿಧ್ಯ ವಹಿಸಿದ್ದ ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ಸೋಲಾಪುರ ಅನೇಕ ಭಾಷಿಕರಿಗೆ ಬರೀ ಸ್ಥಾನ ಮಾತ್ರವಲ್ಲದೇ, ಸಂಸ್ಕೃತಿ, ಸಮಾರಂಭಕ್ಕೆ ಅಡಚಣೆ ಇಲ್ಲದೇ ಅವಕಾಶ ನೀಡಿದೆ. ಇಲ್ಲಿ ಕನ್ನಡಿಗರು, ತೆಲಗು, ಮರಾಠಿ ಸೇರಿದಂತೆ ಅನೇಕ ಸಮಾಜದ ಜನರಿದ್ದಾರೆ. ಒಟ್ಟಾರೆ ಈ ಊರು ಭಾಷೆಗಳ ಸಂಗಮವಾಗಿದೆ. ಇದು ಔದ್ಯೋಗಿಕ ಕ್ಷೇತ್ರವಾಗಿದ್ದು, ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ ಜಿಲ್ಲೆಗಳಿಂದ ಈ ಊರಿಗೆ ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ಬಂದಿದ್ದು, ಶೇ. 40ರಷ್ಟು ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ ಎಂದರು.
ಎಲ್ಲರಿಗೂ ಅವರವರ ಭಾಷೆ, ಪ್ರಾಂತ್ಯದ ಬಗ್ಗೆ ಗೌರವ, ಅಭಿಮಾನ ಇರಬೇಕು. ಆದರೆ, ಅತಿಯಾದ ಗೌರವ ಅಗತ್ಯವಿಲ್ಲ. ಮಾತೃ ಭಾಷೆಗೆ ಎತ್ತರ ಸ್ಥಾನ ಇಟ್ಟು ಬೇರೆ ಭಾಷೆಯನ್ನು ಗೌರವಿಸಬೇಕು.ಭಾಷೆ, ಪ್ರಾಂತ ಎಂದು ನಾವ್ಯಾರು ಬಡಿದಾಡಿಕೊಳ್ಳುವ ಬದಲು ನಾವು ಭಾರತ ಮಾತೆ ಮಕ್ಕಳಾಗಿ ಅವರವರ ಭಾಷೆ, ಪ್ರಾಂತವನ್ನು ಅಭಿವೃದ್ಧಿ ಮಾಡಿಕೊಂಡು ಹೋಗಬೇಕು ಎಂದರು.
ಮಹಾರಾಷ್ಟ್ರದ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಸೋಲಾಪುರ ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಸೋಲಾಪುರದಲ್ಲಿ ಕನ್ನಡ ಬೆಳೆಸಿ ಉಳಿಸಿಕೊಳ್ಳಲು ಸಾಕಷ್ಟು ಮಹಾನ್ ವ್ಯಕ್ತಿಗಳು ಕಾರ್ಯ ಮಾಡಿದ್ದಾರೆ. ಈ ಪೈಕಿ ಜಯದೇವಿ ತಾಯಿ ಲಿಗಾಡೆ ಹಾಗೂ ಮಲ್ಲಪ್ಪ ವಾಡದ ಅವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇಲ್ಲಿಯ ಸೊನ್ನಲಗಿ ಸಿದ್ದರಾಮೇಶ್ವರ ಆಶೀರ್ವಾದದಿಂದ ಸೋಲಾಪುರದಲ್ಲಿ ಹೆಚ್ಚು ಉತ್ತರ ಕರ್ನಾಟಕ ಛಾಯೆ ಇದ್ದು, ಕನ್ನಡಿಗರು ಹಾಗೂ ಮರಾಠಿಗರು ಬಾಂಧವ್ಯದಿಂದ ಜೀವಿಸುತ್ತಿದ್ದಾರೆ. ಇನ್ನು, ಈ ಭಾಗದಲ್ಲಿ ಹೆಚ್ಚು ಲಿಂಗಾಯತರು ಇದ್ದು ಹೆಚ್ಚಿನ ಕನ್ನಡ ಮಾತಾಡುವಂತಾಗಲಿ ಎಂದರು.
ಗಡಿನಾಡು ಹೊರನಾಡು ಕನ್ನಡಿಗರ ಕರೆಯಿಸಿ ಸಮ್ಮೇಳನ ಮಾಡುತ್ತಿದ್ದು, ಬರುವ ದಿನಗಳಲ್ಲಿ ಹೊರ ದೇಶಗಳ ಕನ್ನಡಿಗರನ್ನು ಕರೆಯಿಸಿ ಸಮ್ಮೇಳನ ಮಾಡುವ ಮೂಲಕ ಜಗತ್ತಿನಲ್ಲಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿದ್ಯಾವರ್ಧಕ ಸಂಘ ಚಿಂತನೆ ಮಾಡಲಿ ಎಂದು ಕಾಶೀ ಪೀಠದ
ಸೋಲಾಪುರದಲ್ಲಿ ನಡೆದ ಎರಡು ದಿನಗಳ 10ನೇ ಮಹಾಮೇಳದಲ್ಲಿ ವಿದ್ಯಾವರ್ಧಕ ಸಂಘ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ ಮಂಡಿಸಿದರು.
3) ಕರ್ನಾಟಕದ ಅಕಾಡೆಮಿ, ಪುರಸ್ಕಾರ, ಪ್ರಶಸ್ತಿಗಳಲ್ಲಿ ಸದಸ್ಯತ್ವ ನೀಡುವಲ್ಲಿ ಹೊರನಾಡ ಕನ್ನಡಿಗರನ್ನು ಪರಿಗಣಿಸಲು ಸರ್ಕಾರಕ್ಕೆ ಒತ್ತಾಯಿಸುವುದು.4) ಹೊರನಾಡ ಕನ್ನಡದ ಮಕ್ಕಳಿಗೆ ರಾಜ್ಯದಲ್ಲಿ ಉದ್ಯೋಗ ಹಾಗೂ ಹೆಚ್ಚಿನ ಅವಕಾಶಗಳು ಲಭ್ಯವಾಗುವಂತೆ ಮಿತಿಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರಕ್ಕೆ ಆಗ್ರಹ