೧೦ ರಂದು ಗುರುಸಿದ್ದರಾಜ ಯೋಗೀಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತ್ಯುತ್ಸವ

KannadaprabhaNewsNetwork |  
Published : Aug 06, 2024, 12:43 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಕಾರವಾರ ಜಿಲ್ಲೆಯ ಶಿರಸಿ ನಗರದ ಬಣ್ಣದ ಮಠದ ತಪಸ್ವಿ ಲಿಂ.ಗುರುಸಿದ್ದರಾಜ ಯೋಗೀಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತ್ಯುತ್ಸವ ಆ.೧೦ ಭಕ್ತಿ-ಭಾವದಿಂದ ತಾಳಿಕೋಟೆ ಸಮೀಪದ ಸಾಸನೂರಿನ ಮಡಿವಾಳೇಶ್ವರ ಹಿರೇಮಠದಲ್ಲಿ ಜರುಗಲಿದೆ ಎಂದು ಚಿಕ್ಕ ತೊಟ್ಟಲಕೇರಿಯ ಅಡವಿಸ್ವಾಮಿ ಮಠದ ಪೀಠಾಧಿಪತಿ ಶಿವಲಿಂಗ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕಾರವಾರ ಜಿಲ್ಲೆಯ ಶಿರಸಿ ನಗರದ ಬಣ್ಣದ ಮಠದ ತಪಸ್ವಿ ಲಿಂ.ಗುರುಸಿದ್ದರಾಜ ಯೋಗೀಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತ್ಯುತ್ಸವ ಆ.೧೦ ಭಕ್ತಿ-ಭಾವದಿಂದ ತಾಳಿಕೋಟೆ ಸಮೀಪದ ಸಾಸನೂರಿನ ಮಡಿವಾಳೇಶ್ವರ ಹಿರೇಮಠದಲ್ಲಿ ಜರುಗಲಿದೆ ಎಂದು ಚಿಕ್ಕ ತೊಟ್ಟಲಕೇರಿಯ ಅಡವಿಸ್ವಾಮಿ ಮಠದ ಪೀಠಾಧಿಪತಿ ಶಿವಲಿಂಗ ಮಹಾಸ್ವಾಮಿಗಳು ನುಡಿದರು.

ಎಪಿಎಂಸಿ ಯಾರ್ಡ್‌ನಲ್ಲಿರುವ ಕುಮಾರ ಹಿರೇಮಠ ಅವರ ಅಡತ್ ಮರ್ಚಂಟ್‌ದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳು ಸಿದ್ದರಾಜ ಯೋಗೀಂದ್ರ ಮಹಾಸ್ವಾಮಿಗಳು ತಂದೆ ಶಾಂತಯ್ಯ, ತಾಯಿ ದಾನಮ್ಮ ಈ ಮಾತಾಪಿತರಲ್ಲಿ ೧೯೧೩ನೇ ಸಾಲಿನ ಆ.೬ ರಂದು ಸಾಸನೂರಿನಲ್ಲಿ ಜನಿಸಿದ ಶ್ರೀಗಳು ೧೯೨೪ನೇ ಸಾಲಿನಲ್ಲಿ ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಪಾಸಾಗಿ ೧೯೨೫ರಲ್ಲಿ ಶಿವಯೋಗಿ ಮಂದಿರದಲ್ಲಿ ಯೋಗಾಭ್ಯಾಸ ಸಂಸ್ಕೃತ, ಪಾಂಡಿತ್ಯ ಪಡೆದ ಶ್ರೀಗಳು ಶಿವಯೋಗಿ ಅಗ್ರಸ್ಥಾನ ಪಡೆದಿದ್ದಾರೆ ಎಂದರು.೧೯೨೫ರಲ್ಲಿ ಹಾನಗಲ್ಲ ಕುಮಾರೇಶ್ವರ ಮಹಾಸ್ವಾಮಿಗಳಿಂದ ದೀಕ್ಷೆ ಪಡೆದ ಶ್ರೀಗಳು ಬಂಗಾರಾಯ ಎಂಬ ಮೊದಲಿನ ಹೆಸರು ಬದಲಾವಣೆಗೊಂಡು ಗುರು ಸಿದ್ದರಾಜಯೋಗಿ ಎಂದು ನಾಮಕರಣಗೊಂಡರು.೧೯೩೫ ಶಿರಸಿ ಬಣ್ಣದ ಮಠದ ಉತ್ತರಾಧಿಕಾರಿಯಾಗಿ ೧೯೩೬ನೇ ಸಾಲಿನಲ್ಲಿ ಅದೇ ಮಠದ ಪೀಠಾಧಿಪತಿಗಳಾಗಿ ೧೯೬೪-೬೫ರಲ್ಲಿ ವೀರಶೈವ ಶಿವಯೋಗಿ ಮಂದಿರ ಟ್ರಸ್ಟ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಮಠಗಳಲ್ಲಿ ಶಿರಶಿ ಬಣ್ಣದ ಮಠ, ಉಣ್ಣಿ ಮಠ, ಹಾವೇರಿ ತಾಲೂಕಿನ ಸಂಸ್ಥಾನದಲ್ಲಿ ವಿರಕ್ತಮಠದಲ್ಲಿಯೂ ಸಂಸ್ಕೃತ ವೇದ, ಸಂಗೀತ ಶಿಕ್ಷಣ ನೀಡಿದ ಶ್ರೀಗಳು ಸಾಮೂಹಿಕ ವಿವಾಹಗಳನ್ನು ಮಾಡಿ ವಧು-ವರರಿಗೆ ಆಶೀರ್ವದಿಸುವುದರೊಂದಿಗೆ ೧೯೯೪ ಆಷಾಢ ಮಾಸದ ಬಹುಳ ದಶಮಿ ದಿನದಂದು ಶಿವಕ್ಯರಾದ ಶ್ರೀಗಳ ನಂತರ ಈಗೀನ ಪೀಠಾಧಿಪತಿಗಳಾಗಿ ನಾನೇ ಶೀವಲಿಂಗ ಮಹಾಸ್ವಾಮಿಗಳಾದ ಅಧಿಕಾರದಿಂದ ಭಕ್ತರನ್ನು ಉದ್ದರಿಸುತ್ತ ಸಾಗಿದ್ದೇವೆ ಎಂದರು.ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ ಅಧ್ಯಕ್ಷತೆ ವಹಿಸುವರು. ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸುವರು. ಈ ಸಮಯದಲ್ಲಿ ಆಮಂತ್ರಿತ ಮುಖ್ಯ ಅತಿಥಿಗಳಾಗಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ(ನಡಹಳ್ಳಿ), ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ), ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಗಣ್ಯರಾದ ರವಿಕುಮಾರ ಹಯ್ಯಾಳ, ಅಯ್ಯನಗೌಡ ಪಾಟೀಲ, ಶಿವಾನಂದ ದೇಸಾಯಿ, ಶರಣ ಸೋಮನಾಳದ ಅಯ್ಯನಗೌಡ ಪಾಟೀಲ, ಸಾಸನೂರ ಗ್ರಾಂಪಂ ಅಧ್ಯಕ್ಷೆ ಅನುಸುಬಾಯಿ ಹರಿಜನ, ಪಿಕೆಪಿಎಸ್ ಸಾಸನೂರ ಅಧ್ಯಕ್ಷ ಸೋಮನಗೌಡ ಯರಲಡ್ಡಿ ಆಗಮಿಸಲಿದ್ದಾರೆ. ಸಾಸನೂರ ಹಾಗೂ ತಾಳಿಕೋಟೆ ಸುತ್ತ-ಮುತ್ತಲಿನ ಗ್ರಾಮಗಳ ಸದ್ಭಕ್ತರೆಲ್ಲರಿಗೂ ಸಹ ಈ ಮಹಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ವಿವರಿಸಿದರು.ಈ ಸಮಯದಲ್ಲಿ ವೀರಯ್ಯ ಮಠ, ಕುಮಾರಸ್ವಾಮಿ ಮಠ, ನಾಗಭೂಷಣ ಡೋಣೂರಮಠ, ಇಮಾಮಸಾಬ್ ನಾಯ್ಕೋಡಿ, ಬದ್ರು ವಸ್ತ್ರದ, ಸೋಮಶೇಖರ ಗೆಜ್ಜಿ, ಬಸ್ಸು ಹಿಪ್ಪರಗಿ ಮೊದಲಾದವರು ಉಪಸ್ಥಿತರಿದ್ದರು.

ತಾಳಿಕೋಟೆ ತಾಲೂಕಿನ ಸಾಸನೂರ ಮಡಿವಾಳೇಶ್ವರ ಹಿರೇಮಠದಲ್ಲಿ ಆ.೧೦ ರಂದು ಬೆಳಗ್ಗೆ ೧೦.೩೦ ಗಂಟೆಗೆ ಲಿಂ.ಸಿದ್ದರಾಜ ಯೋಗೀಂದ್ರ ಮಹಾಸ್ವಾಮಿಗಳವರ ಜರುಗಲಿರುವ ಜಯಂತ್ಯುತ್ಸವದ ಸಾಸನೂರ ತುಂಬಗಿ ಹಿರೇಮಠದ ಷ.ಬ್ರ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ನೇತೃತ್ವ ವಹಿಸಲಿದ್ದಾರೆ.

-ಶಿವಲಿಂಗ ಮಹಾಸ್ವಾಮಿಗಳು, ಚಿಕ್ಕ ತೊಟ್ಟಲಕೇರಿಯ ಅಡವಿಸ್ವಾಮಿ ಮಠದ ಪೀಠಾಧಿಪತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!