ಸ್ಪೂರ್ತಿ ಪತ್ತಿನ ಸಹಕಾರ ಸಂಘಕ್ಕೆ 11.20 ಲಕ್ಷ ರು. ಲಾಭ: ಕೆ.ಎಲ್.ಶಿವರಾಮು

KannadaprabhaNewsNetwork |  
Published : Sep 23, 2024, 01:31 AM IST
22ಕೆಎಂಎನ್ ಡಿ14 | Kannada Prabha

ಸಾರಾಂಶ

ಸಂಘವನ್ನು ಜಿಲ್ಲಾದ್ಯಂತ ವಿಸ್ತರಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಸಂಘ 24 ವರ್ಷ ಯಶಸ್ಸು ಕಂಡಿದೆ. ಪ್ರಸಕ್ತ ವರ್ಷದ ನಿವ್ವಳಲಾಭ 11.20 ಲಕ್ಷ ಲಾಭಬಂದಿದೆ. ಸಂಘದಿಂದ ಸದಸ್ಯರು ಇ-ಸ್ಟಾಫ್, ರೈತರ ಪಹಣಿ, ಗುಂಪುವಿಮೆ, ಮರಣ ನಿಧಿ, ಯಶಸ್ವಿನಿ ಹಾಗೂ ಹಲವು ಸೌಲಭ್ಯ ಪಡೆದುಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಭಾರತೀನಗರ

ಸ್ಪೂರ್ತಿ ಪತ್ತಿನ ಸಹಕಾರ ಸಂಘ ತಾಲೂಕಿನಲ್ಲಿ ಉತ್ತಮ ಸಹಕಾರ ಸಂಘವೆಂದು ಗುರುತಿಸಿಕೊಂಡು ಲಾಭದಾಯಕವಾಗಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಎಲ್.ಶಿವರಾಮು ತಿಳಿಸಿದರು.

ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಸಂಘ 1999ರಲ್ಲಿ ಪ್ರಾರಂಭವಾಗಿ ಮಳವಳ್ಳಿ ಮತ್ತು ಮದ್ದೂರು ತಾಲೂಕಿನಿಂದ ನಾಲ್ಕುವರೆ ಸಾವಿರ ಷೇರುದಾರರನ್ನು ಹೊಂದಿದೆ. ಈಗ 9 ಕೋಟಿಗೂ ಹೆಚ್ಚು ವ್ಯವಹರ ನಡೆಸಿ ಈ ಸಂಘ ಪ್ರತಿ ವರ್ಷವು ಲಾಭದಾಯಕವಾಗಿ ನಡೆಯುತ್ತಿದೆ ಎಂದರು.

ಸಂಘವನ್ನು ಜಿಲ್ಲಾದ್ಯಂತ ವಿಸ್ತರಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಸಂಘ 24 ವರ್ಷ ಯಶಸ್ಸು ಕಂಡಿದೆ. ಪ್ರಸಕ್ತ ವರ್ಷದ ನಿವ್ವಳಲಾಭ 11.20 ಲಕ್ಷ ಲಾಭಬಂದಿದೆ. ಸಂಘದಿಂದ ಸದಸ್ಯರು ಇ-ಸ್ಟಾಫ್, ರೈತರ ಪಹಣಿ, ಗುಂಪುವಿಮೆ, ಮರಣ ನಿಧಿ, ಯಶಸ್ವಿನಿ ಹಾಗೂ ಹಲವು ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಇದೇ ವೇಳೆ ಸಂಘದ ಸಿಇಒ ಕೆ.ಎಸ್.ಅಜಯ್ ವಾರ್ಷಿಕ ವರದಿ ಮಂಡಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಮತ್ತು ಹಿರಿಯ ಸಹಕಾರಿಗಳಿಗೆ ಅಭಿನಂದಿಸಲಾಯಿತು.

ಸಂಘದ ಉಪಾಧ್ಯಕ್ಷ ಬಿ.ಎಸ್.ರವೀಂದ್ರ, ನಿರ್ದೇಶಕ ಡಿ.ಎನ್.ರಘು, ಎಚ್.ಎಸ್.ಶಿವರಾಜು, ಎ.ಸಿ.ಮಹೇಂದ್ರ, ಎಂ.ಟಿ.ಹರೀಶ್, ಮನೋಹರ್‌ಗೌಡ, ಸಿದ್ದರಾಮೇಗೌಡ, ವಿನುಕುಮಾರ್, ನಟೇಶ್, ಮಧುಕುಮಾರ್, ಸವಿತ, ಮಮತ, ಶಿವಲಿಂಗಯ್ಯ, ಗುರುಲಿಂಗಯ್ಯ, ನಾಗರಾಜು, ಸಿಬ್ಬಂದಿಗಳಾದ ಜ್ಯೋತಿ, ಕುಮಾರ್, ಶಾರದ, ರಶ್ಮಿಪ್ರೀಯ, ಸುನೀತ, ರಮೇಶ್, ರವಿ, ಆನಂದ್‌ಕುಮಾರ್ ಸೇರಿದಂತೆ ಹಲವರಿದ್ದರು.25ರಂದು ಪಿಎಲ್‌ಡಿ ಬ್ಯಾಂಕ್‌ ಸರ್ವಸದಸ್ಯರ ಸಭೆ

ಮಂಡ್ಯ:ಮಂಡ್ಯ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ಪಿಎಲ್‌ಡಿ ಬ್ಯಾಂಕ್) ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.೨೫ರಂದು ಬೆಳಗ್ಗೆ ೧೧ ಗಂಟೆಗೆ ಬ್ಯಾಂಕ್‌ನ ಜಿ.ಮಾದೇಗೌಡ ಸಹಕಾರ ಸಭಾಂಗಣದಲ್ಲಿ ನಡೆಯಲಿದೆ.

ಬ್ಯಾಂಕ್‌ನ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಕಾಲಕ್ಕೂ ಮುನ್ನ ಸಾಲ ಪಾವತಿಸಿರುವ ಸದಸ್ಯರನ್ನು ಅಭಿನಂದಿಸಲಾಗುವುದು ಎಂದು ನಿರ್ದೇಶಕ ಬೇಲೂರು ಸೋಮಶೇಖರ್ ತಿಳಿಸಿದ್ದಾರೆ.ಜಿ.ಮಾದೇಗೌಡ ಸಹಕಾರ ಸಭಾಂಗಣಕ್ಕೆ ಪೀಠೋಪಕರಣ ಅಳವಡಿಸಲು ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ವತಿಯಿಂದ ಆರ್ಥಿಕ ಸಹಾಯಕ್ಕೆ ಕಾರಣರಾಗಿರುವ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸಿ.ಅಶ್ವತ್ಥ್ ಅವರನ್ನು ಇದೇ ವೇಳೆ ಗೌರವಿಸಲಾಗುವುದು. ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಾರ್ಷಿಕ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು