ಕಾರ್ಖಾನೆ ಅವ್ಯವಹಾರ ತನಿಖೆ ಬಗ್ಗೆ ಸಭೆಯಲ್ಲಿ ನಿರ್ಧಾರ:ಮೋಹನ ಹಿರೇಮಠ

KannadaprabhaNewsNetwork |  
Published : Sep 23, 2024, 01:30 AM IST
ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಕೋಟ್ಯಂತರ ಅವ್ಯವಹಾರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷೆ ಹಾಗೂ ಸದಸ್ಯರು. | Kannada Prabha

ಸಾರಾಂಶ

ಕಿತ್ತೂರು ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೀರೇಶ ಹುಲಿಕಟ್ಟಿ ಅವ್ಯವಹಾರ ನಡೆಸಿದ್ದಾರೆಂದು ಕೆಲ ರೈತರು ಆರೋಪಿಸುತ್ತಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವ ನಿಟ್ಟಿನಲ್ಲಿ ಸೆ.25ರಂದು ನಡೆಯುವ ವಾರ್ಷಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೀರೇಶ ಹುಲಿಕಟ್ಟಿ ಅವ್ಯವಹಾರ ನಡೆಸಿದ್ದಾರೆಂದು ಕೆಲ ರೈತರು ಆರೋಪಿಸುತ್ತಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವ ನಿಟ್ಟಿನಲ್ಲಿ ಸೆ.25ರಂದು ನಡೆಯುವ ವಾರ್ಷಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಹೇಳಿದರು.

ಪಟ್ಟಣದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಭಾನುವಾರ ಕಾರ್ಖಾನೆ ನಿರ್ದೇಶಕರ ಜೊತೆಗೂಡಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಎಂಡಿ ವೀರೇಶ ಹುಲಿಕಟ್ಟಿ ಸಕ್ಕರೆ ಕಾರ್ಖಾನೆಯಲ್ಲಿ ತನಗೆ ಬೇಕಾದ ವ್ಯಕ್ತಿಗಳನ್ನು ನೇಮಿಸಿಕೊಂಡು ಅವ್ಯವಹಾರ ಮಾಡಿದ್ದಾರೆಂಬ ಆರೋಪ ರೈತರಿಂದ ಕೇಳಿ ಬಂದಿದೆ. ಮೊದಲಿನ ನಿರ್ದೇಶಕ ಮಂಡಳಿ ಹಾಗೂ ಈಗಿನ ಮಂಡಳಿ ಇವರ ಮೇಲೆ ಆರೋಪ ಮಾಡಿದ್ದು, ಇದರ ತನಿಖೆ ನಡೆಸುವುದು ಅತೀ ಅವಶ್ಯವಾಗಿದೆ. ತನಿಖೆಯಲ್ಲಿ ಹಣ ಲೂಟಿ ಮಾಡಿದ್ದು ನಿಜವಾದರೆ ಆ ಹಣವನ್ನು ವಸೂಲಿ ಮಾಡಿ ವಾಪಸ್‌ ಪಡೆಯಲು ಸೂಕ್ತ ಕ್ರಮ ಜರುಗಿಸಬೇಕೆಂದು ನಿರ್ದೇಶಕ ಮಂಡಳಿ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.ಮಲಪ್ರಭಾ ಬೆಳಕು ಸೊಸೈಟಿ ಹುಟ್ಟುಹಾಕಿ ಕೆಲವು ಕಾರ್ಮಿಕರ ಹೆಸರಿನಲ್ಲಿ ಅವರಿಗೆ ತಿಳಿಯದಂತೆ ಲಕ್ಷಾಂತರ ರೂಪಾಯಿ ಹಣ ಒಂದೇ ದಿನ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ. ಆ ಹಣವನ್ನು ಒಂದೇ ದಿನ ಖಾತೆಯಿಂದ ಹಿಂಪಡೆದಿರುವ ಮಾಹಿತಿ ಇದೆ ಎಂದು ಹೇಳಿದರು. ಈ ಹಿಂದೆ ನಡೆದ ಕಾರ್ಯ ವೈಖರಿಗಳ ಬಗ್ಗೆ ಅಢಾವೆ ಪತ್ರಿಕೆ ಮುದ್ರಿಸಲಾಗಿದೆ. ಅದರ ಮುನ್ನುಡಿಯಲ್ಲಿ ಅವ್ಯವಹಾರದ ಬಗ್ಗೆ ರೈತರು ಮಾಡಿದ ಆರೋಪ ಮತ್ತು ನಿರ್ದೇಶಕರು ನೀಡಿದ ಹೇಳಿಕೆ ಮುದ್ರಿಸಲಾಗಿದೆ ಎಂದರು.

ಕಾರ್ಖಾನೆ ನಿರ್ದೇಶಕ ಸಾವಂತ್ ಕಿರಬಣ್ಣವರ ಮಾತನಾಡಿ, ವಿರೇಶ ಹುಲಿಕಟ್ಟಿ ಬದಲಾದ ನಂತರ ರೈತರು ಸೇರಿದಂತೆ ಎಲ್ಲರೂ ಸಮಸ್ಯೆ ನಮ್ಮ ಬಳಿ ತೋಡಿಕೊಂಡರು, ಆಗ ಈ ಕುರಿತು ವಿಚಾರಿಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ, ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತನಿಖೆ ಮೂಲಕವೇ ತಿಳಿದು ಬರಬೇಕಿದ್ದು, ಮಹಾಸಭೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು.

ಈ ವೇಳೆ ಸಕ್ಕರೆ ಕಾರ್ಖಾ‌ನೆ ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ನಿರ್ದೇಶಕರಾದ ಜ್ಯೋತಿಬಾ ಹೈಬತ್ತಿ, ಬಸವರಾಜ ಬೆಂಡಿಗೇರಿ, ಮಂಜುನಾಥ ಪಾಟೀಲ, ಲಕ್ಷ್ಮಣ ಎಮ್ಮಿ, ಶಂಕರಗೌಡ ಪಾಟೀಲ, ಸಿದ್ದಪ್ಪ ದೂರಪ್ಪನವರ, ಅಶೋಕ ಬೆಂಡಿಗೇರಿ, ಬಸವರಾಜ ಪುಂಡಿ, ಭರತೇಶ ಶೆಬ್ಬಣ್ಣವರ ಸೇರಿ ಇತರರು ಇದ್ದರು.

----------

ಚಿತ್ರ ೨೨ಕೆಟಿಆರ್೦೧

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ