ನಮ್ಮ ಮೆಟ್ರೋದಲ್ಲಿ ಸೆ.9ರಂದು 11 ಲಕ್ಷ ಜನರಿಂದ ಪ್ರಯಾಣ

KannadaprabhaNewsNetwork |  
Published : Oct 11, 2026, 02:45 AM IST
SIR protest AIDSO 3 | Kannada Prabha

ಸಾರಾಂಶ

ನಮ್ಮ ಮೆಟ್ರೋ ರೈಲಿನ ಎಲ್ಲ ಮಾರ್ಗಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 26,447 ಟ್ರಿಪ್‌ಗಳಲ್ಲಿ 3.22 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಇದು ಕಳೆದ ಎಲ್ಲ ತಿಂಗಳುಗಳಿಗೆ ಹೋಲಿಕೆ ಮಾಡಿದರೆ, ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ನಮ್ಮ ಮೆಟ್ರೋ ಕಾರ್ಯಾಚರಣೆ ವಿವರ ಬಿಡುಗಡೆ, 96.1 ಕಿಲೋ ಮೀಟರ್ ಸಂಚಾರ

-ಸೆಪ್ಟಂಬರ್‌ನಲ್ಲಿ ಅತಿ ಹೆಚ್ಚು ಜನ ಸಂಚಾರ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ರೈಲಿನ ಎಲ್ಲ ಮಾರ್ಗಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 26,447 ಟ್ರಿಪ್‌ಗಳಲ್ಲಿ 3.22 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಇದು ಕಳೆದ ಎಲ್ಲ ತಿಂಗಳುಗಳಿಗೆ ಹೋಲಿಕೆ ಮಾಡಿದರೆ, ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಸೆಪ್ಟೆಂಬರ್ 1ರಿಂದ 30ರವರೆಗೆ ಪ್ರತಿ ದಿನ ಮೆಟ್ರೋದ ನೆರಳೆ ಮಾರ್ಗ, ಹಸಿರು ಮಾರ್ಗ, ಹಾಗೂ ಹಳದಿ ಮಾರ್ಗಗಳಲ್ಲಿ 10 ಲಕ್ಷ ಜನ ಸಂಚರಿಸಿದ್ದಾರೆ, ಅತಿ ಹೆಚ್ಚು ಪ್ರಯಾಣಿಕರು ಸೆ.9ರಂದು 11,45,262 ಮಂದಿ ಪ್ರಯಾಣಿಸಿದ್ದಾರೆ. ಜನದಟ್ಟಣೆ ಸಮಯದಲ್ಲಿ (ಬೆಳಗ್ಗೆ 10 ಹಾಗೂ ಸಂಜೆ 5ರ ಸಮಯ) ಈ ಮೂರು ಮಾರ್ಗಗಳಲ್ಲಿ ರೈಲು ಅತಿ ಕಡಿಮೆ ತಡವಾಗಿ ಬಂದ ಸಮಯ ಎಂದರೆ, ನೆರಳೆ ಮಾರ್ಗದಲ್ಲಿ 3.3 ನಿಮಿಷಗಳು. ಅತಿಹೆಚ್ಚು ತಡವಾಗಿ ಪ್ರಯಾಣಿಕರು ರೈಲಿಗಾಗಿ ಕಾದ ಸಮಯ ಎಂದರೆ ಹಳದಿ ಮಾರ್ಗದಲ್ಲಿ 6 ನಿಮಿಷಗಳು. ಇದನ್ನು ಹೊರತುಪಡಿಸಿ ಈ ತಿಂಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಪ್ರಯಾಣಿಕರಿಗೆ ಮೆಟ್ರೋ ತನ್ನ ಸೇವೆ ನೀಡಿದೆ. ಸಮಯ ಪಾಲನೆಯಲ್ಲಿ ಶೇ 99.73ರಷ್ಟು ಸಾಧನೆ ತೋರಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಉತ್ತರ’ ಗೊಂದಲ ಕೆಪಿಎಸ್ಸಿ ಅಕ್ರಮ ಬೆಳಕಿಗೆ ಮೂಲ!
ಬ್ಯಾಂಕಾಕ್‌ ಪ್ರವಾಸಿಗರಿಂದ ₹1.73 ಕೋಟಿ ಡ್ರಗ್ಸ್‌ ಜಪ್ತಿ