ಕನ್ನಡಪ್ರಭ ವಾರ್ತೆ ಮದ್ದೂರು
ವಿಷಪೂರಿತ ಮೇವು ತಿಂದು 11 ಕುರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ಕುಂದನಕುಪ್ಪೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ.ಗ್ರಾಮದ ರೈತ ಎಲ್.ಮಹೇಶ್‌ರಿಗೆ ಸೇರಿದ 50-50 ಕುರಿಗಳ ಪೈಕಿ 11 ಕುರಿಗಳು ವಿಷಪೂರಿತ ಮೇವು ತಿಂದು, ಕಲುಷಿತ ನೀರು ಸೇವಿಸಿ ಅಸುನೀಗಿದ್ದಾವೆಂದು ಪಶುಪಾಲನೆ ಇಲಾಖೆ ವೈದ್ಯರು ಶಂಕಿಸಿದ್ದಾರೆ.
ರೈತ ಮಹೇಶ್ ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಭಾನುವಾರ ಎಲ್ಲಾ ಕುರಿಗಳನ್ನು ಗ್ರಾಮದ ಹೊರ ವಲಯದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಈ ಪೈಕಿ 9 ಕುರಿಗಳು ಇದ್ದಕ್ಕಿಂತದಂತೆ ಅಸ್ವಸ್ತಗೊಂಡು ಸರಣಿ ಪ್ರಕಾರ ಕೊನೆ ಉಸಿರೆಳೆದವು. ಆ ನಂತರ ಸಂಜೆ ವೇಳೆ ಮತ್ತೆ ಎರಡು ಕುರಿಗಳು ಮೃತಪಟ್ಟಿದ್ದು ಸುಮಾರು 2 ಲಕ್ಷ ರು.ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.ಮದ್ದೂರು ಪಶುಸಂಗೋಪನಾ ಇಲಾಖೆಯ ವೈದ್ಯರಾದ ಡಾ.ಜ್ಯೋತಿ ಅವರ ಇಲಾಖೆ ತಂಡ ಸ್ಥಳಕ್ಕೆ ಧಾವಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಉಳಿದ ಕುರಿಗಳನ್ನು ರಕ್ಷಣೆ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಇಂದು ಬೃಹತ್ ಪ್ರತಿಭಟನೆಮಳವಳ್ಳಿ:
ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಬಳಸಿರುವ ಅವಾಚ್ಯ ಶಬ್ದಗಳನ್ನು ವಿರೋಧಿಸಿ ಡಿ.24ರಂದು ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಪಟ್ಟಣದ ಪ್ರವಾಸಿ ಮಂದಿರದ ಎದುರು ಇರುವ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಯಿಂದ ಅನಂತರಾಮ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರದಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ದೂರು ಸಲ್ಲಿಸಲಾಗುವುದು. ತಾಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು, ಕರ‍್ಯರ‍್ತರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಕೋರಿದ್ದಾರೆ.