ಶಾಲಾ ಮಕ್ಕಳ ಶೂ, ಸಾಕ್ಸ್‌ ಖರೀದಿಗೆ ₹111.88 ಕೋಟಿ

KannadaprabhaNewsNetwork |  
Published : Jun 24, 2025, 12:32 AM ISTUpdated : Jun 24, 2025, 09:59 AM IST
ಶಾಲಾ ಮಕ್ಕಳು | Kannada Prabha

ಸಾರಾಂಶ

ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಶೂ, ಸಾಕ್ಸ್‌ ಖರೀದಿಗೆ ಅನುದಾನ ಬಿಡುಗಡೆ ಮಾಡಲು ಕೊನೆಗೂ ಶಿಕ್ಷಣ ಇಲಾಖೆಗೆ ಸರ್ಕಾರ ಅನುಮತಿ ನೀಡಿದೆ.

 ಬೆಂಗಳೂರು :  ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಶೂ, ಸಾಕ್ಸ್‌ ಖರೀದಿಗೆ ಅನುದಾನ ಬಿಡುಗಡೆ ಮಾಡಲು ಕೊನೆಗೂ ಶಿಕ್ಷಣ ಇಲಾಖೆಗೆ ಸರ್ಕಾರ ಅನುಮತಿ ನೀಡಿದೆ. 1ರಿಂದ 10ನೇ ತರಗತಿ ವರೆಗಿನ ಒಟ್ಟು 40.68 ಲಕ್ಷ ವಿದ್ಯಾರ್ಥಿಗಳಿಗೆ ತಲಾ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ಖರೀದಿಗೆ ಒಟ್ಟು ₹111.88 ಕೋಟಿ ಅನುದಾನ ಬಿಡುಗಡೆಗೆ ಆದೇಶಿಸಿದೆ.

2025-26ನೇ ಸಾಲಿನಲ್ಲಿ ವಿದ್ಯಾವಿಕಾಸ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ₹410 ಕೋಟಿ ನಿಗದಿ ಮಾಡಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ₹111.88 ಕೋಟಿ ಬಿಡುಗಡೆ ಮಾಡಲು ಮತ್ತು ಸ್ಯಾಟ್ಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಅನುದಾನ ಒದಗಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಆದೇಶ ನೀಡಲಾಗಿದೆ.

ಆಯಾ ಶಾಲೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ(ಎಸ್‌ಡಿಎಂಸಿ) ಅನುದಾನ ಒದಗಿಸಬೇಕು. ಎಸ್‌ಡಿಎಂಸಿಗಳು ಸ್ಥಳೀಯ ಮಟ್ಟದಲ್ಲೇ ತರಗತಿವಾರು ಮಕ್ಕಳ ಕಾಲಿನ ಅಳತೆಗೆ ಸೂಕ್ತ ಶೂ, ಸಾಕ್ಸ್‌ ಖರೀದಿಸಿ ವಿತರಿಸಬೇಕು. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್‌ಗಳ ಬದಲಾಗಿ ಪಾದರಕ್ಷೆಗಳನ್ನು ಸಹ ಖರೀದಿಸಿ ವಿತರಿಸಬಹುದು. ಆದೇಶ ಹೊರಡಿಸಿದ 30 ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.+++ಹಿಂದಿನ ದರವೇ ಮುಂದುವರಿಕೆ:

ಶೂ, ಸಾಕ್ಸ್‌ ಖರೀದಿಗೆ ನಾಲ್ಕೈದು ವರ್ಷಗಳ ಹಿಂದಿನ ದರವನ್ನೇ ಈ ವರ್ಷವೂ ಮುಂದುವರೆಸಲಾಗಿದೆ. 1ರಿಂದ 5ನೇ ತರಗತಿ ಮಕ್ಕಳ ಒಂದು ಜೊತೆ ಶೂಗೆ 265 ರು, 6ರಿಂದ 8ನೇ ತರಗತಿ ಮಕ್ಕಳಿಗೆ ತಲಾ 295 ರು, 9 ಮತ್ತು 10ನೇ ತರಗತಿಗೆ ತಲಾ 325 ರು. ನಿಗದಿ ಮಾಡಲಾಗಿದೆ. ಸೇವಾ ದೃಷ್ಟಿಯಿಂದ ದಾನಿಗಳು ಹೆಚ್ಚುವರಿ ಹಣ ನೀಡಿದಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಸಿ ವಿತರಿಸಬಹುದು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ.

PREV
Read more Articles on

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ