ಕಾರ್ಮಿಕರಿಗೆ ಮಾರಕವಾಗುವ ನೀತಿಗಳ ವಿರುದ್ಧ ಧ್ವನಿ ಎತ್ತಬೇಕು

KannadaprabhaNewsNetwork |  
Published : Oct 26, 2025, 02:00 AM IST
4 | Kannada Prabha

ಸಾರಾಂಶ

ದೇಶಕ್ಕೆ ಭವಿಷ್ಯದಲ್ಲಿ ಮಾರಾಕವಾಗುವ ಯೋಜನೆಗಳನ್ನು ಪ್ರತಿಭಟಿಸುವವರು ನಾವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕೆಲಸದ ಭದ್ರತೆ, ಕೃಷಿ ಕೂಲಿ ಕಾರ್ಮಿಕರಿಗೆ ಮಾರಕವಾಗುವ ನೀತಿಗಳ ವಿರುದ್ಧ ಧ್ವನಿ ಎತ್ತಬೇಕು. ರಸ್ತೆಗಿಳಿದು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಸಿಟಿಐಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.

ನಗರದ ಸುಬ್ಬರಾಯನಕೆರೆ ಮೈದಾನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿಯು ಶನಿವಾರ ಆಯೋಜಿಸಿದ್ದ 11ನೇ ಜಿಲ್ಲಾ ಸಮ್ಮೇಳನದ ಕಾರ್ಮಿಕರ ಬಹಿರಂಗ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಭವಿಷ್ಯದಲ್ಲಿ ಮಾರಾಕವಾಗುವ ಯೋಜನೆಗಳನ್ನು ಪ್ರತಿಭಟಿಸುವವರು ನಾವಾಗಬೇಕು. ಧರ್ಮಗಳ ವಿರುದ್ಧ ಮಾತಾಡುವುದು ದೇಶ ಪ್ರೇಮವಲ್ಲ, ದೇಶದ ಹಿತಕ್ಕಾಗಿ ಶ್ರೀಮಂತ ರಾಷ್ಟ್ರದ ವಿರುದ್ಧ ಮಾತನಾಡುವುದು ದೇಶಪ್ರೇಮ ಎಂದು ಅವರು ಹೇಳಿದರು.

ಟ್ರಂಪ್‌ ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಭಾರತದಲ್ಲಿ ಕೆಲವರು ಅವರ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದರು. ಆದರೆ, ಈಗ ಅವರು ಸುಂಕದ ಹೆಸರಿನಲ್ಲಿ ಭಯ ಪಡಿಸುತ್ತಿದ್ದಾರೆ. ಅವರನ್ನು ಎದುರಿಸುವ ಸಾಮರ್ಥ್ಯ ನಮ್ಮ ಪ್ರಧಾನಿಗಿಲ್ಲ. ದೇಶದ ಸ್ವಾವಲಂಬನೆಗೆ ತೊಂದರೆಯಾದಗಲೂ, ಕೇಂದ್ರ ಸರ್ಕಾರವು ಸಾಮ್ರಾಜ್ಯಶಾಹಿ ನೀತಿ ಎದುರಿಸುವ ಕೆಲಸ ಮಾಡಿಲ್ಲ. ಅಂತಹ ಧೈರ್ಯವಿರುವುದು ಕೆಂಪು ಬಣ್ಣದ ಬಾವುಟ ಹಿಡಿಯುವವರಿಗಷ್ಟೇ ಎಂದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ವಿಕ್ರಾಂತ್ ಟೈರ್ಸ್ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಸಿಐಟಿಯು ಜಿಲ್ಲಾಧ್ಯಕ್ಷ ಜಿ. ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿರಾವ್, ಖಜಾಂಚಿ ಅಣ್ಣಪ್ಪ ಮೊದಲಾದವರು ಇದ್ದರು.

ಮೆರವಣಿಗೆ:

ಸಿಐಟಿಯು ಜಿಲ್ಲಾ ಸಮ್ಮೇಳನ ಅಂಗವಾಗಿ ನಗರದ ಗನ್‌ ಹೌಸ್ ವೃತ್ತದಿಂದ ಸುಬ್ಬರಾಯನಕೆರೆವರೆಗೆ ನೂರಾರು ಕಾರ್ಮಿಕರು ಮೆರವಣಿಗೆ ಹಮ್ಮಿಕೊಂಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

PREV

Recommended Stories

ಬ್ಯಾಂಕ್‌ಗಳಲ್ಲಿ ಸಣ್ಣ ಮೌಲ್ಯದ ನೋಟು, ನಾಣ್ಯದ ಚಿಲ್ಲರೆ ಕೊರತೆ: ವ್ಯವಹಾರಕ್ಕೆ ತೊಂದರೆ
ಅಜ್ರಿ ಗಾಣಿಗರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಯಕ್ಷಪ್ರಶಸ್ತಿ ಪ್ರದಾನ