ಕಿಕ್ಕೇರಿ: ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಹುಂಡಿ ಎಣಿಕೆ ಕಾರ್ಯ ನಡೆದು 12,16,391 ರು. ಸಂಗ್ರಹವಾಗಿದೆ.
ಎರಡು ದೇಗುಲಗಳಿಂದ ಒಟ್ಟು 12,16,391 ರು. ಕಾಣಿಕೆ ರೂಪದಲ್ಲಿ ಹಣ ಸಂಗ್ರಹವಾಗಿದೆ. ಇದರ ಜೊತೆಯಲ್ಲಿ ಬೆಳ್ಳಿಯ ನಾಗರ ಹೆಡೆ, ತೊಟ್ಟಿಲು, ಕಣ್ಣು ಮತ್ತಿತರ ಆಕೃತಿಯ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಯಲ್ಲಿ ಸಮರ್ಪಿಸಿದ್ದಾರೆ.
ಈ ವರ್ಷದ ಒಟ್ಟು 4 ಕಾರ್ತಿಕ ಮಾಸದ ವಾರಗಳಿಂದ 31,84,914 ರು. ಸಂಗ್ರಹವಾಗಿದೆ. ಮುಜರಾಯಿ ಖಜಾನೆಗೆ ಅಧಿಕ ವರಮಾನ ನೀಡಿದೆ. ಒಟ್ಟು 22 ಹುಂಡಿಗಳನ್ನು ಕಂದಾಯ ಇಲಾಖೆಯವರು ಬೆಳಗ್ಗಿನಿಂದ ಸಂಜೆಯವರೆಗೆಎಣಿಕೆ ಮಾಡಿದರು. ಕಾಣಿಕೆ ಹಣವನ್ನು ಕೆ.ಆರ್.ಪೇಟೆ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾಕರಿಸಲಾಯಿತು. ರಾಜಸ್ವ ನಿರೀಕ್ಷಕ ಡಿ. ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ.ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನಿಲ್ ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಮುಜರಾಯಿ ಸಹಾಯಕಿ ಪೂರ್ಣಿಮಾ, ಗ್ರಾಮ ಸಹಾಯಕರು,ಬ್ಯಾಂಕ್‌ಆಫ್‌ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಭಾಗವಹಿಸಿದ್ದರು.