ಮನೆ ಉದ್ಯೋಗ ನೀಡುವುದಾಗಿ ನಂಬಿಸಿ 12.85 ಲಕ್ಷ ರು. ವಂಚನೆ

KannadaprabhaNewsNetwork |  
Published : Feb 24, 2024, 02:32 AM ISTUpdated : Feb 24, 2024, 02:33 AM IST
crime | Kannada Prabha

ಸಾರಾಂಶ

ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಸಂದೇಶ ಕಳುಹಿಸಿ ವರ್ಕ್ ಫ್ರಂ ಹೋಂ ಉದ್ಯೋಗ ನೀಡುವುದಾಗಿ ನಂಬಿಸಿದ್ದರು. ಅದಕ್ಕಾಗಿ ಕೆಲವು ಕೆಲವು ಟಾಸ್ಕ್ ಪೂರ್ಣಗೊಳಿಸಬೇಕು, ಅದರಿಂದ ಬಂದ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಬೇಕು ಎಂದು ಹೇಳಿದ್ದರು. ಇದನ್ನು ನಂಬಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ವರ್ಕ್ ಫ್ರಂ ಹೋಂ ಉದ್ಯೋಗ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 12.85 ಲಕ್ಷ ರು. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ನಿವಾಸಿ ಶ್ವೇತಾ ಎಂಬವರಿಗೆ ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಸಂದೇಶ ಕಳುಹಿಸಿ ವರ್ಕ್ ಫ್ರಂ ಹೋಂ ಉದ್ಯೋಗ ನೀಡುವುದಾಗಿ ನಂಬಿಸಿದ್ದರು. ಅದಕ್ಕಾಗಿ ಕೆಲವು ಕೆಲವು ಟಾಸ್ಕ್ ಪೂರ್ಣಗೊಳಿಸಬೇಕು, ಅದರಿಂದ ಬಂದ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಬೇಕು ಎಂದು ಹೇಳಿದ್ದರು. ಇದನ್ನು ನಂಬಿದ ಶ್ವೇತಾ ಅವರು ಫೆ.8 ರಿಂದ 16ರ ವರೆಗೆ ಆರೋಪಿಗಳು ಸೂಚಿಸಿರುವ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ್ದರು. ನಂತರ ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 12,85,000 ರು. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಅವರು ಟಾಸ್ಕ್ ಪೂರ್ಣಗೊಳಿಸಿದ ಹಣ ಅವರ ಖಾತೆಗೆ ಜಮೆ ಆಗಿಲ್ಲ.ಇದೀಗ ಆರೋಪಿಗಳು, ಶ್ವೇತಾ ಅವರು ಟಾಸ್ಕ್ ನಡೆಸಿ ಬಂದ ಹಣ ಹಾಗೂ ಅವರಿಂದ ಪಡೆದ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ. ಈ ಬಗ್ಗೆ ಶ್ವೇತಾ ಅವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.* 2.08 ಲಕ್ಷ ರು. ವಂಚನೆ

ಉಡುಪಿಯ ಇನ್ನೊಬ್ಬ ನಿವಾಸಿ ಮಚ್ಛೇಂದ್ರನಾಥ ಎಂಬವರಿಗೂ (50) ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಸಂಪರ್ಕಿಸಿ ತಮ್ಮ ಜೊತೆ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ಹೇಳಿದರು. ಅದನ್ನು ನಂಬಿ ಮಚ್ಛೇಂದ್ರನಾಥ ಅವರು ಫೆ.9ರಿಂದ ಆರೋಪಿಗಳು ಸೂಚಿಸಿದ ಖಾತೆಗೆ ಹಂತ ಹಂತವಾಗಿ ಒಟ್ಟು 2,08,463 ರು. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಈಗ ಆರೋಪಿಗಳು ಲಾಂಭಾಂಶವನ್ನು ನೀಡದೆ ಹಾಗೂ ಪಿರ್ಯಾದಿದಾರರಿಂದ ಪಡೆದ ಹಣವನ್ನು ಹಿಂದುರುಗಿಸದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.* 10.20 ಲಕ್ಷ ರು. ವಂಚನೆಇಲ್ಲಿನ ಟಿ. ಜೀವನ್ (61) ಎಂಬವರು ನಗರದ ಮೈತ್ರಿ ಕಾಂಪ್ಲೆಕ್ಸ್‌ನಲ್ಲಿರುವ ಎಸ್.ಬಿ.ಐ. ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಫೆ.22ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಸಿಎಂಪಿಎಫ್ ಧನ್‌ಭಾಗ್ ಕಚೇರಿಯಿಂದ ಕರೆ ಮಾಡುವುದಾಗಿ ಹೇಳಿ, ಜೀವನ್ ಅವರಿಗೆ ಬರಬೇಕಾದ ಪೆನ್ಶನ್‌ ಆರ್ಡರ್ ಮಾಡಿಕೊಡುವುದಾಗಿ ಹೇಳಿದರು. ಅದನ್ನು ನಂಬಿದ ಜೀವನ್, ತಮ್ಮ ನೆಟ್ ಬ್ಯಾಂಕಿಂಗ್ ವಿವರ, ಎಂಟಿಎಂ ಕಾರ್ಡ್ ವಿವರಗಳನ್ನು ನೀಡಿದ್ದರು. ಅದನ್ನು ಬಳಸಿ ಆರೋಪಿಗಳು ಜೀವನ್ ಹೆಸರಿನಲ್ಲಿ ಓಡಿ ಸಾಲ ಖಾತೆಯನ್ನು ತೆರೆದು, ಅವರ ಪಿಕ್ಸ್ಡ್‌ ಖಾತೆಯಲ್ಲಿದ್ದ 10,20,200 ವರ್ಗಾವಣೆ ಮಾಡಿ ವಂಚಿಸಿದ್ದಾರೆ. ಈ ಬಗ್ಗೆ ಜೀವನ್ ಅವರು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ