ಹಲ್ಲಿ ಬಿದ್ದ ಚಿತ್ರಾನ್ನ ಸೇವಿಸಿ ೧೨ವಿದ್ಯಾರ್ಥಿಗಳು ಅಸ್ವಸ್ಥ

KannadaprabhaNewsNetwork |  
Published : Nov 01, 2026, 02:30 AM IST
ಶಿರ್ಷಿಕೆ-31ಕೆ.ಎಂ.ಎಲ್‌.ಆರ್.3- ಮಾಲೂರು ಸರ್ಕಾರಿಸಾರ್ವಜನಿಕ ಆಸ್ಪತ್ರೆಗೆ ಶಾಸಕ ಕೆ.ವೈ.ನಂಜೇಗೌಡ ಭೇಟಿನೀಡಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕ್ಷೇಮ ವಿಚಾರಿಸಿ, | Kannada Prabha

ಸಾರಾಂಶ

ಶಾಲೆಯಲ್ಲಿ ಬಡಿಸಲಾಗಿದ್ದ ಚಿತ್ರಾನ್ನ ಸೇವಿಸಿದ ಕೆಲವೇ ಸಮಯದ ನಂತರ ಮಕ್ಕಳಿಗೆ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ.

ಗುಡ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ । ಆಸ್ಪತ್ರೆಗೆ ದಾಖಲು । ಶಾಸಕ ಭೇಟಿ

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಗುಡ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆ ತಯಾರಿಸಲಾಗಿದ್ದ ಚಿತ್ರಾನ್ನದಲ್ಲಿ ಹಲ್ಲಿ ಬಿದ್ದ ಆ ಆಹಾರವನ್ನು ಸೇವಿಸಿ ೧೨ ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡಿರುವ ಘಟನೆ ಸಂಭವಿಸಿದೆ.

ಮೂಲಗಳ ಪ್ರಕಾರ, ಶಾಲೆಯಲ್ಲಿ ಬಡಿಸಲಾಗಿದ್ದ ಚಿತ್ರಾನ್ನ ಸೇವಿಸಿದ ಕೆಲವೇ ಸಮಯದ ನಂತರ ಮಕ್ಕಳಿಗೆ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಶಾಲಾ ಶಿಕ್ಷಕರು ಹಾಗೂ ಸ್ಥಳೀಯ ಗ್ರಾಮಸ್ಥರು ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಗೆ ಶಾಸಕ ಭೇಟಿ:

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಶಾಸಕ ನಂಜೇಗೌಡ ತಕ್ಷಣ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕ್ಷೇಮ ವಿಚಾರಿಸಿ, ಅವರಿಗೆ ಸೂಕ್ತ ಹಾಗೂ ತುರ್ತು ವೈದ್ಯಕೀಯ ಉಪಚಾರ ನೀಡುವಂತೆ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರಿಗೆ ಸೂಚನೆ ನೀಡಿದರು.

ತನಿಖೆಗೆ ಸೂಚನೆ:

ಬಿಸಿಯೂಟದ ಆಹಾರದಲ್ಲಿ ವ್ಯತ್ಯಾಸವಾಗಿದ್ದರ ಬಗ್ಗೆತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಸ್ತುತ ಎಲ್ಲ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಇಒ.ಬಿ.ಪಿ ಕೆಂಪಯ್ಯ, ಕ್ಷೇತ್ರಸಮನ್ವಯ ಅಕಾರಿ ವೆಂಕಟಸ್ವಾಮಿ, ವೈದ್ಯರಾದ ಡಾ.ತಿಪ್ಪೇಸ್ವಾಮಿ, ಡಾ.ಪ್ರಕಾಶ್, ಡಾ.ರಂಗನಾಥ್, ಡಾ.ಮಧುಸೂಧನ್ ಡಾ.ಮಂಜುನಾಥ್, ಗ್ಯಾರೆಂಟಿಸಮಿತಿ ಅಧ್ಯಕ್ಷ ಅಂಜನಪ್ಪ ಮಾದನಹಟ್ಟಿನವೀನ್ ಸಿಬ್ಬಂದಿ ಮುರಳಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ