ಜ್ಞಾನಸುಧಾದ 12 ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶ ಅರ್ಹತೆ

KannadaprabhaNewsNetwork |  
Published : Jun 10, 2024, 12:45 AM IST
ಜ್ಞಾನಸುಧಾದ 12 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ  | Kannada Prabha

ಸಾರಾಂಶ

ಸಂಸ್ಥೆಯ 3 ವಿದ್ಯಾರ್ಥಿಗಳು 7 ಸಾವಿರದೊಳಗಿನ ರ‍್ಯಾಂಕ್, 10 ವಿದ್ಯಾರ್ಥಿಗಳು 20 ಸಾವಿರದೊಳಗಿನ ರ‍್ಯಾಂಕ್‌ಗಳಿಸಿದ್ದು, ಈ ಎಲ್ಲ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಷ್ಟ್ರಮಟ್ಟದಲ್ಲಿ ಐ.ಐ.ಟಿ. ಪ್ರವೇಶಕ್ಕೆ ಎನ್.ಟಿ.ಎ. ನಡೆಸುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆದ 1,80,200 ವಿದ್ಯಾರ್ಥಿಗಳಲ್ಲಿ 48,248 ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಜ್ಞಾನಸುಧಾದ 12 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ರಾಷ್ಟಮಟ್ಟದ ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಬಿಪಿನ್ ಜೈನ್ 5161ನೇ ರ‍್ಯಾಂಕ್, ಚಿರಂತನ ಜೆ.ಎ. 5374ನೇ ರ‍್ಯಾಂಕ್, ಪ್ರಿಯಾಂಶ್ ಎಸ್.ಯು. 6128ನೇ ರ‍್ಯಾಂಕ್, ಸಮ್ಮಿತ್ ಕೃಷ್ಣ ಯು. 12564ನೇ ರ‍್ಯಾಂಕ್, ಕನ್ನಿಕಾ ದೀಪಕ್ ಶೆಟ್ಟಿ 13994ನೇ ರ‍್ಯಾಂಕ್, ಪ್ರಥಮ್ ಕುಮಾರ್ ಶೆಟ್ಟಿ 16213ನೇ ರ‍್ಯಾಂಕ್, ರಿಷಿತ್‌ವೇಣು ಬಿಳಿಮಗ್ಗ 16471ನೇ ರ‍್ಯಾಂಕ್, ಕ್ಷಿರಾಜ್ ಎಸ್. ಆಚಾರ್ಯ 18924ನೇ ರ‍್ಯಾಂಕ್, ನಿಮೇಶ್ ಆರ್. ಆಚಾರ್ಯ 19153ನೇ ರ‍್ಯಾಂಕ್, ಅದಿತ್ ಎನ್. ಪೂಜಾರಿ 19965ನೇ ರ‍್ಯಾಂಕ್, ಪ್ರಣವ್ ಕುಮಾರ್ ಭಂಡಿ 22987ನೇ ರ‍್ಯಾಂಕ್ ಮತ್ತು ಶ್ರೀದಾ ಕಾಮತ್ 24588ನೇ ರ‍್ಯಾಂಕ್ ಪಡೆದ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.

ಸಂಸ್ಥೆಯ 3 ವಿದ್ಯಾರ್ಥಿಗಳು 7 ಸಾವಿರದೊಳಗಿನ ರ‍್ಯಾಂಕ್, 10 ವಿದ್ಯಾರ್ಥಿಗಳು 20 ಸಾವಿರದೊಳಗಿನ ರ‍್ಯಾಂಕ್‌ಗಳಿಸಿದ್ದು, ಈ ಎಲ್ಲ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ