ಕನ್ನಡಪ್ರಭ ವಾರ್ತೆ ಕೋಲಾರ ನಗರದ ಪಿ.ಸಿ. ಬಡಾವಣೆಯ ಪ್ರೇಮ್ ಕುಮಾರ್ ಹಾಗೂ ಅವರ ಸ್ನೇಹಿತರು ಮತ್ತು ತಿಮ್ಮಪ್ಪನ ಭಕ್ತರು ತಿರುಮಲ ತಿರುಪತಿಗೆಯ ಅನ್ನ ದಾಸೋಹಕ್ಕೆ ಕೋಲಾರದ ಟೊಮೆಟೋ ಕಳಿಸಿಕೊಡಲಾಯಿತು. ತಿರುಮಲದಲ್ಲಿ ನಡೆಯುವ ನಿತ್ಯ ದಾಸೋಹಕ್ಕಾಗಿ ಕೋಲಾರದ ಪಿಸಿ ಬಡಾವಣೆಯ ನಿವಾಸಿಯಾಗಿರುವ ಪ್ರೇಮ್ ಕುಮಾರ್ ಹಾಗೂ ಸ್ನೇಹಿತರು ಸುಮಾರು ೧೨ ಟನ್ ಟೊಮೆಟೋವನ್ನು ಕಳಿಸಿಕೊಟ್ಟರು. ಕೋಲಾರದ ಎಪಿಎಂಸಿ ಮಾರ್ಕೆಟ್ ನಲ್ಲಿ ಹಣ್ಣು ಖರೀದಿ ಮಾಡಿ ಅದನ್ನು ತಿರುಮಲ ತಿರುಪತಿಯಿಂದ ಬಂದಿದ್ದ ವಾಹನದಲ್ಲಿ ಲೋಡ್ ಮಾಡಿ, ನಂತರ ಪಿಸಿ ಬಡಾವಣೆಯ ಪ್ರೇಮ್ ಕುಮಾರ್ ಅವರ ಮನೆಯ ಬಳಿ ವಾಹನಕ್ಕೆ ಪೂಜೆ ಸಲ್ಲಿಸಿ ನಂತರ ಅದನ್ನು ತಿರುಮಲ ತಿರುಪತಿಗೆ ಕಳಿಸಿಕೊಡಲಾಯಿತು. ಕಿಲಾರಿಪೇಟೆ ಮುನಿವೆಂಕಟ, ಶ್ರೀನಿವಾಸ್ ಸ್ಟೀಟ್ ಸ್ಟಾಲ್ ವೆಂಕಟೇಶ್, ವಾದಿರಾಜ ಕಾಂಡಿಮೆಂಟ್ಸ್‌ನ ವಿಶ್ವನಾಥ ವೈದ್ಯ, ಶ್ರೀಗಂಧ ರಾಜೇಶ್, ಸಾಯಿಧಾಮ್‌ನ ನಿತ್ಯಾನಂದಶೆಟ್ಟಿ, ಚಿಂತಾಮಣಿ ಬಾಬು, ಸ್ಪೂರ್ತಿ, ಹರ್ಷಿತಾ, ರೋಹಿಣಿ ಹರೀಶ್ ಶೆಟ್ಟಿ ಇದ್ದರು.