ನರೇಗಲ್ಲ: ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯ ಹಾಗೂ ಅಭಿನವ ಅನ್ನದಾನ ಪಪೂ ಮಹಾವಿದ್ಯಾಲಯದ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನರೇಗಲ್ಲದಿಂದ ಹಾಲಕೆರೆ ವರೆಗೆ 12ನೇ ವರ್ಷದ ಸಂಕಲ್ಪ ಪಾದಯಾತ್ರೆ ನಡೆಯಿತು.
ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ವಿದ್ಯಾರ್ಥಿಗಳು ಸಂಕಲ್ಪಯಾತ್ರೆ ಕೈಗೊಳ್ಳುತ್ತಿದ್ದು, ಇದಕ್ಕೆ ಅವರು ಮಾಡಿದ ಸಂಕಲ್ಪದಂತೆ ಅವರಿಗೆ ಫಲಿತಾಂಶ ದೊರೆತಿದೆ ಎಂದರು.
ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿ, 10 ವರ್ಷಗಳಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಪರೀಕ್ಷೆಯ ಭಯ, ದುಗುಡ ದೂರ ಮಾಡಿ ಆತ್ಮವಿಶ್ವಾಸ ಮೂಡಿಸುವ ಸದುದ್ದೇಶದಿಂದ ಸಂಕಲ್ಪಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದರು.ಪಾದಯಾತ್ರೆ ಬೆಳಗ್ಗೆ 9.30ಕ್ಕೆ ಸ್ಥಳೀಯ ಅನ್ನದಾನೇಶ್ವರ ಮಠದಿಂದ ಪ್ರಾರಂಭಗೊಂಡು ಗಜೇಂದ್ರಗಡ ಮಾರ್ಗವಾಗಿ ಹಾಲಕೆರೆ ಒಳರಸ್ತೆ ಮೂಲಕ ಮಧ್ಯಾಹ್ನ 1ಕ್ಕೆ ಹಾಲಕೆರೆ ತಲುಪಿತು. ಮಾರ್ಗದುದ್ದಕ್ಕೂ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು.ಅಭಿನವ ಅನ್ನದಾನ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯೆ ಅನಸೂಯಾ ಪಾಟೀಲ, ಉಪನ್ಯಾಸಕರಾದ ಪಿ.ಎನ್. ಬಳೂಟಗಿ, ಎಫ್.ಎನ್. ಹುಡೇದ, ಜಿ.ಎಸ್. ಮಠಪತಿ, ಡಿ.ಎಂ. ನಾಗರೇಶಿ, ಪ್ರಭುರಾಜ ಕರಮುಡಿ, ವಿದ್ಯಾಸಾಗರ ಮಲಗೌಡನ್ನವರ, ಎನ್.ಕೆ. ಬೇವಿನಕಟ್ಟಿ, ನಂದೀಶ ಅಚ್ಚಿ, ಜಯಕಾಂತ ನರಗುಂದ, ವಿ.ಕೆ. ಸಂಗನಾಳ, ರವೀಂದ್ರ ಹುಬ್ಬಳ್ಳಿ, ಬಿ.ಕೆ. ಕಂಬಳಿ, ಬಸವರಾಜ ಗಾಣಿಗೇರ, ಶಿವಾನಂದ ಕುರಿ, ಬಸವರಾಜ ಕುಲಕರ್ಣಿ, ಮಂಜುನಾಥ ಮೆಣಸಗಿ, ವಿಶ್ವನಾಥ ಕೋಡಿಕೊಪ್ಪಮಠ, ಉದಯ ಸವದಿ, ಉಪನ್ಯಾಸಕಿಯರಾದ ಶಾಹೀದಾ ಘಟ್ಟದ, ಉಮಾ ಕಡಗದ, ಎನ್.ಎಸ್. ಉಪ್ಪಾರ ಇದ್ದರು.