ಕನ್ನಡಪ್ರಭ ವಾರ್ತೆ ಹಾವೇರಿ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೪, ಅರ್ಹತಾ ದಿನಾಂಕ ೦೧-೦೧-೨೦೨೪ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಹಸೀಲ್ದಾರ, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ವೆಬ್‌ಸೈಟ್ https://ceo.karnataka.gov.inನಲ್ಲಿಯು ಸಹ ತಮ್ಮ ಹೆಸರನ್ನು ನೋಡಬಹುದು ಎಂದು ಅವರು ತಿಳಿಸಿದ್ದಾರೆ.
೧೩.೧೦ ಲಕ್ಷ ಮತದಾರರು:ಜಿಲ್ಲೆಯಲ್ಲಿ ಜ.೨೨ರ ಅಂತಿಮ ಮತದಾರರ ಪಟ್ಟಿ ಅನುಸಾರ ೬,೬೬,೭೪೫ ಪುರುಷ, ೬,೪೩,೬೪೫ ಮಹಿಳಾ ಹಾಗೂ ೪೧ ಜನ ತೃತೀಯ ಲಿಂಗಿಗಳು ಸೇರಿ ೧೩,೧೦,೪೧೩ ಮತದಾರರಿದ್ದಾರೆ.
ಬ್ಯಾಡಗಿ ಕ್ಷೇತ್ರದಲ್ಲಿ ೧,೦೬,೫೧೨ಪುರುಷ, ೧,೦೩,೫೩೬ ಮಹಿಳಾ ಹಾಗೂ ೩ ಜನ ತೃತೀಯ ಲಿಂಗಿಗಳು ಸೇರಿ ೨,೧೦,೦೫೧ ಮತದಾರರು, ಹಿರೇಕೆರೂರು ಕ್ಷೇತ್ರದಲ್ಲಿ ೯೪,೮೫೬ ಪುರುಷ, ೯೧,೩೭೭ ಮಹಿಳಾ ಹಾಗೂ ೪ ಜನ ತೃತೀಯ ಲಿಂಗಿಗಳು ಸೇರಿ ಮತದಾರರು ೧,೮೬,೨೩೭ ಮತದಾರರು ಹಾಗೂ ರಾಣಿಬೆನ್ನೂರ ಕ್ಷೇತ್ರದಲ್ಲಿ ೧,೧೮,೬೭೩ ಪುರುಷ, ೧,೧೭,೨೪೦ ಮಹಿಳಾ ಹಾಗೂ ೧೧ ಜನ ತೃತೀಯ ಲಿಂಗಿಗಳು ಸೇರಿ ೨,೩೫,೯೨೪ ಮತದಾರರಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ೧೮ ರಿಂದ ೧೯ ವರ್ಷದೊಳಗಿನ ೬,೬೦೨ ಮತದಾರರು, ೮೩ ಸೇವಾ ಹಾಗೂ ೩,೭೦೦ ವಿಕಲಚೇತನ ಮತದಾರರಿದ್ದಾರೆ. ಶಿಗ್ಗಾಂವ ಕ್ಚೇತ್ರದಲ್ಲಿ ೧೮ ರಿಂದ ೧೯ ವರ್ಷದೊಳಗಿನ ೬,೩೧೧ ಮತದಾರರು, ೧೪೪ ಸೇವಾ ಹಾಗೂ ೪,೫೦೯ ವಿಕಲಚೇತನ ಮತದಾರರಿದ್ದಾರೆ.
ಹಿರೇಕೆರೂರು ಕ್ಷೇತ್ರದಲ್ಲಿ ೧೮ರಿಂದ ೧೯ ವರ್ಷದೊಳಗಿನ ೫,೬೯೯ ಮತದಾರರು, ೧೦೫ ಸೇವಾ ಹಾಗೂ ೩,೨೦೨ ವಿಕಲಚೇತನ ಮತದಾರರಿದ್ದಾರೆ ಹಾಗೂ ರಾಣಿಬೆನ್ನೂರ ಕ್ಷೇತ್ರದಲ್ಲಿ ೧೮ ರಿಂದ ೧೯ ವರ್ಷದೊಳಗಿನ ೬,೭೪೧ ಮತದಾರರು, ೧೭೦ ಸೇವಾ ಹಾಗೂ ೨,೭೦೨ ವಿಕಲಚೇತನ ಮತದಾರರಿದ್ದಾರೆ.
ಜಿಲ್ಲೆಯಲ್ಲಿ ೧,೪೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೮೨-ಹಾನಗಲ್ ಕ್ಷೇತ್ರದಲ್ಲಿ ೨೪೩, ೮೩-ಶಿಗ್ಗಾಂವಿ ಕ್ಷೇತ್ರದಲ್ಲಿ ೨೪೧, ೮೪-ಹಾವೇರಿ(ಎಸ್‌ಸಿ) ಕ್ಷೇತ್ರದಲ್ಲಿ ೨೬೧, ೮೫-ಬ್ಯಾಡಗಿ ಕ್ಷೇತ್ರದಲ್ಲಿ ೨೪೨, ೮೬-ಹಿರೇಕೆರೂರು ಕ್ಷೇತ್ರದಲ್ಲಿ ೨೨೯ ಹಾಗೂ ೮೭ ರಾಣಿಬೆನ್ನೂರ ಕ್ಷೇತ್ರದಲ್ಲಿ ೨೬೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ೧೪೮೨ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಹಾಗೂ ಪ್ರತಿ ೧೦ ಮತಗಟ್ಟೆಗೆ ಓರ್ವ ಮೇಲ್ವಿಚಾರಕರನ್ನು ಮತದಾರರ ಪಟ್ಟಿ ತಯಾರಿಕೆಗೆ ನಿಯೋಜನೆ ಮಾಡಿ ಕ್ರಮಕೈಗೊಳ್ಳಲಾಗಿದೆ ಎಂದರು.
ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ ಆನ್‌ಲೈನ್ ಮೂಲಕ ವಿ.ಎಚ್.ಎ (ವೋಟರ್ ಹೆಲ್ಪ್ಲೈನ್ ಆಪ್) ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ, ಇಲ್ಲದಿರುವವ ಬಗ್ಗೆ ಪರಿಶೀಲಿಸಿಕೊಳ್ಳಲು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡಿಮೆಗೊಳಿಸಲು, ತಿದ್ದುಪಡಿ ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಮಾಡಿಕೊಳ್ಳಲು ಹಾಗೂ ತಮ್ಮ ಹೆಸರು ಅರ್ಹತಾ ದಿನಾಂಕ ೦೧-೦೪-೨೦೨೪ಕ್ಕೆ ೧೮ ವರ್ಷ ಪೂರ್ಣಗೊಂಡಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ತಿದ್ದುಪಡಿ, ವರ್ಗಾವಣೆ ಅಥವಾ ಹೆಸರು ಇಲ್ಲದಿರುವುದು ಅಥವಾ ತಮ್ಮ ಕುಟುಂಬದ ಸದಸ್ಯರು ಮರಣಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ಮುಂದುವರೆದಿದ್ದರೆ ಕೈಬಿಡುವ ಕುರಿತಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಬಿಜೆಪಿ, ಕಾಂಗ್ರೆಸ್, ಜನತಾದಳ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.