ಉಡುಪಿ: ಭಂಡಾರಕೇರಿ ಮಠದಲ್ಲಿ ಇಂದಿನಿಂದ 13 ದಿನ ಭಾಗವತ ಪ್ರವಚನ

KannadaprabhaNewsNetwork |  
Published : Sep 05, 2024, 12:35 AM IST
ಭಂಡಾರ3 | Kannada Prabha

ಸಾರಾಂಶ

ಭಂಡಾರಕೇರಿ ಶಾಖಾ ಮಠದಲ್ಲಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರೋಷ್ಠಪದಿ ಭಾಗವತ ಪ್ರವಚನ ನಡೆಯಲಿದೆ. ಈ ಬಗ್ಗೆ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಭಂಡಾರಕೇರಿ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇಂದಿನಿಂದ (ಸೆ.4) 16ರ ವರೆಗೆ ಪ್ರೋಷ್ಠಪದಿ ಭಾಗವತ ಪ್ರವಚನ ನಡೆಯಲಿದೆ.

ಈ ಬಗ್ಗೆ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಶಾಶ್ವತವಾದ ಮೋಕ್ಷಕ್ಕೆ ಭಾಗವತ ಪಾರಾಯಣ - ಶ್ರವಣ ಉಪಾಯವಾಗಿದೆ. ಅದೇ ರೀತಿ ಬದುಕಿನಲ್ಲಿ ಉಂಟಾಗುವ ದಾರಿದ್ರ್ಯ ಮತ್ತು ದುಃಖ ಕಳೆದು ಕ್ಷೇಮಕ್ಕೂ ಭಾಗವತ ದಾರಿಯಾಗಿದೆ. ಸಮಾಜಮುಖಿ ಜೀವನವನ್ನು ನಡೆಸುವುದು ಹೇಗೆ ಎಂದು ಭಾಗವತ ಹೇಳಿಕೊಡುತ್ತದೆ. ಆದ್ದರಿಂದ ಭಾಗವತ ಪ್ರವಚನಕ್ಕೆ ತಾವು ಒತ್ತು ಕೊಟ್ಟಿದ್ದು, ಉಡುಪಿಯಲ್ಲಿ ಸುಮಾರು 300 ಮನೆಗಳಲ್ಲಿ ಪಾರಾಯಣ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.

ಈ ಭಾಗವತ ಪ್ರವಚನ ಕಾರ್ಯಕ್ರಮದಲ್ಲಿ ಮುಂದಿನ 13 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9ರಿಂದ 12ರ ವರೆಗೆ ವಿವಿಧ ವಿದ್ವಾಂಸರಿಂದ ಭಾಗವತ ಪ್ರವಚನ ಆಯೋಜಿಸಲಾಗಿದೆ.

ಸೆ. 4ರಂದು ಬೆಳಗ್ಗೆ 8.30 ಗಂಟೆಗೆ ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಚಾಲನೆ ನೀಡುವರು. ಬಳಿಕ ವೇದವ್ಯಾಸ ಪುರಾಣಿಕ್ ಮತ್ತು ಆಯನೂರು ಮಧುಸೂದನ ಆಚಾರ್ಯ ಪ್ರವಚನ ನೀಡುವರು.

ಸೆ. 5ರಂದು ಶ್ರೀನಿಧಿ ಆಚಾರ್ಯ ಪುತ್ತಿಗೆ ಮತ್ತು ಸುನಿಲ ಆಚಾರ್ಯ ಪುತ್ತಿಗೆ, 6ರಂದು ವಿಷ್ಣುವರ್ಧನ ಆಚಾರ್ಯ ಮಣಿಪಾಲ ಮತ್ತು ಷಣ್ಮುಖ ಹೆಬ್ಬಾರ್ ಉಡುಪಿ, 7ರಂದು ಬಿ. ಗೋಪಾಲಾಚಾರ್ ಉಡುಪಿ ಮತ್ತು ಮಧುಸೂದನ ಭಟ್ ಉಡುಪಿ, 8ರಂದು ಅಜಿತ ಆಚಾರ್ಯ ಉಡುಪಿ ಮತ್ತು ಹೆರ್ಗ ಹರಿಪ್ರಸಾದ ಭಟ್, 9ರಂದು ಸುದರ್ಶನ ಸಾಮಗ ಪಲಿಮಾರು ಮತ್ತು ವಂಶೀ ಕೃಷ್ಣಾಚಾರ್ಯ ಉಡುಪಿ, 10ರಂದು ಸಗ್ರಿ ಆನಂದತೀರ್ಥ ಉಪಾಧ್ಯಾಯ ಉಡುಪಿ ಮತ್ತು ಶಂಕರನಾರಾಯಣ ಭಟ್ ಪಲಿಮಾರು, 11ರಂದು ಶ್ರೀಪತಿ ಉಪಾಧ್ಯಾಯ ಉಚ್ಚಿಲ ಮತ್ತು ಪ್ರಕಾಶಾಚಾರ್ ಉಡುಪಿ, 12ರಂದು ಡಾ ಕಡಂದಲೆ ಗಣಪತಿ ಭಟ್ ಉಡುಪಿ ಮತ್ತು ಸತ್ಯನಾರಾಯಣ ಆಚಾರ್ಯ ಉಡುಪಿ, 13ರಂದು ಅನಿಲಾಚಾರ್ ಜೋಷಿ ಉಡುಪಿ ಮತ್ತು ಮಹೇಂದ್ರ ಸೋಮಯಾಜಿ ಉಡುಪಿ, 14ರಂದು ಲಕ್ಷ್ಮೀಶ ಆಚಾರ್ಯ ಉಡುಪಿ ಮತ್ತು ವಾಸುದೇವ ಆಚಾರ್ಯ ಕಲ್ಮಂಜೆ ಹಾಗೂ 15ರಂದು ವಾಗೀಶ ಆಚಾರ್ಯ ಉಡುಪಿ ಮತ್ತು ರವೀಂದ್ರ ಭಟ್ ಹೆರ್ಗ ಪ್ರವಚನ ನೀಡುವರು.

16ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು. ಶ್ರೀಶ ಮುದರಂಗಡಿ ಮತ್ತು ನರಹರಿ ಆಚಾರ್ಯ ಪ್ರವಚನ ನೀಡಲಿದ್ದು, ಭಾಗವತ ಅಭಿಯಾನದ ಪರಿಶ್ರಮ ಭೂಷಣರನ್ನು ಗೌರವಿಸಲಾಗುವುದು ಎಂದು ಶ್ರೀ ವಿದ್ಯೇಶತೀರ್ಥ ಶ್ರೀಪಾದರು ವಿವರಿಸಿದರು.

17ರಂದು ಚಾತುರ್ಮಾಸ್ಯ ವ್ರತ ಸಮಾಪನಗೊಳ್ಳಲಿದ್ದು, ಸಂಜೆ 5.30ರಿಂದ ಭಾಗವತ ನೀರಾಜನೋತ್ಸವ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.

ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು.

ಸುದ್ದಿಗೋಷ್ಠಿಯಲ್ಲಿ ಚಾತುರ್ಮಾಸ್ಯ ಸಮಿತಿಯ ಚಂದ್ರಶೇಖರ್, ರಾಜೇಶ ಭಟ್, ವಿಷ್ಣುಪ್ರಸಾದ ಪಾಡಿಗಾರು ಹಾಗೂ ಭಾಗವತ ಅಭಿಯಾನ ಸಂಚಾಲಕ ಯು.ಬಿ. ಶ್ರೀನಿವಾಸ ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್