ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 20,668 ಚದರ ಕಿ.ಮೀ ವಿಸ್ತೀರ್ಣ ಗುರುತು । ಜು. 27 ರಂದು 7ನೇ ಬಾರಿಗೆ ಹೊಸ ಕರಡು ಅಧಿಸೂಚನೆ
ಮಲೆನಾಡು ಭಾಗದ ಜನರ ಮನವಿ ಪರಿಗಣಿಸದ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಚಿಕ್ಕಮಗಳೂರಿನ 137 ಹಳ್ಳಿ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಗೆ ಸೇರಿರುವ ಸಾವಿರಾರು ಜನವಸತಿ ಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಜುಲೈ 27 ರಂದು 7ನೇ ಬಾರಿಗೆ ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ.
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ ಹತ್ತು ಜಿಲ್ಲೆಗಳ 20,668 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.ಮೊದಲ ಕರಡು ಅಧಿಸೂಚನೆಯಲ್ಲಿ ಇದ್ದಷ್ಟೇ ರಾಜ್ಯದ ಪ್ರದೇಶವನ್ನು ಮತ್ತೆ 7ನೇ ಕರಡು ಅಧಿಸೂಚನೆಯಲ್ಲೂ ಅಷ್ಟೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಈ ಹಿಂದಿನ ಕರಡು ಅಧಿಸೂಚನೆಗಳಿಗೆ ರಾಜ್ಯದ ನೂರಾರು ಗ್ರಾಮ ಪಂಚಾಯಿತಿಗಳು, ಸಾವಿರಾರು ನಾಗರಿಕರು, ಜನಪ್ರತಿನಿಧಿಗಳು ಸರ್ಕಾರ ಆಕ್ಷೇಪಣೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದ್ದರೂ ಒಂದೇ ಒಂದು ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಏಳನೆ ಕರಡು ಅಧಿಸೂಚನೆಯಲ್ಲಿ ಕಡಿಮೆ ಮಾಡದಿರುವುದು ಆತಂಕ ಮೂಡಿಸಿದೆ.
ಕೇಂದ್ರ ಸರ್ಕಾರದ ಹೊಸ ಕರಡು ಅಧಿಸೂಚನೆಯ ಅನುಬಂಧ ಸಿ ಪ್ರಕಾರ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾವಿರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಲಾಗಿದೆ.
-- ಬಾಕ್ಸ್....
ಕರಡು ಅಧಿಸೂಚನೆ ಪ್ರಕಟಗೊಂಡಿರುವುದು ಅಂತಿಮ ಘೋಷಣೆಯಲ್ಲವಾದರೂ ಸ್ಥಳೀಯ ನಿವಾಸಿಗಳು ಎಚ್ಚೆತ್ತು ಕೊಳ್ಳಬೇಕಿದೆ. ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿ ಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ತಮ್ಮ ಆಕ್ಷೇಪಣೆ, ತಿದ್ದುಪಡಿ ಸಲಹೆಗಳು ಅಥವಾ ಹೆಚ್ಚುವರಿ ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ಚಿಕ್ಕಮಗಳೂರು ತಾಲೂಕು 28 ಹಳ್ಳಿಗಳು: ಅತ್ತಿಗೇರಿ, ಬಸಾಪುರ, ಬಸರವಳ್ಳಿ, ಬೆರಣಗೋಡು, ಬಿಡಾರಿ, ಬಿಕ್ಕಾರ್ನಿ, ಬೋಗಶಿ, ಚರ್ಚಿಗುಡ್ ಕಾವಲ್, ದತ್ತಾತ್ರೇಯಪೀಠ, ಹೆಗ್ಗಾರಮಟ್ಟಿವಾಣಿ, ಹಿಪ್ಪಳ, ಹುಗೇರಿ, ಜಾಗರ, ಕಡವಂತಿ, ಕೇಸವಿ, ಕೇಸವಿನಮನೆ, ಕೊಳಗವೆ, ಮಾಡ್ಲ, ಮಲಾಗರು, ಮನಬೂರು, ಮೆಲಿನಹುಲುವತ್ತಿ, ಮೆಳಿಗಿರಿ, ಮೆಳುವತ್ತಿ, ಸಾರಗೋಡು, ಶಿರಗುರು, ಶಿವರ್ಷಿ ಹಾಗೂ ಸುಗಡವಾಣಿ ಗ್ರಾಮಗಳು ಪಟ್ಟಿಯಲ್ಲಿವೆ.ಕೊಪ್ಪ ತಾಲೂಕಿನ 31 ಹಳ್ಳಿಗಳು: ಅಡಗೆಬೈಲು, ಅಡದ, ಬೆಳವಾಡಿ, ಭಂಡಿಗಡಿ, ಬಿಳಗದ್ದೆ, ಬೊಳಪುರ, ದಯಂಬಳ್ಳಿ, ದೇವ ಗೋಡು, ದೇವರಹಳ್ಳಿ, ಗುಣವಂತೆ, ಹರಳಾನೆ, ಹೆಗ್ಗಾರು, ಹಿರೇಕೊಡಿಗೆ, ಹೊನಗಾರು, ಹೊಸೂರು, ಹುಲಿಗರಡಿ, ಕಗ್ಗ, ಕಳ್ಗುಂಡಿ, ಕರಿಮನೆ, ಕೆಳಕುಳಿ, ಕೇಸವೆ, ಕುಂಬಾರಕೊಪ್ಪ, ಕುಂಚೂರು, ಲೋಕನಾಥಪುರ, ಮಚ್ಚಿಕೊಪ್ಪ, ಮರಿತೊಟ್ಟಿಲು, ಮೇಗೂರು, ನುಗ್ಗಿ, ಶಂಕರಪುರ, ತಾಳಮಕ್ಕಿ ಎಸ್ಟೇಟ್ ಹಾಗೂ ಉದನ ಗ್ರಾಮ ಸೇರಿವೆ.
ನರಸಿಂಹರಾಜಪುರ ತಾಲೂಕಿನ 31 ಹಳ್ಳಿಗಳು: ಅಲೆಹಳ್ಳಿ, ಅರಳಿಕೊಪ್ಪ, ಬಾಳೆ, ಬೆಳ್ಳೂರು, ಭೈರಾಪುರ, ದಂಡುಬಿತ್ತರ, ದಾವಣಿ, ಗುಬ್ಬಿಗ, ಹಳಸೂರು, ಹರಂಬಳ್ಳಿ, ಹರವರಿ, ಹಾತೂರು, ಹೆಬ್ಬೆ, ಹೊಸೂರು, ಕದ್ಬಿಣಬೈಲು, ಕನೋಡಿ, ಕನೂರು, ಕರಕಿಸರ, ಕೊಂಕರೆ, ಕುಸಬೂರು, ಮಡಬೂರು, ಮಲ್ಲಂದೂರು, ಮೇಗರಮಕ್ಕಿ, ಮುಡಗುನಿ, ನಂದಿಗಾವಿ, ಸಾಲೂರು, ಸಂಕಶಿ, ಸರ್ಯಾ, ವಗಡೆ, ವರ್ಕಟಿ ಹಾಗೂ ವಿಠಲ ಗ್ರಾಮ ಸೇರಿವೆ.