ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಆರಂಭವಾದ 13ನೇ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ಸೈಕ್ಲಿಂಗ್ ಚಟುವಟಿಕೆಗಳಿಗೆ ನಗರದ ಬಿಎಲ್‌ಡಿಇ ಸಂಸ್ಥೆ ನೆರವು, ಸಹಕಾರ ನೀಡುತ್ತಿದೆ. ನಿರಂತರವಾಗಿ ಕ್ರೀಡೆಗಳನ್ನು ಆಯೋಜಿಸುತ್ತಿರುವ ಕರ್ನಾಟಕ ರಾಜ್ಯ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯ ಶ್ಲಾಘನೀಯವಾಗಿದೆ. ವಿಜಯಪುರದಲ್ಲಿ ವೆಲೋಡ್ರೋಮ್ ನಿರ್ಮಾಣವಾಬೇಕೆಂಬ ಕನಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ವಿಶೇಷ ಕಾಳಜಿಯೇ ಕಾರಣವಾಗಿದೆ ಎಂದರು.
ಕರ್ನಾಟಕ ರಾಜ್ಯ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಸೈಕ್ಲಿಸ್ಟ್ ಗಳ ವಿದ್ಯಾಭ್ಯಾಸಕ್ಕೆ ವೆಲೋಡ್ರೋಮ್ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸನ್ನು ಸಚಿವ ಎಂ.ಬಿ.ಪಾಟೀಲರು ನನಸು ಮಾಡಿದ್ದಾರೆ. ಸೈಕ್ಲಿಸ್ಟ್ ಗಳು ಇಲ್ಲಿ ಉತ್ತಮ ಅಭ್ಯಾಸ ಮಾಡಿ, ಹೆಚ್ಚಿನ ಸಾಧನೆಗೈಯ್ಯಲು ವೆಲೋಡ್ರೋಮ್ ಸಹಕಾರಿಯಾಗಲಿದೆ ಎಂದರು.ನೂತನ ವೆಲೋಡ್ರೋಮ್ ನಲ್ಲಿ ಪ್ರಥಮವಾಗಿ 13ನೇ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಆಯೋಜಿಸಿದ್ದಕ್ಕೆ ಸಂತಸವಾದ್ದು, ಕ್ರೀಡಾಕೂಟದಲ್ಲಿ 145 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜೊತೆಗೆ 50 ಕ್ರೀಡಾಧಿಕಾರಿಗಳು ಭಾಗವಹಿಸಿದ್ದಾರೆ ಎಂದರು.