ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇರೆ ಎಲ್ಲಾ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ 14000 ಮಕ್ಕಳು ಬೇಸಿಗೆ ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದರು. ಮಂಡ್ಯ ತಾಲೂಕಿನಲ್ಲಿ 4000 ಮಕ್ಕಳು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ನೋಂದಣಿಯಾಗಿದ್ದು ಸಂತಸ ತಂದಿದೆ ಎಂದು ನುಡಿದರು.ನಗರ ಪ್ರದೇಶಗಳಲ್ಲಿ ಮಾತ್ರ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದನ್ನು ಸರ್ಕಾರ ಗಮನಿಸಿ ಗ್ರಾಮೀಣ ಮಕ್ಕಳಿಗೆ ವಿಸ್ತರಿಸಿರುವುದು ಉತ್ತಮ ಬೆಳವಣಿಗೆ. ಕೀಲಾರ ಗ್ರಾಮ ಪಂಚಾಯ್ತಿ ಬಹಳ ವಿಶಿಷ್ಟ ರೀತಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅತ್ಯುತ್ತಮ ತರಬೇತಿ ನೀಡಿ ಅದ್ಧೂರಿಯಾಗಿ ಆಚರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪೂರ್ಣಿಮಾ, ಸದಸ್ಯರು, ಸಿಬ್ಬಂದಿವರ್ಗ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಕ ರಾಜು, ಹಾಸ್ಯ ನಟ ವಿನೋದ್ ಗೊಬ್ಬರಗಾಲ, ಡಾ.ಮುರಳಿ, ದೇವಾನಂದ ವರಪ್ರಸಾದ್, ವಿಜಿ ಕೀಲಾರ, ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿದ್ದರು.
ಮಂಡ್ಯ: 66/11 ಕೆ.ವಿ ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬ್ರೇಕರ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿತರಣಾ ಕೇಂದ್ರದಲ್ಲಿ ಹೊರಡುವ ನೆಹರುನಗರ, ಗುತ್ತಲು, ವೆಲ್ಸ್ಫನ್ ಮಾರ್ಗಗಳಲ್ಲಿ ಜೂನ್ 3 ರಂದು ಬೆಳಗ್ಗೆ 9 ರಿಂದ 10 ಮತ್ತು ಸಂಜೆ 5 ರಿಂದ 6 ರ ವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯವಾಗಲಿದೆ. ನಗರ ಪ್ರದೇಶದ ಫ್ಯಾಕ್ಟರಿ ಸರ್ಕಲ್, ಗುತ್ತಲು ರಸ್ತೆ, ಅರ್ಕೇಶ್ವರ ನಗರ, ಸಾಹುಕಾರ್ ಚನ್ನಯ ಬಡಾವಣೆ, ಸಾದತ್ ನಗರ, ಇಂದಿರಾ ಕಾಲೋನಿ, ವಿ.ವಿ.ಪುರಂ, ನೆಹರು ನಗರ, ಉದಯಗಿರಿ, ಲೇಬರ್ ಕಾಲೋನಿ, ಹಾಲನಹಳ್ಳಿ ಕೆರೆ, ಇಂಡಸ್ಟ್ರಿಯಲ್ ಏರಿಯಾ ಹಂತ-1 , ಹಂತ-2 ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.ನಾಳೆ ವಿದ್ಯುತ್ ವ್ಯತ್ಯಯ