ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ತುಮಕೂರು ಜಿಲ್ಲೆಯಲ್ಲೇ ನಮ್ಮ ತಾಲೂಕು ಅತಿ ಹೆಚ್ಚು ಸ್ವಂತ ಕಟ್ಟಡಗಳನ್ನು ಹೊಂದಿರುವ ತಾಲೂಕಾಗಿದೆ. ತಾಲೂಕಿನಲ್ಲಿ ಒಟ್ಟು 138 ಸಂಘಗಳು ಇದ್ದು, ಇವುಗಳ ಪೈಕಿ 118 ಸಂಘಗಳಿಗೆ ಸ್ವಂತ ಕಟ್ಟಡ ಇದೆ ಎಂದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಜಿಲ್ಲೆಯಲ್ಲಿ ಇರುವ ಸುಮಾರು 96 ಸಾವಿರ ಹೈನುಗಾರರು ಜಿಲ್ಲೆಯ ಹಾಲು ಒಕ್ಕೂಟಕ್ಕೆ ಪ್ರತಿ ದಿನ ಸುಮಾರು 12.25 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುತ್ತಿದ್ದಾರೆ. ಅವರಿಗೆ ಪ್ರತಿ ತಿಂಗಳು ಸುಮಾರು ₹140 ಕೋಟಿಯಷ್ಟು ಹಣವನ್ನು ಡಿಸಿಸಿ ಬ್ಯಾಂಕ್ ಮೂಲಕ ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮತ್ತು ಕೆಎಂಎಫ್ ನ ನಿರ್ದೇಶಕರೂ ಆದ ಸಿ.ವಿ.ಮಹಲಿಂಗಯ್ಯ ಹೇಳಿದರು.
ಪಟ್ಟಣದ ನಂದಿನಿ ಕ್ಷೀರ ಭವನ ಸಭಾಂಗಣದಲ್ಲಿ ತಾಲೂಕಿನ ಹೈನುಗಾರರಿಗೆ ಒಕ್ಕೂಟದ ವತಿಯಿಂದ ನೀಡಲಾದ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ತುಮಕೂರು ಜಿಲ್ಲೆಯಲ್ಲೇ ನಮ್ಮ ತಾಲೂಕು ಅತಿ ಹೆಚ್ಚು ಸ್ವಂತ ಕಟ್ಟಡಗಳನ್ನು ಹೊಂದಿರುವ ತಾಲೂಕಾಗಿದೆ. ತಾಲೂಕಿನಲ್ಲಿ ಒಟ್ಟು 138 ಸಂಘಗಳು ಇದ್ದು, ಇವುಗಳ ಪೈಕಿ 118 ಸಂಘಗಳಿಗೆ ಸ್ವಂತ ಕಟ್ಟಡ ಇದೆ ಎಂದರು.
ಜಿಲ್ಲೆಯಲ್ಲಿ ಸುಮಾರು 2 ಲಕ್ಷ ರಾಸುಗಳಿಗೆ ಉಚಿತವಾಗಿ ವಿಮೆ ಮಾಡಿಸಲಾಗಿದೆ. ಅದಕ್ಕಾಗಿ ₹30 ಕೋಟಿ ಹಣ ವಿನಿಯೋಗಿಸಲಾಗಿದೆ. ಮೃತಪಟ್ಟ ರಾಸುವಿನ ಗುಣಮಟ್ಟದ ಮೇರೆಗೆ ಕನಿಷ್ಠ ₹20 ಸಾವಿರದಿಂದ ₹75 ಸಾವಿರದವರೆಗೂ ವಿಮೆ ಹಣ ನೀಡಲಾಗುತ್ತಿದೆ. ಜಿಲ್ಲೆಯ ಹೈನುಗಾರರಿಗೆ ಸ್ವರ್ಧಾತ್ಮಕ ದರ ನೀಡಲಾಗುತ್ತಿದೆ. ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗುತ್ತದೆ. ರೈತ ಸರಬರಾಜು ಮಾಡಿರುವ ಹಾಲಿನ ಪ್ರಮಾಣ, ಅದರ ಜಿಡ್ಡಿನಾಂಶ, ಮೊತ್ತ ಎಲ್ಲವೂ ಕ್ಷಣ ಮಾತ್ರದಲ್ಲಿ ರೈತರ ಮೊಬೈಲ್ ಗೆ ಮಾಹಿತಿ ಲಭಿಸಲಿದೆ ಎಂದರು.
ಮರಣ ಹೊಂದಿದ 28 ರಾಸುಗಳ ಮಾಲೀಕರಿಗೆ ₹15 ಲಕ್ಷ ವಿಮಾ ಹಣದ ಚೆಕ್, ಕಲ್ಲಬೋರನಹಳ್ಳಿ, ಎ.ಹೊಸಳ್ಳಿಯಲ್ಲಿ ನಿರ್ಮಾಣ ಮಾಡಿರುವ ಕಟ್ಟಡದ ಎರಡನೇ ಹಂತದ ಹಣವಾಗಿ ತಲಾ ₹2 ಲಕ್ಷ ಮತ್ತು ಹಬುಕನಹಳ್ಳಿಯ ಕಟ್ಟಡ ನಿರ್ಮಾಣದ ಎರಡನೇ ಕಂತಿನ ಹಣವಾಗಿ ₹3 ಲಕ್ಷ ಚೆಕ್ ನ್ನು ಸಿ.ವಿ.ಮಹಲಿಂಗಪ್ಪ ವಿತರಿಸಿದರು.
ವಿಸ್ತೀರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.