ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಇಲ್ಲಿಯ ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕಿರಿಯ ಮತ್ತು ಹಿರಿಯ ಶ್ರೇಣಿಯ ನ್ಯಾಯಾಲಯಗಳಿಂದ ಒಟ್ಟು 1671 ಪ್ರಕರಣಗಳನ್ನು ಕೈಗೆತ್ತಿಕೊಂಡು, ಅದರಲ್ಲಿ 1479 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಉಷಾರಾಣಿ ಆರ್. ಮತ್ತು ಮನುಶರ್ಮ ಎಸ್.ಪಿ ನೇತೃತ್ವದಲ್ಲಿ ರಾಜೀ ಸಂಧಾನದ ಪ್ರಕ್ರಿಯೆ ಜರುಗಿತು.
ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 846 ಪ್ರಕರಣಗಳ ಪೈಕಿ 707 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು ₹1.48 ಕೋಟಿ ಮತ್ತು ಬ್ಯಾಂಕ್ ದಾವೆ ಪೂರ್ವ ಪ್ರಕರಣಗಳನ್ನು ಹಣದ ರೂಪದಲ್ಲಿ ಇತ್ಯರ್ಥಪಡಿಸಿದರು. ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 825 ಪ್ರಕರಣಗಳ ಪೈಕಿ 772 ಪ್ರಕರಣ ಇತ್ಯರ್ಥ ಪಡೆಸಿ, ಒಟ್ಟು ₹1.32 ಕೋಟಿ ಹಣದ ರೂಪದಲ್ಲಿ ಇತ್ಯರ್ಥಪಡಿಸಿದರು. ಉಭಯ ನ್ಯಾಯಾಲದಲ್ಲಿ ಒಟ್ಟು 1479 ಪ್ರಕರಣಗಳು ಇತ್ಯರ್ಥಗೊಂಡವು.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ದೂರವಾಗಿದ್ದ ಒಂದು ಜೋಡಿಯನ್ನು ಪರಸ್ಪರ ಹೊಂದಾಣಿಕೆ ಮಾಡಿಸಿ ಒಗ್ಗೂಡಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್, ಉಪಾಧ್ಯಕ್ಷ ಬಾಗಳಿ ಮಂಜುನಾಥ, ಕಾರ್ಯದರ್ಶಿ ಎಂ. ಮಲ್ಲಪ್ಪ, ಖಜಾಂಚಿ ಕೆ. ಸಣ್ಣ ನಿಂಗನಗೌಡ, ಸರ್ಕಾರಿ ಅಭಿಯೋಜಕರಾದ ಎನ್. ಮಿನಾಕ್ಷಿ, ನಿರ್ಮಲ, ವಕೀಲರಾದ ವಿ.ಜಿ. ಪ್ರಕಾಶ್ ಗೌಡ, ಎಸ್.ಜಿ. ತಿಪ್ಪೇಸ್ವಾಮಿ, ಎಂ.ಮೃತ್ಯುಂಜಯ, ಡಿ.ಹನುಮಂತಪ್ಪ, ಕೇಶವಮೂರ್ತಿ, ಕೊಂಗನಹೊಸರು ಸಿದ್ದೇಶ್, ಬಿ.ತಿಪೇಶ್, ವಾಮದೇವಾ, ಕೆ. ಕೋಟ್ರೇಶ್, ಸಿ. ಹಾಲೇಶ್, ಹನುಮಂತಪ್ಪ, ಸಿ.ಜೆ. ಸೀಮಾ, ದಾಕ್ಷಾಯಣಿ, ಉಭಯ ನ್ಯಾಯಾಲಯದ ಸಿಬ್ಬಂದಿಗಳಾದ ನಟರಾಜ್, ನಾಗರಾಜ್, ಗುಡೆಕೊಟೆ ನಾಗರಾಜ್, ಕುಬೇರ, ತಾಲೂಕು ಪ್ರಾಧಿಕಾರದ ಸಿಬ್ಬಂದಿ ಕೊಟ್ರೇಶ್ ಮತ್ತು ಬಸವರಾಜ್ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಮತ್ತು ಇತರರು ಇದ್ದರು.