ಹಾಲು ಉತ್ಪಾದಕರಿಗೆ ಶೇ.3 ಬಡ್ಡಿದರದಲ್ಲಿ ₹15 ಲಕ್ಷ ಸಾಲ : ಸತೀಶ್

KannadaprabhaNewsNetwork |  
Published : Jun 25, 2026, 03:30 AM IST
Yalahanka

ಸಾರಾಂಶ

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಾರ್ಷಿಕ ಶೇ.3 ಬಡ್ಡಿದರದ ಸಾಲ ಯೋಜನೆಯಡಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಮತ್ತು ಬಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಹಾಲು ಉತ್ಪಾದಕರಿಗೆ ₹15 ಲಕ್ಷದವರೆಗೆ ಸಾಲ ನೀಡುವ ವಿನೂತನ ಯೋಜನೆಗೆ ಚಾಲನೆ  

  ಯಲಹಂಕ :  ರಾಜ್ಯ ಮತ್ತು ಕೇಂದ್ರ ಸರ್ಕಾರದ ವಾರ್ಷಿಕ ಶೇ.3 ಬಡ್ಡಿದರದ ಸಾಲ ಯೋಜನೆಯಡಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಮತ್ತು ಬಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಹಾಲು ಉತ್ಪಾದಕರಿಗೆ ₹15 ಲಕ್ಷದವರೆಗೆ ಸಾಲ ನೀಡುವ ವಿನೂತನ ಯೋಜನೆಗೆ ಚಾಲನೆ ನೀಡಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ತಿಳಿಸಿದ್ದಾರೆ.

ಬುಧವಾರ ಆಯೋಜಿಸಿದ್ದ ಸಾಲ ಮೇಳ

ರಾಜನಕುಂಟೆ ಶಿಬಿರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಾಲ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಲು ಉತ್ಪಾದಕ ರೈತರ ಆರ್ಥಿಕ ಪ್ರಗತಿ ನಮ್ಮ ಪ್ರಮುಖ ಧ್ಯೇಯವಾಗಿದ್ದು, ಈ ದಿಸೆಯಲ್ಲಿ ಬಿಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಹೈನು ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುವ ನಿಟ್ಟಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಸಾಲ ಮೇಳಗಳ ಆಯೋಜನೆ ಮೂಲಕ ಪಹಣಿ, ನೋಟೇಶನ್, ಆಧಾರ್ ನಂಬರ್, ಬ್ಯಾಂಕ್ ಖಾತೆ ಮುಂತಾದ ಸರಳ ದಾಖಲೆಗಳನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಸ್ಥಳದಲ್ಲೇ ಪಡೆದು, ಪರಿಶೀಲಿಸಿ ತ್ವರಿತಗತಿಯಲ್ಲಿ ಸಾಲ ನೀಡುವುದು ಸಾಲ ಮೇಳದ ಉದ್ದೇಶವಾಗಿದೆ. ಬಮೂಲ್ ಬೆಂಗಳೂರು ಉತ್ತರ ಮತಕ್ಷೇತ್ರದ ವ್ಯಾಪ್ತಿಗೆ ಯಲಹಂಕ, ಯಶವಂತಪುರ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಕನಸುವಾಡಿ ಸೇರಿದಂತೆ ಬಿಡಿಸಿಸಿ ಬ್ಯಾಂಕ್‌ನ 3 ಶಾಖೆಗಳು ಬರಲಿವೆ. ಹಾಲು ಉತ್ಪಾದಕ ರೈತರು ಮೇಳದ ಸದುಪಯೋಗ ಪಡೆದುಕೊಳ್ಳುವ ಮೂಲಕ ಹೈನು ಉತ್ಪಾದನೆ ಹೆಚ್ಚಿಸಿ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

150ಕ್ಕೂ ಹೆಚ್ಚು ಹಾಲು ಉತ್ಪಾದಕ ರೈತರು ಸಾಲಕ್ಕಾಗಿ ಅರ್ಜಿ

ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಹಾಲು ಉತ್ಪಾದಕ ರೈತರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಜಿ.ರಾಜಕುಮಾರ್, ಬಮೂಲ್ ವ್ಯವಸ್ಥಾಪಕ ಡಾ.ಶಿವಶಂಕರ್, ಮಾರುಕಟ್ಟೆ ಉಪವ್ಯವಸ್ಥಾಪಕ ರಮೇಶ್, ಕನಸವಾಡಿ ಶಾಖೆ ವ್ಯವಸ್ಥಾಪಕ ರಮೆಶ್ ಕೆ.ಸಿ., ಮೇಲ್ವಿಚಾರಕ ರಂಗಸ್ವಾಮಿ ನಾಯಕ್, ಯಶವಂತಪುರ ಶಾಖೆಯ ಮೇಲ್ವಿಚಾರಕ ಡಿ.ವಿ. ಶಿವಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹನಿಟ್ರ್ಯಾಪ್, ಕಿಡ್ನ್ಯಾಪ್ ಪ್ರಕರಣ; 8 ಆರೋಪಿಗಳು ಅರೆಸ್ಟ್
ಎಲ್ಲ ಪ್ರಾಣಿಗಳಿಗೂ ಹಿಂಸೆಯಿಲ್ಲದೇ ಬದುಕುವ ಹಕ್ಕು ಹೊಂದಿವೆ : ಕೋರ್ಟ್‌