ಸಾತನೂರು ನಾಲೆ ಅಭಿವೃದ್ಧಿಗೆ ೧೫೦ಕೋಟಿ ರು. ಅನುದಾನ: ಶಾಸಕ ಪಿ. ರವಿಕುಮಾರ್‌

KannadaprabhaNewsNetwork |  
Published : Feb 13, 2025, 12:45 AM IST
12ಕೆಎಂಎನ್‌ಡಿ-6ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ೭೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗು ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್‌ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ನಾಲೆ ಅಭಿವೃದ್ಧಿಯಾಗಬೇಕು ಎನ್ನುವುದು ಈ ಭಾಗದ ಜನರ ಬಹಳ ವರ್ಷಗಳ ಕನಸಾಗಿತ್ತು. ಕಳೆದ ವರ್ಷ ೧೦೦ ಕೋಟಿ ರು. ಕಾಮಗಾರಿಗೆ ಟೆಂಡರ್ ಆಗಿದೆ. ಈ ವರ್ಷ ಇನ್ನೂ ೧೫೦ ಕೋಟಿ ರು. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಮಂತ್ರಿ ಎನ್.ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಗ್ರಾಮದಲ್ಲಿ ಹಾದುಹೋಗಿರುವ ನಾಲೆಯ ಅಭಿವೃದ್ಧಿಗೆ 150 ಕೋಟಿ ರು. ಬಿಡುಗಡೆ ಮಾಡಿರುವುದಾಗಿ ಶಾಸಕ ಪಿ.ರವಿಕುಮಾರ್‌ ಹೇಳಿದರು.

ತಾಲೂಕಿನ ಸಾತನೂರಿನಲ್ಲಿ ೭೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್‌ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದಲ್ಲಿರುವ ಬೀರೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ವಿವಿಧ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತೇವೆ, ಎಲ್ಲರ ಸಹಕಾರ ಹೀಗೇ ಇರಲಿ ಎಂದರು.

ನಾಲೆ ಅಭಿವೃದ್ಧಿಯಾಗಬೇಕು ಎನ್ನುವುದು ಈ ಭಾಗದ ಜನರ ಬಹಳ ವರ್ಷಗಳ ಕನಸಾಗಿತ್ತು. ಕಳೆದ ವರ್ಷ ೧೦೦ ಕೋಟಿ ರು. ಕಾಮಗಾರಿಗೆ ಟೆಂಡರ್ ಆಗಿದೆ. ಈ ವರ್ಷ ಇನ್ನೂ ೧೫೦ ಕೋಟಿ ರು. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಮಂತ್ರಿ ಎನ್.ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ. ಇದರಿಂದ ನಾಲೆಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಶಾಲೆಯಿಂದ ಸಾಗುವ ರಸ್ತೆ ಅಭಿವೃದ್ದಿಗೆ ೫೦ ಲಕ್ಷ ರು. ನೀಡಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಅಶ್ವಿನಿ, ಗ್ರಾಪಂ ಸದಸ್ಯರಾದ ವೆಂಕಟೇಶ್‌, ಮಮತಾ, ಮಂಜುಳಾ, ಪ್ರಕಾಶ್, ಯೋಗೇಶ್, ಮನು, ಪಿಡಿಓ ಮಹೇಶ್, ಗ್ರಾಮದ ಮುಖಂಡರಾದ ಮಹೇಶ್, ಸುರೇಶ್, ಸಾತನೂರು ಕೃಷ್ಣ, ಯಜಮಾನರು ಹಾಜರಿದ್ದರು.

ಇಂದು ವಿಶ್ವರೈತ ನಾಯಕ ಪ್ರೊ.ನಂಜುಂಡಸ್ವಾಮಿ ಜಯಂತ್ಯುತ್ಸವ

ಮದ್ದೂರು:

ವಿಶ್ವ ರೈತ ನಾಯಕ‌ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 89 ನೇ ಜಯಂತೊತ್ಸವವನ್ನು ಪಟ್ಟಣದಲ್ಲಿ ಫೆ.13ರಂದು ಆಚರಿಸಲಾಗುತ್ತಿದೆ ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ರೈತ ಚೈತನ್ಯ ಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ತಿಳಿಸಿದ್ದಾರೆ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಚಿಂತನೆ ಹಾಗೂ ವಿಚಾರಧಾರೆಗಳು ವರ್ಷಗಳು ಉರುಳಿದಂತೆಲ್ಲಾ ಹೆಚ್ಚೆಚ್ಚು ಉಪಯುಕ್ತವು ಅತ್ಯಗತ್ಯವು ಆಗಿದೆ. ಶ್ರೀಯುತರು ಜಾಗತಿಕರಣ, ಉದಾರೀಕರಣ, ಖಾಸಗೀಕರಣ ಉಂಟು ಮಾಡುವ ಆಪಾಯದ ಕುರಿತು ಎಚ್ಚರಿಸಿದ ಸಂಗತಿಗಳು ಇಂದು ವಾಸ್ತವವಾಗಿ ರೈತರು ಜನಸಾಮಾನ್ಯರನ್ನು ಕಾಡುತ್ತಿವೆ.

ಹೀಗಾಗಿ ಇನ್ನಾದರೂ ಜನರು ಜಾಗೃತಗೊಂಡು ಸಾಂಘಿಕ ಪ್ರಯತ್ನದ ಮೂಲಕ ತಮ್ಮಗಳ ರಕ್ಷಣೆಗೆ ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಪ್ರೊ.ಎಂ.ಡಿ.ಎನ್. ಜಯಂತಿಯನ್ನು ಆಚರಿಸಲಾಗುತ್ತಿದೆ.

ರಾಜ್ಯದಲ್ಲೆ ಮೊದಲಿಗೆ ಪ್ರೊ.ಎಂಡಿಎನ್ ಪ್ರತಿಮೆ ಸ್ಥಾಪಿಸಿದ ಹಿರಿಮೆ ಹೊಂದಿಹ ಜಾಗೃತ ಹೊರಾಟಗಳ ಭೂಮಿಕೆಯಾದ ಮದ್ದೂರಿನಲ್ಲಿ ನಾಳೆ ನಡೆಯುವ ಜಯಂತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷ, ಕಸಾಪ, ಸಂವಿಧಾನ ರಕ್ಷಣಾ ಸಮಿತಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ನಾಡ ಪ್ರಭು ಶ್ರೀ ಕೆಂಪೇಗೌಡ ಒಕ್ಕಲಿಗರ ಸಂಘ, ತೆಂಗು ಬೆಳೆಗಾರರ ಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರೈತರು, ನಾಗರೀಕರು, ವಿಧ್ಯಾರ್ಥಿಗಳು ಭಾಗವಹಿಸುವಂತೆ ನ.ಲಿ.ಕೃಷ್ಣ ಮನವಿ ಮಾಡಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ