ಸಾಹೇ ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವ

KannadaprabhaNewsNetwork |  
Published : Nov 29, 2026, 01:15 AM IST
ಬರಗೂರು ರಾಮಚಂದ್ರಪ್ಪಗೆ ಗೌರವ ಡಾಕ್ಟರೇಟ್ ಪ್ರದಾನ | Kannada Prabha

ಸಾರಾಂಶ

ಕಲ್ಪತರು ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಕಲ್ಪತರು ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವ ವಿಜೃಂಭಣೆಯಿಂದ ನಡೆಯಿತು.ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದ ಆವರಣದಲ್ಲಿ ನಡೆದ ಸಾಹೇ ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಎಂಸಿಎ, ಎಂಟೆಕ್, ಪಿಎಚ್.ಡಿ ಸೇರಿದಂತೆ ಒಟ್ಟು 1347 ವಿದ್ಯಾರ್ಥಿಗಳಿಗೆ ವಿವಿಯ ಕುಲಾಧಿಪತಿಗಳಾದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪದವಿ ಪ್ರದಾನ ಮಾಡಿದರು.ಹಾಗೆಯೇ ವೈದ್ಯಕೀಯದಲ್ಲಿ 4, ದಂತ ವೈದ್ಯಕೀಯದಲ್ಲಿ 2, ಎಂಜಿನಿಯರಿಂಗ್‌ನಲ್ಲಿ 10, ಎಂಸಿಎ ಮತ್ತು ಎಂಟೆಕ್ 2 ಸೇರಿ ಒಟ್ಟು 18 ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು. ಹಾಗೆಯೇ 18 ಪಿಹೆಚ್‌ಡಿ ಪದವಿ, 8 ಮಂದಿಗೆ ಫೆಲೋಶಿಪ್ ಪದವಿ ನೀಡಲಾಯಿತು. ಗೌರವ ಡಾಕ್ಟರೇಟ್ 15 ನೇ ಸಾಹೇ ಘಟಿಕೋತ್ಸವದ ಪ್ರಮುಖ ಕೇಂದ್ರ ಬಿಂದುವಾಗಿದ್ದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು 2026 ರ ಪದ್ಮಶ್ರೀ ಪುರಸ್ಕೃತರಾದ ಡಾ. ಶುಭಾ ವೆಂಕಟೇಶ ಅಯ್ಯಂಗಾರ್, ಹಿರಿಯ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ತಮಿಳುನಾಡಿನ ಪ್ರಸಿದ್ಧ ವೈದ್ಯ ಡಾ. ಸಿ. ಪಳನಿವೇಲು ಅವರಿಗೆ ವಿವಿಯ ಕುಲಾಧಿಪತಿಗಳಾದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು. ಹಾಗೆಯೇ ಡಾಕ್ಟರೇಟ್ ಪದವಿ-18, ಎಂಜಿನಿಯರಿಂಗ್-794, ವೈದ್ಯಕೀಯ-492, ದಂತ ವೈದ್ಯಕೀಯ-34 ವಿದ್ಯಾರ್ಥಿ ಗಳಿಗೆ ಪದವಿ ಪ್ರದಾನ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇಂಜಿನಿಯರಿಂಗ್-1, ವೈದ್ಯಕೀಯ-2 ಹಾಗೂ ದಂತ ವೈದ್ಯಕೀಯ-1 ವಿದ್ಯಾರ್ಥಿಗಳಿಗೆ ಉಪಮುಖ್ಯಮಂತ್ರಿಗಳು ಪದವಿ ಪ್ರದಾನ ಮಾಡಿ ಪ್ರೋತ್ಸಾಹಿಸಿದರು.ಚಿನ್ನದ ಪದಕ ಪಡೆದವರ ಸಂಭ್ರಮ ಟಿ. ಬೇಗೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಡಾ. ಅನಿಕಾ ರಾಧಾಕೃಷ್ಣನ್, ಡಾ. ರಿಯಾ ಘೋರುಯಿ (ಎಂ.ಡಿ), ಡಾ. ಶಿಬಾನಿ ವಿ. (ಎಂ.ಡಿ), ಚೈತ್ರಾ ಕೆ.ಎಲ್., ದಂತ ವೈದ್ಯಕೀಯದಲ್ಲಿ ಡಾ. ಆಕಾಶ್‌ಕುಮಾರ್, ಡಾ. ಶಿಂಧೆ ಕೌಸ್ತುಬ್ ಶರದ್‌ಕುಮಾರ್, ಎಂಜಿನಿಯರಿಂಗ್‌ನಲ್ಲಿ ಧನುಶ್ರೀ ಸಿ. (ಕಂಪ್ಯೂಟರ್ ಸೈನ್ಸ್), ಮೇಘನಾ ಕೆ. (ಸಿವಿಲ್), ಯೋಗೇಶ್ವರಿ ಕೆ.ಎನ್. (ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್), ಪೂರ್ಣವಿ ‌ಡಿ. (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್), ಸ್ಮಿತಾ ಆರ್.ಪಿ. (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್), ಪೂಜಾ ಎಸ್. (ಇನ್ ಫರ್ಮೇಷನ್ ಸೈನ್ಸ್), ಟಿ.ಎನ್. ಮನೋಜ್ (ಮೆಕಾನಿಕಲ್ ಎಂಜಿನಿಯರಿಂಗ್) ಹಾಗೂ ಲಿಖಿತಾಶ್ರೀ ಡಿ.ಬಿ. (ಮೆಡಿಕಲ್ ಎಲೆಕ್ಟ್ರಾನಿಕ್ಸ್), ಅಂಬರ್ ಎಸ್. (ಎಐ ಅಂಡ್ ಮೆಷಿನ್ ಲರ್ನಿಂಗ್), ಎನ್. ವರ್ಷಿತ್ (ಸಿ.ಎಸ್. ಅಂಡ್ ಡೇಟಾ ಸೈನ್ಸ್), ಎಂಬಿಎ ನಲ್ಲಿ ಉಷಾ ಜಿ.ಡಿ., ಎಂಸಿಎನಲ್ಲಿ ಅನಘಾ ಬಿ.ವಿ. ಅವರು ವಿವಿಯ ಕುಲಾಧಿಪತಿಗಳಾದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರವರಿಂದ ಚಿನ್ನದ ಪದಕ ಪಡೆದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ್ ಅವರು ಪದವಿ ಪ್ರಮಾಣದ ಗೌಪ್ಯತೆಯನ್ನು ವಿದ್ಯರ್ಥಿರಗಳಿಗೆ ಬೋಧಿಸಿದರು.

ಖುಷಿಪಟ್ಟ ವಿದ್ಯಾರ್ಥಿತಗಳು....ಸಾಹೇ ವಿವಿಯ 15 ನೇ ಘಟಿಕೋತ್ಸದಲ್ಲಿ ಪದವಿ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಎಂಸಿಎ, ಎಂಬಿಎ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಘಟಿಕೋತ್ಸವದ ಧಿರಿಸಿನಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.ಸಮಾರಂಭದಲ್ಲಿ ಸಂಸ್ಥೆಯ ಕನ್ನಿಕಾ ಪರಮೇಶ್ವರ್, ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಕುಲಸಚಿವ ಡಾ. ಅಶೋಕ್ ಮೆಹ್ತಾ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ. ಸುನೀಲ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ.ಎನ್, ಉಪ ಕುಲಸಚಿವ ಡಾ.ಸುದೀಪ್ ಕುಮಾರ್, ಟಿ. ಬೇಗೂರಿನ ಶ್ರೀ ಸಿದ್ಧರ್ಥೊ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ. ದಿವಾಕರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ. ನಡಕಟ್ಟಿ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆಗಳಿಗೆ ಸ್ಪಂದಿಸುವುದೇ ಪ್ರಜಾಸೇವೆ: ಶಾಸಕ ಟಿ.ಬಿ. ಜಯಚಂದ್ರ
ದರ ಕುಸಿತಕ್ಕೆ ಕಂಗಾಲಾದ ಚಿಕ್ಕಬಳ್ಳಾಪುರ ಹೂ ಬೆಳೆಗಾರರು