ವಿಜಯಪುರ: ಪಟ್ಟಣದ ಆಂಜನೇಯಸ್ವಾಮಿ ಪಾದಯಾತ್ರೆ ಭಕ್ತರ ಬಳಗದಿಂದ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ, ನಾರಾಯಣನ ಸನ್ನಿಧಾನವೆಂದೇ ಪ್ರಸಿದ್ಧಿ ಪಡೆದಿರುವ ಗೌತಮಗಿರಿ ಶ್ರೀ ಕ್ಷೇತ್ರ ತಿಮ್ಮರಾಯಸ್ವಾಮಿ ಬೆಟ್ಟಕ್ಕೆ ೧೫ನೇ ವರ್ಷದ ಪಾದಯಾತ್ರೆಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗದ ನಂತರ ಚಾಲನೆ ನೀಡಲಾಯಿತು. ನೂರಾರು ಭಕ್ತಾದಿಗಳು ಶ್ರೀರಾಮನಾಮ ಸ್ಮರಣೆ ಮತ್ತು ಭಜನೆ ಮಾಡುತ್ತಾ ದಂಡಿಗನಹಳ್ಳಿ, ಹಾರೋಹಳ್ಳಿ ಹಾಗೂ ಬುಳ್ಳಹಳ್ಳಿ ಮಾರ್ಗವಾಗಿ ತಿಮ್ಮರಾಯಸ್ವಾಮಿ ಬೆಟ್ಟ ತಲುಪಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹಾದಿಯುದ್ದಕ್ಕೂಉಪಾಹಾರ-ಪ್ರಸಾದ ಸೇವೆ
ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಭಕ್ತ ಮಂಡಳಿಯಿಂದ ಪ್ರಸಾದ ಸೇವೆ. ದಂಡಿಗಾನಹಳ್ಳಿ ಬಳಿ ತೇಜಸ್ವಿನಿ ಮಲ್ಲಿಕಾರ್ಜುನ್ ಆಚಾರಿ ಕುಟುಂಬದವರಿಂದ ಕಾಫಿ ಮತ್ತು ಬಿಸ್ಕತ್ ವಿತರಣೆ. ಹಾರೋಹಳ್ಳಿ ಸಮೀಪ ಅರ್ಚಕ ಲೋಕನಾಥಾಚಾರ್ಯ ಕುಟುಂಬದಿಂದ ತಂಪು ಪಾನೀಯ ಸೇವೆ.ಬುಳ್ಳಹಳ್ಳಿಬಳಿ ಸಮಾಜ ಸೇವಕ ಎಸ್‌ಎಲ್‌ಎನ್ ಲಕ್ಷ್ಮೀನಾರಾಯಣ್ ಅವರಿಂದ ಹಣ್ಣು, ಬಾಳೆಕಾಯಿ ಮಂಡಿ ಉಮೇಶ್ ಅವರಿಂದ ಬಾಳೆಹಣ್ಣು ಹಾಗೂ ಹೋಟೆಲ್ ಮಂಜುನಾಥ್‌ರಿಂದ ಹಾದಿಯುದ್ದಕ್ಕೂ ಕುಡಿಯುವ ನೀರಿನ ಸೇವೆ ನಡೆಯಿತು.
(ಫೋಟೋ ಕ್ಯಾಫ್ಷನ್)