ನಮ್ಮ ಸಂಘಟನೆ ರಾಜ್ಯದ ಇತರೆ ಕನ್ನಡ ಪರ ಸಂಘಟನೆಗಳಿಗಿಂತ ವಿಭಿನ್ನವಾಗಿದ್ದು, ಕೇವಲ ನೆಲ, ಜಲ, ಗಡಿ ವಿಚಾರವಾಗಿ ಹೋರಾಟ ಮಾಡದೇ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸುಮಾರು 167 ಮನೆಗಳನ್ನು ಕಟ್ಟಿಸಿಕೊಟ್ಟು ಅವರಿಗೆ ಶಾಶ್ವತ ನೆರಳು ಕಲ್ಪಿಸಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಹೇಳಿದರು.
ಹಾವೇರಿ: ನಮ್ಮ ಸಂಘಟನೆ ರಾಜ್ಯದ ಇತರೆ ಕನ್ನಡ ಪರ ಸಂಘಟನೆಗಳಿಗಿಂತ ವಿಭಿನ್ನವಾಗಿದ್ದು, ಕೇವಲ ನೆಲ, ಜಲ, ಗಡಿ ವಿಚಾರವಾಗಿ ಹೋರಾಟ ಮಾಡದೇ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸುಮಾರು 167 ಮನೆಗಳನ್ನು ಕಟ್ಟಿಸಿಕೊಟ್ಟು ಅವರಿಗೆ ಶಾಶ್ವತ ನೆರಳು ಕಲ್ಪಿಸಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಆಯಾ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡುತ್ತಿದ್ದೇವೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಹಾಗೂ ಕಳಪೆ ಬೀಜ, ಕಳಪೆ ಗೊಬ್ಬರ ಹಾಗೂ ಹಾವೇರಿ ಜಿಲ್ಲೆಯ 2022-23ನೇ ಸಾಲಿನ ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದೇವೆ ಎಂದರು.ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ಕಳಪೆ ಬೀಜ ವಿತರಣೆ, ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಿದ್ದ ಕಾರಣ ಬೆಳೆಗಳು ಸಂಪೂರ್ಣ ನಾಶವಾಗಿವೆ. 2022-23ನೇ ಸಾಲಿನ ನೆರೆಸಂತ್ರಸ್ತ ಫಲಾನುಭವಿಗಳಿಗೆ ಇದುವರೆಗೂ ಕೂಡಾ ಸರಿಯಾದ ನ್ಯಾಯ ಸಿಕ್ಕಿಲ್ಲ. ಜಿಲ್ಲೆಯ ಸುಮಾರು 2000ಕ್ಕಿಂತ ಹೆಚ್ಚು ಮನೆಗಳು ಬ್ಲಾಕ್ ಲಿಸ್ಟನಲ್ಲಿ ಬ್ಲಾಕ್ ಆಗಿವೆ. ಇದರ ವಿರುದ್ಧವಾಗಿ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಇದುವರೆಗೂ ಕೂಡಾ ಯಾವುದೇ ನ್ಯಾಯ ಒದಗಿಸಿಲ್ಲ ಎಂದು ದೂರಿದರು.ಹಾವೇರಿ ತಾಲೂಕು ಗುತ್ತಲ ಗ್ರಾಮದಲ್ಲಿ ರಸ್ತೆಗಳಲ್ಲಿ ಸಾಕಷ್ಟು ಹೊಂಡ ಬಿದ್ದು ಓಡಾಡುವುದು ಕಷ್ಟಕರವಾಗಿದೆ. ಈ ಬಗ್ಗೆ ಸುಮಾರು ಬಾರಿ ಪಟ್ಟಣ ಪಂಚಾಯತಿಯವರಿಗೆ ಮನವಿ ಸಲ್ಲಿಸಿದರೂ ಕೂಡಾ ಉಡಾಪೆ ಉತ್ತರವನ್ನು ಕೊಡುತ್ತಾ ಬಂದಿರುತ್ತಾರೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ, ಉಗ್ರವಾದ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ ಮುರುಡೆಪ್ಪನವರ, ನಾಗರಾಜ ಮಡಿವಾಳರ, ಲಕ್ಷ್ಮಿ ಜೋಶಿ, ಪ್ರಕಾಶ ಗೋಣೆಮ್ಮನವರ, ಪ್ರೇಮಲತಾ ಮುದ್ದಿ, ಆನಂದ ಹಡಪದ, ಬಸವರಾಜ ಹಡಪದ, ರೂಪಾ ಭಂಗಿ, ಗೀತಾ ಅರಳಳ್ಳಿಮಠ, ನಾಗರಾಜ ಶಿಡ್ಲಣ್ಣನವರ, ಜ್ಯೋತಿ ಶಿಗಳ್ಳಿ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.