- ಸುಸಜ್ಜಿತ ಕ್ಯಾಮೆರಾದೊಂದಿಗೆ ವಾಹನ ಸಂಚಾರ ಗಣತಿ: ಪಾಟೀಲ್
----ಕನ್ನಡಪ್ರಭ ವಾರ್ತೆ ಹುಣಸಗಿ
ಯಾವುದೇ ರಾಜ್ಯ ಹೆದ್ದಾರಿ ಅಥವಾ ಜಿಲ್ಲಾ ಮುಖ್ಯರಸ್ತೆಯ ಮೇಲಿನ ವಾಹನಗಳ ಸಂಚಾರದ ತೀವ್ರತೆಯನ್ನು ಪ್ರತಿವರ್ಷ ಲೋಕೋಪಯೋಗಿ ಹಾಗೂ ಒಳನಾಡು ಬಂದರೂ ಸಾರಿಗೆ ಇಲಾಖೆ ಕೈಗೊಳ್ಳಲಿದೆ ಎಂದು ಸುರಪುರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್. ಜಿ. ಪಾಟೀಲ್ ಹೇಳಿದರು.ಪಟ್ಟಣದ ಕಕ್ಕೇರಾದಲ್ಲಿ ಲೊಕೋಪಯೋಗಿ ಇಲಾಖೆ ಕೈಗೊಂಡ ಸರ್ವೇ ಕಾರ್ಯದ ಕ್ಯಾಮೆರಾ ಅಳವಡಿಸಿ ಒಂದು ವಾರಗಳ ಕಾಲದ ಸರ್ವೇ ಕಾರ್ಯದ ಕುರಿತು ಅವರು ಮಾತನಾಡಿದರು. ರಾಜ್ಯ ಹೆದ್ದಾರಿಗೆ 5 ಹಾಗೂ ಜಿಲ್ಲಾ ಮುಖ್ಯ ರಸ್ತೆಗೆ 17, 1080 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಈ ಎಲ್ಲಾ ಕ್ಯಾಮೆರಾಗಳು ಪ್ರತಿಯೊಂದು ವಾಹನಗಳ ಮೇಲೆ ನಿಗಾವಹಿಸಲಾಗುತ್ತದೆ ಎಂದರು.
ಹುಣಸಗಿಯಿಂದ ಕನಗಂಡನಹಳ್ಳಿ, ಕಕ್ಕೇರಾ, ತಿಂಥಣಿ ಬ್ರಿಜ್ ಭಾಗದಲ್ಲಿ ತೀವ್ರ ವಾಹನಗಳ ಸಂಚಾರವಿದೆ. ವಾಹನ ಸಂಚಾರದ ದಟ್ಟಣೆಯ ಆಧಾರದ ಮೇಲೆ ರಸ್ತೆ ಸುಧಾರಣೆ ಹಾಗೂ ಅಪಘಾತ ತಡೆಯಲು ಅನುಕೂಲವಾಗಲಿದೆ. ಇದರೊಂದಿಗೆ ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ಸಹಾಯಕವಾಗಲಿದೆ ಎಂದು ಅವರು ಹೇಳಿದರು.ಹುಣಸಗಿ-ತಿಂಥಣಿ ಬ್ರಿಜ್ ರಸ್ತೆಯಲ್ಲಿ ವಿಜಯಪುರ, ಮೀರಜ್, ಸೋಲಾಪೂರ, ಮಂತ್ರಾಲಯ, ಶ್ರೀಶೈಲ್, ಕರ್ನೂಲ, ರಾಯಚೂರು, ಬಳ್ಳಾರಿಗೆ ತೆರಳುವವರಿಗೆ ಅಂತರವನ್ನು ಕಡಮೆ ಮಾಡುವ ಉಳಿತಾಯದ ಮಾರ್ಗವಾಗಿದೆ. ಸೋಮವಾರ ದಿ.17 ರಿಂದ ದಿ.24 ರವರೆಗೆ ಸರ್ವೇ ಕಾರ್ಯ ನಡೆಯಲಿದೆ. ಹುಣಸಗಿಯ ಜಿಲ್ಲಾ ಮುಖ್ಯರಸ್ತೆ, ರಾಜ್ಯ ಹೆದ್ದಾರಿಗಳಲ್ಲಿ ಸುಧಾರಿತ ಕ್ಯಾಮರಾ ಬಳಸಿ ಒಂದು ವಾರದವರೆಗೆ ದಿನವಿಡೀ ನಿರಂತರ ವಾಹನಗಳ ಚಲನವಲನ ಹಾಗೂ ಅಂಕಿ-ಸಂಖ್ಯೆ ಸಂಗ್ರಹ ಮಾಡಬಹುದಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಎಂಜಿನೀಯರಗಳಾದ ರಾಜನ್, ಸಿದ್ಧರಾಮ ಮೋದಿ, ಅರವಿಂದ ಕಲಕೇರಿ, ಶಾಂತಪ್ಪ ಜೇಮ್ಸ್ ಇದ್ದರು.
----20ವೈಡಿಆರ್4: ಹುಣಸಗಿ ಸಮೀಪದ ಕಕ್ಕೇರಾ ರಸ್ತೆಯಲ್ಲಿ ಅಧುನಿಕ ಕ್ಯಾಮರಾ ಅಳವಡಿಸಿ ವಾಹನಗಳ ಸಂಚಾರ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದ ಲೋಕೋಪಯೋಗಿ ಎಇಇ ಎಸ್.ಜಿ. ಪಾಟೀಲ್ ಹಾಗೂ ಇಂಜಿನೀಯರುಗಳು.