ಜಾತ್ರೆಗಳಲ್ಲಿ ಹತ್ತು ಹಲವು ಸಂಕಷ್ಟಗಳ ನಿವಾರಣೆಗೆ ಭಕ್ತರು ಹರಕೆ ಹೊರುವುದು ಸರ್ವೆ ಸಾಮಾನ್ಯ. ಆದರೆ, ದಿನೇದಿನೇ ಏರುತ್ತಿರುವ ಚಿನ್ನದ ಬೆಲೆ ಬಡವರ ಕೈಗೆ ಎಟುಕುವಂತಾಗಲಿ ಎಂಬ ಆಶಯದೊಂದಿಗೆ ಬಾಳೆ ಹಣ್ಣುಗಳ ಮೇಲೆ ‘ಚಿನ್ನದ ದರ ಇಳಿಯಲಿ ಎಂದು ಬರೆದು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.

ಹಗರಿಬೊಮ್ಮನಹಳ್ಳಿ: ಜಾತ್ರೆಗಳಲ್ಲಿ ಹತ್ತು ಹಲವು ಸಂಕಷ್ಟಗಳ ನಿವಾರಣೆಗೆ ಭಕ್ತರು ಹರಕೆ ಹೊರುವುದು ಸರ್ವೆ ಸಾಮಾನ್ಯ. ಆದರೆ, ದಿನೇದಿನೇ ಏರುತ್ತಿರುವ ಚಿನ್ನದ ಬೆಲೆ ಬಡವರ ಕೈಗೆ ಎಟುಕುವಂತಾಗಲಿ ಎಂಬ ಆಶಯದೊಂದಿಗೆ ಭಕ್ತನೊಬ್ಬ ಜೋಡು ಬಾಳೆ ಹಣ್ಣುಗಳ ಮೇಲೆ ‘ಚಿನ್ನದ ದರ ಇಳಿಯಲಿ: ಮುನಿದ ಚಿನ್ನ ಒಲಿಯಲಿ’ ಎಂದು ಬರೆದು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ರಥೋತ್ಸವ

 ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ನಡೆದ ದುರ್ಗಮ್ಮದೇವಿ ರಥೋತ್ಸವದಲ್ಲಿ ಕೆ.ನಾಗರಾಜ್ ಎನ್ನುವ ಭಕ್ತ ಈ ರೀತಿ ಹರಕೆ ಹೊತ್ತಿದ್ದಾರೆ.

ಮದುವೆ ಕಾಲದ ಈ ಸಂದರ್ಭದಲ್ಲಿ ಚಿನ್ನ ಕೊಳ್ಳುವುದೇ ದುಸ್ತರ

ಮದುವೆ ಕಾಲದ ಈ ಸಂದರ್ಭದಲ್ಲಿ ಚಿನ್ನ ಕೊಳ್ಳುವುದೇ ದುಸ್ತರವಾಗಿರುವಾಗ ಬೆಲೆ ಇಳಿಯಲಿ ಎಂಬ ಆಶಯದೊಂದಿಗೆ ಹರಕೆ ಹೊತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.