ಕರ್ನಾಟಕ ಕ್ರೀಡಾಕೂಟ 2026ರ ಟೇಕ್ವಾಂಡೊ ಸ್ಪರ್ಧೆಯ ಮಹಿಳೆಯರ 46 ಕೆ.ಜಿ ವಿಭಾಗದಲ್ಲಿ ಸಂಜನಾ ಶರ್ಮಾ ಅವರು ಮೊದಲ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಕರ್ನಾಟಕ ಕ್ರೀಡಾಕೂಟ 2026ರ ಟೇಕ್ವಾಂಡೊ ಸ್ಪರ್ಧೆಯ ಮಹಿಳೆಯರ 46 ಕೆ.ಜಿ ವಿಭಾಗದಲ್ಲಿ ಸಂಜನಾ ಶರ್ಮಾ ಅವರು ಮೊದಲ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ವಿಹಾರಿಕಾ ನಯನಾ ವಿಷ್ಣು ಮತ್ತು ಅಭಿನಯ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಪುರುಷರ 45 ಕೆ.ಜಿ ವಿಭಾಗದಲ್ಲಿ ಪ್ರತ್ಯುಶ್ ಮಾಣಿ ಮತ್ತು ಎಚ್. ಅಬುಬಕ್ಕರ್ ಮೊದಲೆರಡು ಸ್ಥಾನ ಗಳಿಸಿದರೆ, ಮನೋಜ್ ನಾಯಕ್ ಎಂ.ಆರ್. ಮತ್ತು ತರುಣ್ ಕುಮಾರ್ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು. ಪುರುಷರ 54 ಕೆ.ಜಿ ವಿಭಾಗದಲ್ಲಿ ಅಕ್ಷಯ್ ಕುಮಾರ್ ಜಿ, ಸೂರ್ಯ್ ಎಸ್. ಮತ್ತು ವಿಜಯ್ ಧಾಮಿ ಮೊದಲ ಮೂರು ಸ್ಥಾನ ಗಳಿಸಿದರೆ, ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಪೂರ್ವಿಕಾ ಎಂ., ಸಾನ್ವಿ ಶ್ರೀಸಿ, ಅಂಕಿತಾ ನವ್ಯ ಕಾಂತ ಮತ್ತು ಸ್ಪಂದನಾ ಎಸ್ ಅವರು ಕ್ರಮವಾಗಿ ಮೊದಲ ನಾಲ್ಕು ಸ್ಥಾನ ಗಳಿಸಿದರು.