ಉಜ್ಜಯಿನಿ ಜಾತ್ರಾ ಮಹೋತ್ಸವ ಯಶಸ್ಸಿಗೆ ಸಹಕರಿಸಿ: ಮಲ್ಲೇಶ್ ದೊಡ್ಡಮನಿಹೆಸರಾಂತ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ಮೇ 2ರಂದು ಜರುಗಲಿದ್ದು, ಉಜ್ಜಯಿನಿ ಗ್ರಾಮದ ಪೊಲೀಸ್ ಉಪ ಠಾಣೆಯಲ್ಲಿ ಕೊಟ್ಟೂರು ಪೊಲೀಸ್ ಠಾಣೆ ವತಿಯಿಂದ ಶಾಂತಿಸಭೆ ಆಯೋಜಿಸಲಾಗಿತ್ತು. ಗ್ರಾಮದ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಲು ಗ್ರಾಪಂ ಆಡಳಿತಕ್ಕೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸೂಚಿಸಿದರು.