17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಸಂಪನ್ನ

KannadaprabhaNewsNetwork |  
Published : Nov 24, 2026, 01:30 AM IST
ಮಾಹೆಯಲ್ಲಿ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಸಂಪನ್ನಗೊಂಡಿತು  | Kannada Prabha

ಸಾರಾಂಶ

ಇಲ್ಲಿನ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗವು ಮಾಹೆಯ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನ (ಎಂಸಿಎಚ್‌ಪಿ) ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಬಾರಿ ಈ ಸಮಾವೇಶವು ‘ಪೀಡಿಯಾಟ್ರಿಕ್ ಕಾರ್ಡಿಯಾಲಜಿ-ಬ್ಯಾಕ್ ಟು ಬೇಸಿಕ್ಸ್’ ಎಂಬ ವಿಷಯದಲ್ಲಿ ನಡೆಯಿತು.

ಮಣಿಪಾಲ : ಇಲ್ಲಿನ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗವು ಮಾಹೆಯ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನ (ಎಂಸಿಎಚ್‌ಪಿ) ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಬಾರಿ ಈ ಸಮಾವೇಶವು ‘ಪೀಡಿಯಾಟ್ರಿಕ್ ಕಾರ್ಡಿಯಾಲಜಿ-ಬ್ಯಾಕ್ ಟು ಬೇಸಿಕ್ಸ್’ ಎಂಬ ವಿಷಯದಲ್ಲಿ ನಡೆಯಿತು.

ಕೇರಳದ ಶ್ರೀ ಚಿತ್ರಾ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿಯ ಹೃದ್ರೋಗ ವಿಭಾಗದ ಮಾಜಿ ಮುಖ್ಯಸ್ಥ ಡಾ. ಜಗನ್ಮೋಹನ್ ತಾರಕನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಂಸಿಎಚ್‌ಪಿ ಡೀನ್ ಡಾ. ಜಿ. ಅರುಣ್ ಮಯ್ಯ ಗೌರವ ಅತಿಥಿಯಾಗಿದ್ದರು.

ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಪಿ. ಸ್ವಾಗತಿಸಿದರು. ಮುಖ್ಯ ಅತಿಥಿ ಡಾ. ಜಗನ್ಮೋಹನ್ ತರಕನ್ ಅವರು ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಉಪಯುಕ್ತ ವಿಚಾರಗಳನ್ನು ಹಂಚಿಕೊಂಡರು. ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಮುಕುಂದ್ ಎ. ಪ್ರಭು ವಂದಿಸಿದರು.

ಸಮ್ಮೇಳನವು ಆಫ್‌ಲೈನ್ ಮಾದರಿಯಲ್ಲಿ ನಡೆಯಿತು. ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಖ್ಯಾತ ತಜ್ಞರು ಮಕ್ಕಳ ಹೃದ್ರೋಗಶಾಸ್ತ್ರದ ವಿವಿಧ ವಿಷಯಗಳ ಕುರಿತು ಮಾತನಾಡಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಸಂಸ್ಥೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ಅಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಪೋಸ್ಟರ್ ಮತ್ತು ಮೌಖಿಕ ಪ್ರಬಂಧ ಮಂಡನೆ ಅವಧಿಗಳನ್ನು ಏರ್ಪಡಿಸಲಾಗಿತ್ತು. 40ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಾಯಿತು. ಅತ್ಯುತ್ತಮ ಪ್ರಬಂಧ ಹಾಗೂ ಪೋಸ್ಟರ್‌ಗಳಿಗೆ ಬಹುಮಾನ ನೀಡಲಾಯಿತು.

ಡಾ. ಅರುಣ್ ಕುಸುಗಲ್ ಮತ್ತು ಡಾ. ಎಸ್.ಜಿ.ಎಸ್. ಪ್ರಭು ಅವರ ಸ್ಮರಣಾರ್ಥ ನಡೆದ ಸಂವಾದಾತ್ಮಕ ಕಾರ್ಡಿಯಾಲಜಿ ರಸಪ್ರಶ್ನೆ ಸ್ಪರ್ಧೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಯಡಿ ದ.ಕ. ಜಿಲ್ಲೆಗೆ 4 ಸಾವಿರ ಕೋಟಿ ರು. ವ್ಯಯ: ಭರತ್‌
ಮೇಕೋಡು ಪ್ರಜಾಸೇವಾ ಆಂದೋಲನ