ಅಧಿಕಾರಿಗಳೇ ಜನರಿದ್ದಲ್ಲಿ ಹೋಗಿ ಅರ್ಜಿ ಸ್ವೀಕರಿಸುವ ಆಂದೋಲನವನ್ನು ಸರ್ಕಾರ ರೂಪಿಸಿದೆ, ಇನ್ನಾದರೂ ಅಧಿಕಾರಿಗಳು ಅಸಡ್ಡೆ ಮಾಡದೆ ಅರ್ಜಿಗಳನ್ನು ವಿಲೇವಾರಿ ಮಾಡಿ, ಸಮಸ್ಯೆ ಬಗೆಹರಿಸಿದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.

ಬೈಂದೂರು: ಅಧಿಕಾರಿಗಳೇ ಜನರಿದ್ದಲ್ಲಿ ಹೋಗಿ ಅರ್ಜಿ ಸ್ವೀಕರಿಸುವ ಆಂದೋಲನವನ್ನು ಸರ್ಕಾರ ರೂಪಿಸಿದೆ, ಇನ್ನಾದರೂ ಅಧಿಕಾರಿಗಳು ಅಸಡ್ಡೆ ಮಾಡದೆ ಅರ್ಜಿಗಳನ್ನು ವಿಲೇವಾರಿ ಮಾಡಿ, ಸಮಸ್ಯೆ ಬಗೆಹರಿಸಿದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.ಹೇರೂರು ಗ್ರಾಪಂ ವ್ಯಾಪ್ತಿಯ ಮೇಕೋಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಪ್ರಜಾಸೇವಾ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅವರು, ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಸರ್ಕಾರವು ಈ ಪ್ರಜಾಸೇವಾ ಆಂದೋಲನ ಸಭೆಗಳನ್ನು ನಡೆಸುತ್ತಿದೆ ಎಂದರು.

ಪಂಚಾಯಿತಿ, ಲೋಕೋಪಯೋಗಿ, ವಿದ್ಯುತ್ ವಿಭಾಗ, ಜಲ ಜೀವನ್ ಮಿಷನ್, ವಾರಾಹಿ ಯೋಜನೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಪಟ್ಟ 54 ಅರ್ಜಿಗಳು ಸಲ್ಲಿಕೆಯಾದವು.

ಜಿಪಂ ಸಿಇಓ ಪ್ರತೀಕ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಬೈಂದೂರು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ ಪಿ ಎಸ್ ಇದ್ದರು. ಮೇಕೋಡು ಸ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಬಿ. ಶೆಟ್ಟಿ ನಿರೂಪಿಸಿದರು.