ದಕ್ಷಿಣ ಕನ್ನಡದ ‘ಆರ್ಟ್ ಆಫ್ ಲಿವಿಂಗ್’ ವತಿಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ದೀಪಾವಳಿ ಉಡುಗೊರೆಯಾಗಿ ‘ಇಂಟ್ಯೂಷನ್ ಪ್ರೊಸೆಸ್’ ಮೂರು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಶಿಕ್ಷಕರ ಸಂಯೋಜಕಿ ಶರಾವತೀ ರವಿನಾರಾಯಣ ತಿಳಿಸಿದರು.
ಮಂಗಳೂರು: ದಕ್ಷಿಣ ಕನ್ನಡದ ‘ಆರ್ಟ್ ಆಫ್ ಲಿವಿಂಗ್’ ವತಿಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ದೀಪಾವಳಿ ಉಡುಗೊರೆಯಾಗಿ ‘ಇಂಟ್ಯೂಷನ್ ಪ್ರೊಸೆಸ್’ ಮೂರು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಶಿಕ್ಷಕರ ಸಂಯೋಜಕಿ ಶರಾವತೀ ರವಿನಾರಾಯಣ ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ್ಞಾನದ ಉಡುಗೊರೆಯ ಮೂಲಕ ದೀಪಾವಳಿಯ ಸಂಭ್ರಮ ಆಚರಿಸುತ್ತಾ ದಕ್ಷಿಣ ಕನ್ನಡದ ‘ಆರ್ಟ್ ಆಫ್ ಲಿವಿಂಗ್’ ಪರಿಹಾರ ಒಂದು ವಿಶೇಷ ಸೇವಾ ಯೋಜನೆಯನ್ನು ಯಶಸ್ವಿಯಾಗಿಸಿದೆ. ಸೇವಾ ಭಾರತಿ ಮಂಗಳೂರು ನಿರ್ವಹಿಸುತ್ತಿರುವ ‘ಚೇತನ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್’ ಮತ್ತು ‘ರೋಮನ್ ಆ್ಯಂಡ್ ಕ್ಯಾಥರೀನ್ ಲೋಬೋ ಸ್ಕೂಲ್ ಫಾರ್ ದಿ ಬ್ಲೈಂಡ್’ (ದೃಷ್ಟಿಹೀನರ ಶಾಲೆ) ಸಂಸ್ಥೆಗಳ ಸುಮಾರು 60 ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ‘ಇಂಟ್ಯೂಷನ್ ಪ್ರೊಸೆಸ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ನ.17ರಿಂದ 20ರವರೆಗೆ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಅಂತಾರಾಷ್ಟ್ರೀಯ ಬೋಧಕ ರಾಜೇಂದ್ರ ಸಿಂಗ್ ಗಾಂಧಿ ಮಾರ್ಗದರ್ಶನದಲ್ಲಿ ನಡೆಯಿತು ಎಂದರು.ಸಂಸ್ಥೆಯ ಪ್ರಮುಖರಾದ ರಜನಿ ರೈ, ಅಮಿತಾ ಸುಧೀರ್, ಪ್ರಜ್ವಲ್ ಸುವರ್ಣ, ಅಮರ್ ಮಲ್ಯ ಇದ್ದರು.